ETV Bharat / bharat

ಯುಎಸ್​​​ನಿಂದ ಕೋಳಿ ಆಮದು ಸುಂಕ ಕಡಿತ... ಭಾರತೀಯ ಕೋಳಿ ಸಾಕಣೆದಾರರಲ್ಲಿ ಆತಂಕ! - ದೇಶೀಯ ಕೋಳಿ ಸಾಕಾಣಿಕೆ

ಕೋಳಿಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವಂತೆ ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಒತ್ತಡದಿಂದ ದೇಶೀಯ ಕೋಳಿ ಸಾಕಾಣಿಕೆ ಸಮುದಾಯ ವಲಯಗಳು ಆತಂಕಗೊಂಡಿವೆ.

domestic industry
ಕೋಳಿ ಸಾಕಾಣಿಕೆ
author img

By

Published : Nov 29, 2019, 4:44 PM IST

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಕೋಳಿ ಮೇಲಿನ ಆಮದು ಸುಂಕವನ್ನು ಉಲ್ಲೇಖಿಸಿದ್ದರು. ಮುಂಬರುವ ಯುಎಸ್ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಟ್ರಂಪ್ ಈ ಸಾಧನ ಬಳಸುತ್ತಿದ್ದಾರೆ. ಆಮದು ಸುಂಕವನ್ನು ಕಡಿಮೆ ಮಾಡಿದರೆ ಅದು ಭಾರತೀಯ ಕೋಳಿ ಉದ್ಯಮಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ ಎಂದು ಕೈಗಾರಿಕಾ ಮೂಲಗಳು ಆತಂಕ ವ್ಯಕ್ತಪಡಿಸುತ್ತಿವೆ. ಭಾರತೀಯ ಕೋಳಿ ಸಾಕಣಿಕೆದಾರರು ಟ್ರಂಪ್ರ ಕಾರ್ಯತಂತ್ರಗಳಿಗೆ ಸೋಲದಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ.

ಜಾಗತಿಕ ಮಟ್ಟದಲ್ಲಿ ಕೋಳಿ ಮಾಂಸ ಸೇವನೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಭಾರತೀಯ ಕೋಳಿ ಉದ್ಯಮವು ಚೇತರಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ಯುಎಸ್​ನಿಂದ ಕೋಳಿಯ ಕಾಲನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಮಾಹಿತಿ ದೇಶೀಯ ಕೋಳಿ ಸಾಕಣಿಕೆದಾರ ಸಮುದಾಯಗಳಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಅದು ಸಂಭವಿಸಿದಲ್ಲಿ ಕೋಳಿ ಮಾಂಸದ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ದೇಶೀಯ ಉದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಕುಸಿತವನ್ನು ಕಾಣತೊಡಗುತ್ತದೆ. ಪ್ರಸ್ತುತ ಕೋಳಿ ಆಮದಿಗೆ ಭಾರತ 100% ತೆರಿಗೆ ವಿಧಿಸುತ್ತಿದ್ದು ಇದನ್ನು 30% ಕ್ಕೆ ಇಳಿಸಬೇಕೆಂದು ಯುಎಸ್ ಬಯಸಿದೆ. ಈ ಹಿಂದೆ ಕೋಳಿ ಉದ್ಯಮವು ಮಾಂಸ ಮತ್ತು ಕೋಳಿಗಳ ಬೆಲೆ ಕುಸಿತದಿಂದ ಬಳಲಿತ್ತು. ಮಾಂಸ ಸೇವನೆಯ ಇತ್ತೀಚಿನ ಹೆಚ್ಚಳವು ಕೋಳಿ ಸಾಕಣೆದಾರರು, ಮೆಕ್ಕೆಜೋಳ ಮತ್ತು ಸೋಯಾಬೀನ್ ರೈತರು ತಮ್ಮ ವ್ಯವಹಾರದ ಫಲಿತಾಂಶಗಳ ಬಗ್ಗೆ ಭರವಸೆಯಿಡಲು ಕಾರಣವಾಗಿದೆ. ಈ ಹಂತದಲ್ಲಿ ವಿದೇಶಿ ಉತ್ಪನ್ನಗಳಿಗೆ ಬಾಗಿಲು ತೆರೆಯುವುದು ಅಪಾಯಕಾರಿ ಎಂದು ಉದ್ಯಮದ ಮೂಲಗಳು ಎಚ್ಚರಿಸಿವೆ.

