ಜಮ್ಮು ಮತ್ತು ಕಾಶ್ಮೀರ : ಆರ್.ಎಸ್. ಪುರ ಸೆಕ್ಟರ್‌ನ ಅರ್ನಿಯಾ ಪ್ರದೇಶದ ಅಂತಾರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಶನಿವಾರ ರಾತ್ರಿ ಡ್ರೋನ್ ಕಾಣಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಿಳಿಸಿದೆ.
ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹೋಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ನಡುವೆ, ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಯ ಮೆಂಧರ್ ವಲಯದಲ್ಲಿ ಡ್ರೋನ್ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 20 ರಂದೂ ಕೂಡ ಪಾಕಿಸ್ತಾನ ಕಡೆಯಿಂದ ಬಂದ ಎರಡು ಡ್ರೋನ್ಗಳು ಸಾಂಬಾ ವಲಯದಲ್ಲಿ ಕಾಣಿಸಿಕೊಂಡಿದ್ದವು. ಗಡಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಬಳಿಕ ಅವು ಅಲ್ಲಿಂದ ಹಿಂದಿರುಗಿವೆ.