ದೆಹಲಿ: 2012 ರ ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಮರಣದಂಡನೆ ರಿಹರ್ಸಲ್ ಇಂದು ತಿಹಾರ್ ಜೈಲಿನಲ್ಲಿ ನಡೆಸಲಾಯಿತು ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.
ಅಪರಾಧಿಗಳ ತೂಕಕ್ಕೆ ಅನುಗುಣವಾಗಿ ಕಲ್ಲುಗಳಿಂದ ತುಂಬಿದ ಚೀಲಗಳನ್ನು ಹಗ್ಗ ಬಿಗಿದು ಕಟ್ಟಿ ತೂಕ ತಡೆಯುತ್ತದೆಯೇ ಎಂದು ಪರೀಕ್ಷಿಸಲಾಯಿತು. ಈ ವೇಳೆ ವಧಾಕಾರನನ್ನು ಕರೆಯಲಿಲ್ಲ ಬದಲಾಗಿ ಜೈಲಿನ ಅಧಿಕಾರಿಯೊಬ್ಬರು ಅದನ್ನು ನಿರ್ವಹಿಸಿದರು.
ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಕೋರ್ಟ್ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಹಿನ್ನೆಲೆ ಇಂದು ತಿಹಾರ್ ಜೈಲಿನಲ್ಲಿ ಈ ಪರೀಕ್ಷೆ ಕೈಗೊಳ್ಳಲಾಯಿತು.