ಯುಎಸ್​​ನಿಂದ ಕೋಳಿ ಕಾಲುಗಳನ್ನು ಆಮದು ಮಾಡಿಕೊಳ್ಳುವುದರ ಹಿಂದೆ ಆಸಕ್ತಿದಾಯಕ ಕಾರಣಗಳಿವೆ. ಯುಎಸ್​ನಲ್ಲಿ ಸಾರ್ವಜನಿಕರು ಕೊಬ್ಬಿನಾಂಶ ಕಡಿಮೆ ಇರುವ ಕೋಳಿಯ ಪೈ (ಎದೆ ಭಾಗ) ತಿನ್ನಲು ಬಯಸುತ್ತಾರೆ ಮತ್ತು ಕೋಳಿ ಕಾಲುಗಳನ್ನು ತಿನ್ನಲು ಅಷ್ಟಾಗಿ ಆದ್ಯತೆ ನೀಡುವುದಿಲ್ಲ. ಕೋಳಿಯ ಪೈ (ಎದೆ) ಭಾಗಕ್ಕೆ ಆಹಾರಕ್ಕಿಂತ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕೋಳಿ ಕಾಲುಗಳಲ್ಲಿನ ಕೊಬ್ಬಿನ ಪ್ರಮಾಣವು ಎದೆಭಾಗಕ್ಕಿಂತ ಹೆಚ್ಚಾಗಿರುತ್ತದೆ ಎಂದು ಭಾವಿಸಲಾಗಿದೆ. ಆದ್ದರಿಂದಲೇ ಕಾಲಿನ ಬದಲು ಎದೆಯ ಆಯ್ಕೆ ಮಾಡುತ್ತಾರೆ! ಅಲ್ಲದೆ ಅಮೆರಿಕನ್ನರು ಆಹಾರವನ್ನು ತಿನ್ನುವಾಗ ಚಾಕು ಮತ್ತು ಪೋರ್ಕ್​​ಗಳನ್ನ ಬಳಸುತ್ತಾರೆ. ಅವರ ಹಿಂಜರಿಕೆಗೆ ಮತ್ತೊಂದು ಕಾರಣವೆಂದರೆ, ಮೇಜಿನ ಮೇಲೆ ಚಿಕನ್ ಲೆಗ್ ತಿನ್ನುವಾಗ ಅದು ಜಾರುವುದರಿಂದ ತಿನ್ನಲು ಮುಜುಗರವಾಗುತ್ತದೆ. ಆದ್ದರಿಂದ ಅಮೆರಿಕಾದಾದ್ಯಂತ ಕೋಳಿ ಕಾಲುಗಳಿಗೆ ಕಡಿಮೆ ಬೇಡಿಕೆ ಇದೆ. ಅವುಗಳನ್ನು ಶೈತ್ಯಗಾರದ ಕೋಣೆಗಳಲ್ಲಿ ಸುಮ್ಮನೆ ಸಂಗ್ರಹಿಸಲಾಗಿದೆ.

