ETV Bharat / bharat

ಕೊರೊನಾ ವೈರಸ್​ ಪರೀಕ್ಷೆ ಉಚಿತವಾಗಿ ನಡೆಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ - ಸುಪ್ರೀಂಕೋರ್ಟ್​ ಸೂಚನೆ

ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಕೇಂದ್ರ ಸರ್ಕಾರ ಕೆಲವೊಂದು ಖಾಸಗಿ ಲ್ಯಾಬ್​ಗಳಲ್ಲೂ ಇದರ ಪರೀಕ್ಷೆ ಮಾಡಲು ಅನುಮತಿ ನೀಡಿದೆ. ಅಲ್ಲಿ ಪರೀಕ್ಷೆಗಾಗಿ ಹೆಚ್ಚಿನ ಹಣ ಪಡೆದುಕೊಳ್ಳುತ್ತಿರುವ ಕಾರಣ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

Supreme Court
Supreme Court
author img

By

Published : Apr 8, 2020, 1:36 PM IST

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಸರ್ಕಾರಿ ಲ್ಯಾಬ್​ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆ ಲ್ಯಾಬ್​ಗಳಲ್ಲಿ ಕೊರೊನಾ ವೈರಸ್​ ಪರೀಕ್ಷೆ ನಡೆಸಲಾಗುತ್ತಿದೆ.

ಕೊರೊನಾ ವೈರಸ್​ ಪರೀಕ್ಷೆಗಾಗಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 4,500 ರೂ ಹಣ ಪಡೆದುಕೊಳ್ಳಲಾಗುತ್ತಿದ್ದು, ಇದನ್ನ ಸರ್ಕಾರವೇ ಭರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ದೇಶದ 136 ಸರ್ಕಾರಿ ಹಾಗೂ 59 ಖಾಸಗಿ ಲ್ಯಾಬ್​ಗಳಲ್ಲಿ ಇದರ ಟೆಸ್ಟ್​ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಸೋಂಕಿತರಿಂದ ಹಣ ಪಡೆದುಕೊಳ್ಳಬಾರದು ಎಂದಿದೆ. ಇದೇ ವೇಳೆ ಕೊರೊನಾ ವೈರಸ್​ ಹೊಡೆದೊಡಿಸಲು ವೈದ್ಯರು ಸೈನಿಕರಂತೆ ಹೋರಾಟ ನಡೆಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರಗಳು ಅವರ ವೇತನ ಕಡಿತಗೊಳಸಬಾರದು ಎಂದು ಸೂಚನೆ ನೀಡಿದೆ. ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿದ್ದು, 149 ಮಂದಿ ಸಾವನ್ನಪ್ಪಿ, 401 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.