ETV Bharat / bharat

ಮರುಕಳಿಸಲಿವೆ ದೂರದರ್ಶನದ ಮಧುರಾತಿ ಮಧುರ ನೆನಪುಗಳು: ಚಾಣಕ್ಯ, ರಾಮಾಯಣ... ಇನ್ನೂ ಏನೇನು? - ಸೀರಿಯಲ್

ದೂರದರ್ಶನದ ಸುವರ್ಣ ಯುಗವಾಗಿದ್ದ 80ರ ದಶಕದ ಅತಿ ಜನಪ್ರಿಯ ಸೀರಿಯಲ್​ಗಳು ಈಗ ಮತ್ತೊಮ್ಮೆ ಪ್ರಸಾರವಾಗುತ್ತಿದ್ದು, ಅಂದಿನ ಮಧುರಾತಿ ಮಧುರ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಲಭಿಸಿದೆ.

Doordarshan brings back memories
Doordarshan brings back memories
author img

By

Published : Mar 31, 2020, 2:08 PM IST

ಹೊಸದಿಲ್ಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತವರಿಗಾಗಿ ದೂರದರ್ಶನ ಭರಪೂರ ಮನರಂಜನೆಯನ್ನು ಹೊತ್ತು ತರಲು ಸಜ್ಜಾಗಿದೆ. 80 ಹಾಗೂ 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್​ಗಳನ್ನು ಈಗ ಮತ್ತೊಮ್ಮೆ ನೋಡುವ ಭಾಗ್ಯ ನಿಮ್ಮದಾಗಿದೆ. ದೂರದರ್ಶನದ ಸುವರ್ಣ ಯುಗವಾಗಿದ್ದ 80ರ ದಶಕದ ಅತಿ ಜನಪ್ರಿಯ ಸೀರಿಯಲ್​ಗಳು ಈಗ ಮತ್ತೊಮ್ಮೆ ಪ್ರಸಾರವಾಗುತ್ತಿದ್ದು, ಅಂದಿನ ಮಧುರಾತಿ ಮಧುರ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಲಭಿಸಿದೆ.

ದೂರದರ್ಶನದಲ್ಲಿ ಮರುಪ್ರಸಾರ ಕಾಣಲಿರುವ ಜನಪ್ರಿಯ ಕಾರ್ಯಕ್ರಮಗಳ ಪಟ್ಟಿ:

1. ಚಾಣಕ್ಯ: 47 ಎಪಿಸೋಡ್, ನಿರ್ದೇಶನ: ಚಂದ್ರಪ್ರಕಾಶ ದ್ವಿವೇದಿ, ಡಿಡಿ ಭಾರತಿಯಲ್ಲಿ ಏ.1 ರಿಂದ ಮಧ್ಯಾಹ್ನದ ಸ್ಲಾಟ್​ನಲ್ಲಿ ಪ್ರಸಾರವಾಗಲಿದೆ.

2. ಉಪನಿಷದ್ ಗಂಗಾ: 52 ಎಪಿಸೋಡ್, ನಿರ್ಮಾಣ: ಚಿನ್ಮಯ ಮಿಷನ್ ಟ್ರಸ್ಟ್, ನಿರ್ದೇಶನ: ಚಂದ್ರಪ್ರಕಾಶ ದ್ವಿವೇದಿ, ಡಿಡಿ ಭಾರತಿಯಲ್ಲಿ ಏ.1 ರಿಂದ ಮಧ್ಯಾಹ್ನದ ಸ್ಲಾಟ್​ನಲ್ಲಿ ಪ್ರಸಾರವಾಗಲಿದೆ.

3. ಶಕ್ತಿಮಾನ್: ಮುಕೇಶ್​ ಖನ್ನಾ ನಟನೆಯ ಈ ಸೀರಿಯಲ್​ ಏ.1 ರಿಂದ ಡಿಡಿ ನ್ಯಾಷನಲ್​ನಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.

4. ಶ್ರೀಮಾನ್ ಶ್ರೀಮತಿ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಈ ಸೀರಿಯಲ್​ನ ನಿರ್ಮಾಪಕರು ಮಾರ್ಕಂಡ್​ ಅಧಿಕಾರಿ. ಡಿಡಿ ನ್ಯಾಷನಲ್​ನಲ್ಲಿ ಏ.1 ರಿಂದ ಮಧ್ಯಾಹ್ನ 2 ಕ್ಕೆ ಪ್ರಸಾರವಾಗಲಿದೆ.

