ETV Bharat / bharat

ವಿಶೇಷ ಅಂಕಣ: ವಾಣಿಜ್ಯ ಒಪ್ಪಂದ: ಇದೆಯೋ ಇಲ್ಲವೋ?

ಡೊನಾಲ್ಡ್‌ ಟ್ರಂಪ್‌ ಅವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯು ಇನ್ನಷ್ಟು ಬಲಗೊಳ್ಳಲಿದೆ.

modi-trump
ಮೋದಿ-ಡೊನಾಲ್ಡ್​ ಟ್ರಂಪ್​
author img

By

Published : Feb 13, 2020, 7:44 PM IST

ಅಮೆರಿಕದ ಅಧ್ಯಕ್ಷರ ಭೇಟಿಯನ್ನು ಆಯೋಜಿಸಲು ಭಾರತ ಸಿದ್ಧವಾಗುತ್ತಿದೆ. ಡೊನಾಲ್ಡ್‌ ಟ್ರಂಪ್‌ ಅವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯು ಇನ್ನಷ್ಟು ಬಲಗೊಳ್ಳಲಿದೆ. ವಾಣಿಜ್ಯ, ರಕ್ಷಣೆ ಮತ್ತು ಬಾಹ್ಯಾಕಾಶವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅನೇಕ ಮಹತ್ವದ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆಯಿದೆ. ಈ ಭೇಟಿಯ ಹಿನ್ನೆಲೆಯಲ್ಲಿ, ಹಲವಾರು ಅಂಶಗಳ ಕುರಿತಂತೆ ದೇಶದ ವಿವಿಧೆಡೆ ಚರ್ಚೆಗಳೂ ನಡೆದಿವೆ.

ಆದರೆ, ಎರಡೂ ದೇಶಗಳ ನಡುವೆ ನಡೆಯಬಹುದಾಗಿರುವ ವಾಣಿಜ್ಯ ಒಪ್ಪಂದಗಳ ಮೇಲೆಯೇ ಎಲ್ಲರ ಗಮನ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದಗಳನ್ನು ಈ ಭೇಟಿಯ ಸಂದರ್ಭದಲ್ಲಿ ಅಂತಿಮಗೊಳಿಸಲಾಗುವುದು ಎಂಬ ಊಹಾಪೋಹಗಳು ಸಹ ಕೇಳಿಬರುತ್ತಿವೆ. ಒಂದು ವೇಳೆ ಸರಿಯಾದ ಒಪ್ಪಂದವೇ ಆಗಿದ್ದರೆ, ತಮ್ಮ ಉದ್ದೇಶಿತ ಭೇಟಿಯ ಸಂದರ್ಭದಲ್ಲಿಯೇ ಭಾರತದೊಂದಿಗೆ ವಾಣಿಜ್ಯ ಒಪ್ಪಂದ ಸಾಧ್ಯವಿದೆ ಎಂದು ಟ್ರಂಪ್‌ ಕೂಡಾ ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಈಗಾಗಲೇ ವಿಸ್ತೃತ ಮಾತುಕತೆಗಳೂ ನಡೆಯುತ್ತಿವೆ. ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳನ್ನು ಅಧಿಕ ಸುಂಕ ಪಟ್ಟಿಯಿಂದ ಹೊರಗಿಡಲು ಹಾಗೂ ಆದ್ಯತಾ ಸುಂಕ ವ್ಯವಸ್ಥೆಯನ್ನು ಆದ್ಯತೆಗಳ ಸಾಮಾನ್ಯೀಕರಣ ವ್ಯವಸ್ಥೆ (ಜನರಲೈಸ್ಡ್‌ ಸಿಸ್ಟಂ ಆಫ್‌ ಪ್ರಿಫರೆನ್ಸಿಸ್‌ ಜಿಎಸ್‌ಪಿ) ಮೂಲಕ ಮರುಸ್ಥಾಪಿಸಲು ಭಾರತ ಆಗ್ರಹಿಸುತ್ತಿದೆ. ಅದೇ ರೀತಿ ಕೃಷಿ, ವಾಹನ ಮತ್ತು ಇಂಜಿನಿಯರಿಂಗ್‌ ಉತ್ಪನ್ನಗಳ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ಕುರಿತು ಭಾರತ ಬಿಗಿ ಧೋರಣೆ ತಳೆದಿದೆ. ಇನ್ನೊಂದೆಡೆ, ಹೈನು ಉತ್ಪನ್ನಗಳು ಹಾಗೂ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಇನ್‌ಫರ್ಮೇಶನ್‌ ಅಂಡ್‌ ಕಮ್ಯುನಿಕೇಶನ್‌ ಟೆಕ್ನಾಲಜಿ ಐಸಿಟಿ) ಉತ್ಪನ್ನಗಳ ಆಮದು ಸುಂಕವನ್ನು ತಗ್ಗಿಸಲು ಅಮೆರಿಕ ಒತ್ತಾಯಿಸುತ್ತಿದೆ.

