ನವದೆಹಲಿ: ಖಾರೀಫ್ ಬೆಳೆಗಳಿಗೆ ಸರ್ಕಾರ ಹೊಸ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‌ಪಿ) ಘೋಷಿಸಿದ ಬಳಿಕ ಲಾಕ್‌ಡೌನ್, ಮಿಡತೆ ದಾಳಿ ಮತ್ತು ಚಂಡಮಾರುತದಿಂದಾಗಿ ಬಿಕ್ಕಟ್ಟು ಎದುರಿಸುತ್ತಿರುವ ರೈತರ ಎಲ್ಲ ಆಶಯಗಳು ನಾಶವಾಗಿವೆ ಎಂದು ಕಾಂಗ್ರೆಸ್ ಹೇಳಿದೆ.
"ಸರ್ಕಾರ ರೈತರ ಬಗ್ಗೆ ಈ ರೀತಿಯ ಮನೋಭಾವ ತೋರಿದರೆ, 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಅವರ ಭರವಸೆ ವ್ಯರ್ಥವಾಗಿ ಪರಿಣಮಿಸಲಿದೆ" ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದರು.
ದುರದೃಷ್ಟವಶಾತ್ ರೈತರ ಎಲ್ಲ ಭರವಸೆಯನ್ನು ಕೇಂದ್ರವು ನಾಶಪಡಿಸಿದೆ. ರೈತರು ಎದುರಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದರು.