ETV Bharat / bharat

ಮಳೆ ಇಲ್ದೆ 22 ಯುವಕರು, ಇಬ್ಬರು ಯುವತಿಯರ ಮದುವೆಯೇ ಆಗ್ಲಿಲ್ಲ... ಈ ಗ್ರಾಮಸ್ಥರು ಮಾಡಿದ್ದೇನು? - kannadanews

ದೇಶದ ಹಲವೆಡೆ ಬರಗಾಲದ ತೀವ್ರತೆಯಿಂದ ಜನ-ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸ್ಥಳೀಯ ಜನರು ಗೊಂಬೆಗಳ ಮದುವೆ ಮಾಡಿ ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸಿದ್ದಾರೆ.

ಬರಗಾಲ ಹಿನ್ನೆಲೆ ಮಳೆಗಾಗಿ ಬೊಂಬೆಗಳ ಮದುವೆ
author img

By

Published : Jun 22, 2019, 8:54 PM IST

ವಿದರ್ಭ: ಮಹಾರಾಷ್ಟ್ರದಲ್ಲಿ ಭೀಕರ ಬರ ಎದುರಾದ ಹಿನ್ನೆಲೆ ಇಲ್ಲಿನ ವರ್ಧಾ ಜಿಲ್ಲೆಯ ಜನ ಮಳೆಗಾಗಿ ಬೊಂಬೆಗಳ ಮದುವೆ ಮಾಡಿದ್ದಾರೆ.

ಮಹಾರಾಷ್ಟ್ರದ ವಾರ್ದಾ ಜಿಲ್ಲೆಯ ವಿದರ್ಭ ಪ್ರದೇಶವು ಬರದಿಂದ ತತ್ತರಿಸಿದೆ. ಈ ಪ್ರದೇಶದಲ್ಲಿ ವರ್ಷಕ್ಕೆ ಕನಿಷ್ಠ ಒಂದು ಮದುವೆ ಸಮಾರಂಭವಾದರೂ ಜರುಗಬೇಕು. ಆದರೆ ಮಳೆ ಬರದೇ ಬರ ಉಂಟಾಗಿದ್ದರಿಂದ ಜನರ ಆರ್ಥಿಕ ಮಟ್ಟ ಕುಸಿದಿದೆ. ಈ ಕಾರಣಕ್ಕಾಗಿಯೇ ವರ್ಧಾ ಪ್ರದೇಶದ ಸುತ್ತಮುತ್ತ ಮದುವೆ ವಯಸ್ಸಿಗೆ ಬಂದ ಸುಮಾರು 22 ಯುವಕರು ಮತ್ತು ಮದುವೆ ವಯಸ್ಸಿನ ಇಬ್ಬರು ಹುಡುಗಿಯರ ಮದುವೆಯೇ ಆಗಿಲ್ಲವಂತೆ. ಆದ ಕಾರಣ ಈ ರೀತಿ ಬೊಂಬೆಗಳ ಮದುವೆ ಮಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಬರಗಾಲ ಹಿನ್ನೆಲೆ ಮಳೆಗಾಗಿ ಬೊಂಬೆಗಳ ಮದುವೆ

ಇನ್ನು ಮನುಷ್ಯರು ಮದುವೆಯಾಗುವ ರೀತಿಯಲ್ಲಿಯೇ ಹಳದಿ ಶಾಸ್ತ್ರ ಮೊದಲಾದ ಶಾಸ್ತ್ರಗಳನ್ನು ಬೊಂಬೆಗಳಿಗೂ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ರೈತರು ಬರವನ್ನು ಎದುರಿಸುತ್ತಿದ್ದಾರೆ. ಈ ವರ್ಷ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಮದುವೆ ನಡೆಯುವವರೆಗೂ ಈ ಸಮಸ್ಯೆಗೆ ಪರಿಹಾರವಿಲ್ಲ. ಮಳೆಯಿಲ್ಲದೇ ಮದುವೆಯಾಗುವಂತಿಲ್ಲ ಎಂಬ ಪರಿಸ್ಥಿತಿ ಬೇರೆ ಎದುರಾಗಿದೆ. ಈ ಹಿನ್ನೆಲೆ ಮಳೆಗಾಗಿ ಬೊಂಬೆಗಳ ಮದುವೆ ಮೊರೆ ಹೋಗಲಾಗಿದೆ.

Intro:Body:

maharashtra dolls marriage

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.