ಭಾರತ ಸರಕಾರದ ಜೊತೆಗಿನ ಸಮಗ್ರ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆಯ (ಇಂಟಿಗ್ರೇಟೆಡ್‌ ಏರ್‌ ಡಿಫೆನ್ಸ್‌ ವೆಪನ್‌ ಸಿಸ್ಟಂ ಐಎಡಿಡಬ್ಲ್ಯೂಎಸ್)‌ ಮಾರಾಟ ಸಾಧ್ಯತೆಯನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಇತ್ತೀಚೆಗಷ್ಟೇ ಮುಕ್ತಗೊಳಿಸಿದೆ. ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 186 ಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಈ ಒಪ್ಪಂದಕ್ಕೆ ಅಮೆರಿಕವು ಸಹಿ ಹಾಕುವ ಸಾಧ್ಯತೆಗಳಿವೆ. ಅಮೆರಿಕದ ಸಂಸ್ಥೆಯ ಮೂಲಕ 24 ಎಂಎಚ್‌ 60 ರೋಮಿಯೊ ಸೀಹಾಕ್‌ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಹಾಗೂ ಲಾಕ್‌ಹೀಡ್‌ ಮಾರ್ಟಿನ್‌ ಒಪ್ಪಂದ ಕೂಡಾ ಈ ಸಂದರ್ಭದಲ್ಲಿ ಅಂತಿಮವಾಗುವ ಸಾಧ್ಯತೆಗಳಿವೆ. ಈ ಒಪ್ಪಂದದ ಮೌಲ್ಯ 250 ಕೋಟಿ ಅಮೆರಿಕನ್‌ ಡಾಲರ್‌ನಷ್ಟಿದೆ. ಅಮೆರಿಕದ ಮತ್ತೊಂದು ಮಹತ್ವದ ರಕ್ಷಣಾ ಕಂಪನಿ ಬೋಯಿಂಗ್‌, ತನ್ನ ಎಫ್‌-15ಎಎಕ್ಸ್‌ ಈಗಲ್‌ ವಿಮಾನವನ್ನು ಭಾರತೀಯ ವಾಯುಪಡೆಗೆ ಮಾರಾಟ ಮಾಡುವ ಯೋಜನೆಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ರಫ್ತು ಅನುಮತಿ ನೀಡುವಂತೆ ಬೋಯಿಂಗ್‌ ಕಂಪನಿಯು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಇತ್ತೀಚೆಗಷ್ಟೇ ಮನವಿ ಮಾಡಿಕೊಂಡಿತ್ತು. ಈ ಒಪ್ಪಂದ ಕೂಡಾ ಟ್ರಂಪ್‌ ಭೇಟಿಯ ಸಂದರ್ಭದಲ್ಲಿ ಚರ್ಚೆಗೆ ಒಳಪಡುವ ಸಾಧ್ಯತೆಯಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದಕ್ಕೆ ಅಮೆರಿಕ ಕಾಂಗ್ರೆಸ್‌ನ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪಾಕಿಸ್ತಾನದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಭಾರತದ ನಿರ್ಧಾರಕ್ಕೆ ಬೆಂಬಲ ಇದೆ ಎಂಬುದನ್ನು ಟ್ರಂಪ್‌ ಅವರು ತಮ್ಮ ಉದ್ದೇಶಿತ ಭೇಟಿಯ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ. ಈ ಹಿಂದೆ ಕಾಶ್ಮೀರ ವಿವಾದ ಇತ್ಯರ್ಥಗೊಳಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಟ್ರಂಪ್‌ ಘೋಷಿಸಿದ್ದರು. ಆದರೆ, ಇದು ಉಭಯ ದೇಶಗಳ ನಡುವಿನ ವಿಷಯ ಎಂದು ಭಾರತ ಸ್ಪಷ್ಟಪಡಿಸಿದ ನಂತರ ಅವರು ಮತ್ತೆ ಆ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ.

2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಹೊಸ್ತಿಲಲ್ಲಿವೆ. ಈ ಸಲವೂ ಟ್ರಂಪ್‌ ಅವರು ಅಧ್ಯಕ್ಷರಾಗಲು ಬಯಸಿ ಸ್ಪರ್ಧೆಗೆ ಇಳಿದಿದ್ದಾರೆ. ಈ ಭೇಟಿಯ ಮೂಲಕ ಭಾರತೀಯ ಅಮೆರಿಕನ್ನರ ಮತಗಳನ್ನು ಗಳಿಸಲು ಟ್ರಂಪ್‌ ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಹೀಗಾಗಿ, ಅವರ ಉದ್ದೇಶಿತ ಭೇಟಿ ಸಂದರ್ಭದಲ್ಲಿ ಏಷ್ಯಾದ ರಾಜಕೀಯ ವಿಷಯವೂ ಚರ್ಚೆಗೆ ಒಳಪಡುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.