ಹೈದರಬಾದ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಬಾಡಿ ಸೂಟ್ ಅಭಿವೃದ್ಧಿಪಡಿಸಿದ್ದು, ಇದು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಲಿದೆ.
ಈ ಬಾಡಿ ಸೂಟ್ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತಾ ಕಾರ್ಮಿಕರನ್ನು ರಕ್ಷಿಸುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.
"ರೇಡಿಯೊಲಾಜಿಕಲ್ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಸ್ಥಳಾಂತರಿಸಲು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಾಗಿ ಈ ಬಾಡಿ ಸೂಟನ್ನು ಅಭಿವೃದ್ಧಿಪಡಿಸಲಾಗತ್ತು. ಈಗ ಇದನ್ನು ಕೋವಿಡ್-19 ಚಿಕಿತ್ಸೆಗಾಗಿ ಪರಿವರ್ತಿಸಲಾಗಿದೆ" ಎಂದು ಡಿಆರ್‌ಡಿಒ ಹೇಳಿಕೆ ನೀಡಿದೆ.
"ಇದು ತೊಳೆಯಬಹದಾದ ಸೂಟ್ ಆಗಿದ್ದು, ಹಲವಾರು ಪರೀಕ್ಷೆಗಳಿಗೆ ಒಳಪಟ್ಟು, ಉಪಯೋಗಕ್ಕೆ ಸೂಕ್ತವೆಂದು ತಿಳಿದು ಬಂದಿದೆ" ಎಂದು ಸಂಸ್ಥೆ ಹೇಳಿದೆ.
ಪ್ರತಿ ಸೂಟ್ನ ಬೆಲೆ 7,000 ರೂ. ಆಗಿದೆ. ಕೋಲ್ಕತ್ತಾದ ಫ್ರಾಂಟಿಯರ್ ಪ್ರೊಟೆಕ್ಟಿವ್ ವೇರ್ ಪ್ರೈವೇಟ್ ಲಿಮಿಟೆಡ್ ಮತ್ತು ಮುಂಬೈನ ಮೆಡಿಕಿಟ್ ಪ್ರೈವೇಟ್ ಲಿಮಿಟೆಡ್ ದಿನಕ್ಕೆ 10,000 ಸೂಟ್‌ಗಳನ್ನು ಉತ್ಪಾದಿಸುತ್ತಿವೆ.
ಬಾಡಿ ಸೂಟ್ ಮಾತ್ರವಲ್ಲದೇ, ವೆಂಟಿಲೇಟರ್, ಎನ್99 ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಕೂಡಾ ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.