ಅಮೆರಿಕ ಈ ಹಿಂದೆ ಕೋಳಿ ಕಾಲುಗಳನ್ನು ತೃತೀಯ ಜಗತ್ತಿನ ರಾಷ್ಟ್ರಗಳು, ಯುರೋಪಿಯನ್ ಯೂನಿಯನ್ ಮತ್ತು ಚೀನಾಕ್ಕೆ ರಫ್ತು ಮಾಡಿದೆ. ಅಂತಿಮವಾಗಿ ಆಯಾ ದೇಶಗಳ ಮಾರುಕಟ್ಟೆಗಳು ಮಾಂಸ ಉತ್ಪನ್ನಗಳಲ್ಲಿ ಸ್ವಾವಲಂಬಿಯಾದವು. ಯುಎಸ್ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ವಾಣಿಜ್ಯ ಪೈಪೋಟಿ ಮತ್ತು ಚೀನಾದಲ್ಲಿ ಕೋಳಿ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಯುಎಸ್ ಗಮನವು ಈಗ ಭಾರತದತ್ತ ಸಾಗಿದೆ. 135 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತೀಯ ಮಾರುಕಟ್ಟೆ ಅಮೆರಿಕಕ್ಕೆ ದೊಡ್ಡ ಭರವಸೆಯಾಗಿದೆ. ಭಾರತೀಯರು ಕೋಳಿ ತೊಡೆಗಳಿಗೆ (ಕೋಳಿ ಕಾಲುಗಳು ಅಥವಾ ಡ್ರಮ್ ಸ್ಟಿಕ್) ಆದ್ಯತೆ ನೀಡುತ್ತಾರೆ, ಇದು ಯುಎಸ್ ಕೋಳಿ ಉದ್ಯಮಕ್ಕೆ ತಮ್ಮ ಎಲ್ಲಾ ಉತ್ಪನ್ನಗಳನ್ನು ನಮ್ಮ ಮೇಲೆ ಹೇರಲು ಸಮರ್ಥ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಕೋಳಿ ಮಾಂಸವು ಅಮೆರಿಕದಲ್ಲಿ ಅಗ್ಗವಾಗಿರುವುದರಿಂದ ಈ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರುವ ಮೂಲಕ ಮಾರುಕಟ್ಟೆ ಮುಳುಗಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಕೋಳಿ ಸಾಕಣಿಕಾ ವಲಯವು ಭಾರತದ ವಾರ್ಷಿಕ ಒಟ್ಟು ದೇಶೀಯ ಉತ್ಪನ್ನದ ಒಂದು ಟ್ರಿಲಿಯನ್ ರೂಪಾಯಿಗಳಷ್ಟು ಪಾಲು ಹೊಂದಿದೆ. ದೇಶದಲ್ಲಿ ವಾರ್ಷಿಕವಾಗಿ ಸುಮಾರು 9,000 ಕೋಟಿ ಮೊಟ್ಟೆಗಳು ಉತ್ಪತ್ತಿಯಾಗುತ್ತವೆ. ಭಾರತ (ಚೀನಾ ನಂತರ) ವಿಶ್ವದ ಎರಡನೇ ಅತಿದೊಡ್ಡ ಮೊಟ್ಟೆಗಳನ್ನು ಉತ್ಪಾದಿಸುವ ದೇಶ. ದೇಶಾದ್ಯಂತ ಸುಮಾರು 400 ಮಿಲಿಯನ್ ಬ್ರಾಯ್ಲರ್ ಕೋಳಿಗಳನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತದೆ. ಕೋಳಿ ಉದ್ಯಮದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ, ಮೊದಲ ಮತ್ತು ಎರಡನೆಯ ಸ್ಥಾನದಲ್ಲಿ ಯುಎಸ್ ಮತ್ತು ಚೀನಾ ಇವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮೊಟ್ಟೆಗಳನ್ನು ಬಡ ಮಕ್ಕಳಿಗೆ ಪೌಷ್ಠಿಕಾಂಶಕ್ಕೆ ಪೂರಕವಾಗಿ ಬಳಸಲು ಶಿಫಾರಸು ಮಾಡಿದೆ. ಭಾರತದ ತಲಾ ಮೊಟ್ಟೆಗಳ ಬಳಕೆ 68 ಮೊಟ್ಟೆಗಳು ಆದರೆ ಶಿಫಾರಸು ಮಾಡಿರುವುದು 180 ಮೊಟ್ಟೆಗಳು. ಮತ್ತು 11 ಕೆಜಿ ಕೋಳಿಯ ಶಿಫಾರಸು ಇದ್ದು ತಲಾ 3.5 ಕೆಜಿ ತಿನ್ನಲಾಗುತ್ತಿದೆ ಎಂದು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್ಐಎನ್) ಹೇಳಿದೆ. ಈ ಮಟ್ಟಿಗೆ ಲೆಕ್ಕಾಚಾರಕ್ಕೆ ಹೊಂದಿಕೊಳ್ಳಲು ಉದ್ಯಮವನ್ನು ವಿಸ್ತರಿಸಲು ಸಾಕಷ್ಟು ಆಯ್ಕೆಗಳಿವೆ. ದೇಶೀಯ ಕೋಳಿ ಉದ್ಯಮದಲ್ಲಿ ಸುಮಾರು 40 ಲಕ್ಷ ಉದ್ಯೋಗಿಗಳಾಗಿದ್ದು ಈ ಪೈಕಿ ಸುಮಾರು 20 ಮಿಲಿಯನ್ ಜನರು ಮೆಕ್ಕೆಜೋಳ ಮತ್ತು ಸೋಯಾಬೀನ್ ರೈತರಿಂದಲೇ ಉದ್ಯೋಗದಲ್ಲಿದ್ದಾರೆ. ಭಾರತದಲ್ಲಿ ಕೋಳಿ ಫೀಡ್ ಮುಖ್ಯವಾಗಿ ಜೋಳ ಮತ್ತು ಸೋಯಾಬೀನ್ ನಿಂದ ರೂಪುಗೊಳ್ಳುತ್ತದೆ. ಕೋಳಿ ಉದ್ಯಮದ ಫೀಡ್ ಅಗತ್ಯದ ಮೇಲೆ ಫೋಕಸ್ ಮಾಡುವ ರೈತರು ಈ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೆಳೆಗಳ ಅರ್ಧದಷ್ಟು ಭಾಗವನ್ನು ಕೋಳಿ ಉದ್ಯಮವು ಬಳಸುತ್ತದೆ. ಭಾರತೀಯ ಕೋಳಿ ಉದ್ಯಮಕ್ಕೆ ಪೆಟ್ಟು ಬಿದ್ದರೆ, ಕೋಳಿ ಸಾಕಾಣಿಕೆ ಅವಲಂಬಿಸಿರುವ ಈ ರೈತರ ಸ್ಥಿತಿ ಅಪಾಯಕ್ಕೆ ಈಡಾಗಲಿದೆ.