5. ಕೃಷ್ಣಾ ಕಲಿ: ಡಿಡಿ ನ್ಯಾಷನಲ್​ನಲ್ಲಿ ರಾತ್ರಿ 8.30 ಕ್ಕೆ, ಒಟ್ಟು 18 ಎಪಿಸೋಡ್​.

ಈಗಾಗಲೇ ಮಾ.28 ರಿಂದ ಮರುಪ್ರಸಾರ ಆರಂಭವಾಗಿರುವ ಸೀರಿಯಲ್​ಗಳು ಇಂತಿವೆ:

1. ರಾಮಾಯಣ: ರಾಮಾನಂದ ಸಾಗರ್ ನಿರ್ದೇಶನದ ರಾಮಾಯಣ ಸೀರಿಯಲ್​ನ ತಲಾ 35 ನಿಮಿಷದ 78 ಎಪಿಸೋಡ್, ತಲಾ 30 ನಿಮಿಷದ 30 ಎಪಿಸೋಡ್​ ಡಿಡಿ ನ್ಯಾಷನಲ್​​ನಲ್ಲಿ ಪ್ರತಿದಿನ ಬೆಳಗ್ಗೆ 9ಕ್ಕೆ ಹಾಗೂ ರಾತ್ರಿ 9ಕ್ಕೆ ಪ್ರಸಾರ ಆರಂಭವಾಗಿದೆ.

2. ಮಹಾಭಾರತ: ತಲಾ 45 ನಿಮಿಷದ 97 ಎಪಿಸೋಡ್​. ಮಧ್ಯಾಹ್ನ 12 ಹಾಗೂ ಸಂಜೆ 7ಕ್ಕೆ

3. ಬ್ಯೋಮಕೇಶ್ ಬಕ್ಷಿ: ಬೆಳಗ್ಗೆ 11ಕ್ಕೆ, 57 ಎಪಿಸೋಡ್​

4. ಸರ್ಕಸ್: ಶಾರುಖ್​ ಖಾನ್ ಅಭಿನಯದ ಈ ಸೀರಿಯಲ್​ 19 ಎಪಿಸೋಡ್​ ಹೊಂದಿದ್ದು, ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ.

5. ಹಮ್​ ಹೈ ನಾ: 60 ಎಪಿಸೋಡ್​ಗಳ ಈ ಸೀರಿಯಲ್​ ಡಿಡಿ ನ್ಯಾಷನಲ್​ನಲ್ಲಿ ರಾತ್ರಿ 10 ಕ್ಕೆ ಪ್ರಸಾರವಾಗುತ್ತಿದೆ.

6. ತೂ ತೋತಾ ಮೈ ಮೈನಾ: 26 ಎಪಿಸೋಡ್​ಗಳ ಈ ಸೀರಿಯಲ್​ ಡಿಡಿ ನ್ಯಾಷನಲ್​ನಲ್ಲಿ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿದೆ.

ಡಿಡಿ ಚಾನೆಲ್​ ಪ್ರಸಾರ ಕಡ್ಡಾಯ: ಎಲ್ಲ ಡಿಟಿಎಚ್​/ ಕೇಬಲ್​ ಆಪರೇಟರ್​ಗಳು ಎಲ್ಲ ದೂರದರ್ಶನ ಚಾನೆಲ್ ಹಾಗೂ ಲೋಕಸಭಾ, ರಾಜ್ಯಸಭಾ ಚಾನೆಲ್​ಗಳನ್ನು ಪ್ರಸಾರ ಮಾಡುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ನೀವೊಂದು ವೇಳೆ ದೂರದರ್ಶನ ಚಾನೆಲ್​ ನೋಡಲು ಸಮಸ್ಯೆ ಅನುಭವಿಸುತ್ತಿದ್ದಲ್ಲಿ ಅಥವಾ ಇನ್ನಾವುದೇ ದೂರು ಇದ್ದಲ್ಲಿ ಹತ್ತಿರದ ದೂರದರ್ಶನ ಕೇಂದ್ರದ ಸ್ಟೇಷನ್ ಹೆಡ್​ ಅವರಿಗೆ ಅಥವಾ ddpb.inform@gmail.com ಇಲ್ಲಿಗೆ ಇಮೇಲ್​ ಮೂಲಕ ದೂರು ನೀಡಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.