ETV Bharat / bharat

ಮದ್ಯ ಸೇವಿಸಿ ಕಳ್ಳತನಕ್ಕಿಳಿದ ಪೊಲೀಸ್ ಕಾನ್ಸ್ಟೇಬಲ್! ವಿಡಿಯೋ ವೈರಲ್​ - kannadanews

ಕಳ್ಳರನ್ನು ಹಿಡಿಯಬೇಕಾದ ಪೊಲೀಸ್‌ ಕಾನ್ಸ್ಟೇಬಲ್‌ ಫ್ಯಾನ್ಸಿ ಸ್ಟೋರ್​ನಲ್ಲಿ ಬ್ಯಾಗ್​ ಕಳವು ಮಾಡಿರುವ ಪ್ರಕರಣ ಚೆನ್ನೈ ನ ಎಂಜಿಆರ್​ ನಗರದಲ್ಲಿ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಪೊಲೀಸಪ್ಪನೇ ಕಳ್ಳನಾದ
author img

By

Published : Jun 22, 2019, 6:11 PM IST

Updated : Jun 22, 2019, 6:51 PM IST

ಚೆನ್ನೈ : ಚೆನ್ನೈನ ಎಂಜಿಆರ್​ ನಗರದ ಫ್ಯಾನ್ಸಿ ಸ್ಟೋರ್​ನ ಮಾಲೀಕ ಎಂದಿನಂತೆ ಸಿಸಿಟಿವಿ ತಪಾಸಣೆ​ ಮಾಡುವಾಗ ಅಚ್ಚರಿಯ ವಿಚಾರ ಬಯಲಾಗಿದೆ. ಇದೇ ತಿಂಗಳ 19ನೇ ತಾರೀಕಿನಂದು ತಮ್ಮ ಸ್ಟೋರ್‌ನಿಂದ ಬ್ಯಾಗ್‌​ವೊಂದನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬ್ಯಾಗ್ ಕಳ್ಳತನ ಮಾಡಿದ್ದು ಒಬ್ಬ ಪೊಲೀಸ್ ಸಿಬ್ಬಂದಿ ಅನ್ನೋದು ಹುಬ್ಬೇರಿಸುವ ವಿಚಾರ.

ಮದ್ಯ ಸೇವಿಸಿದ ಪೊಲೀಸಪ್ಪನಿಂದ ಕಳ್ಳತನ!

ವಿನೋತ್ ಎಂಬ ಪೊಲೀಸ್​ ಕಾನ್ಸ್​ಟೇಬಲ್ ಈ ಕೃತ್ಯ ಎಸಗಿದ್ದ. ಮದ್ಯದ ಮತ್ತಿನಲ್ಲಿ ಕೃತ್ಯ ಎಸಗಿರೋದಾಗಿ ಆತ ಒಪ್ಪಿಕೊಂಡಿದ್ದಾನೆ.

ಪೊಲೀಸ್ ಸಿಬ್ಬಂದಿಯ ಬ್ಯಾಗ್​ ಕಳ್ಳತನ ಪ್ರಕರಣದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:Body:

https://www.etvbharat.com/tamil/tamil-nadu/city/chennai/policeman-involved-in-theft-caught-in-cctv/tamil-nadu20190621224316847

Conclusion:
Last Updated : Jun 22, 2019, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.