ETV Bharat / bharat

ಸಿಎಎ ಕಾಯ್ದೆ ವಿರುದ್ಧ ಪ್ರಚೋದನಾಕಾರಿ ಹೇಳಿಕೆ...  ಡಾ. ಕಫೀಲ್ ಖಾನ್ ಅಂದರ್..!

author img

By

Published : Jan 30, 2020, 6:18 AM IST

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ ಆರೋಪದ ಮೇಲೆ  ಡಾ. ಕಫೀಲ್ ಖಾನ್ ಅವರನ್ನು ಮುಂಬೈನ ಸಹಾರ ಪೊಲೀಸ್​ ಠಾಣೆಯಲ್ಲಿ ಬಂಧಿಸಿಡಲಾಗಿದೆ.

Dr Kafeel Khan is under police custody at Sahar police station in Mumbai
ಡಾ. ಕಫೀಲ್ ಖಾನ್ ಅಂದರ್

ಮಹಾರಾಷ್ಟ್ರ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಆರ್​ಡಿ ಮೆಡಿಕಲ್​ ಕಾಲೇಜಿನಿಂದ ಅಮಾನತುಗೊಂಡಿದ್ದ ಡಾ. ಕಾಫೀಲ್ ಖಾನ್ ಅವರನ್ನು ಮುಂಬೈನ ಸಹರಾ ಪೊಲೀಸ್​ ಬಂಧಿಸಿದ್ದಾರೆ.

ಉತ್ತರಪ್ರದೇಶದ ವಿಶೇಷ ಕಾರ್ಯಪಡೆ ಮುಂಬೈಯಲ್ಲಿ ಅವರನ್ನು ಬಂಧಿಸಿದ್ದು ಇದೀಗ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದ್ದಾರೆ.

ಡಿಸೆಂಬರ್​ 12 ರಂದು ಅಲಿಘರ್​ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಡಾ. ಕಫೀಲ್ ಖಾನ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅಲ್ಲದೆ ಗುರುವಾರ ಮುಂಬೈನ ಭಾಗ್​ನಲ್ಲಿ ನಡೆಯಲಿದ್ದ ಪ್ರತಿಭಟನೆಯಲ್ಲೂ ಭಾಗವಹಿಸಿಲಿದ್ದರು.

ಕಾಫಿಲ್​ ಖಾನ್ ಬಾಬಾ ರಾಘವ್​ ದಾಸ್​ ಮೆಡಿಕಲ್​ ಕಾಲೇಜಿನಲ್ಲಿ ನೊಡಲ್​ ಅಧಿಕಾರಿಯಾಗಿದ್ದರು. 2017ರಲ್ಲಿ ಎರಡು ದಿನಗಳ ಅಂತರದಲ್ಲಿ 30 ಮಕ್ಕಳು ಮೃತಪಟ್ಟಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಂಧಿಸಲಾಗಿತ್ತು. ಆದರೆ ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.