ಭಾರತದಲ್ಲಿ ನಾಗರಿಕರ ಆಹಾರ ಪದ್ಧತಿ ವೇಗವಾಗಿ ಬದಲಾಗುತ್ತಿದೆ. ಯುವಕರು ಪಿಜ್ಜಾ ಮತ್ತು ಬರ್ಗರ್​ಗಳಂತಹ ಫಾಸ್ಟ್​​​ಫುಡ್​​ಗೆ ಒಗ್ಗಿಕೊಳ್ಳುತ್ತಿದ್ದಾರೆ. ಹೋಟೆಲ್​ಗಳಲ್ಲಿ ಮಾಂಸಾಹಾರ ತಿನ್ನುವುದೂ ಹೆಚ್ಚಾಗಿದೆ. ಈ ಅರ್ಥದಲ್ಲಿ ಅಮೆರಿಕಾದ ಕೋಳಿಗಳಿಗೆ ಬೇಡಿಕೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ ಭಾರತೀಯರು ತಾಜಾ ಆಹಾರವನ್ನು ಬಯಸುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಗಳು ವಿಸ್ತರಿಸುತ್ತಿದ್ದರೂ ಬಹುಪಾಲು ಭಾರತೀಯರು ಇನ್ನೂ ತಾಜಾ ತರಕಾರಿಗಳು ಮತ್ತು ಮಾಂಸವನ್ನು ಸೇವಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಭಾರತದ ಪಟ್ಟಣಗಳು ಮತ್ತು ನಗರಗಳ ಪ್ರತಿಯೊಂದು ವಸಾಹತುಗಳಲ್ಲಿ ತರಕಾರಿ ಮಾರುಕಟ್ಟೆಗಳು ಮತ್ತು ಕೋಳಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದ್ದರಿಂದ ನಾವು ಭಾರತದಲ್ಲಿ ಕೋಲ್ಡ್ ಸ್ಟೋರೇಜ್ ಕೋಳಿಗಳ ಬೇಡಿಕೆಯನ್ನು ಗಮನಿಸಬೇಕು.

ಕೋಳಿ ಮಾಂಸದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದರಿಂದ ಲಕ್ಷಾಂತರ ಸ್ಥಳೀಯ ಕಾರ್ಮಿಕರನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಕೈಗಾರಿಕಾ ಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಕೂಗಿ ಹೇಳುತ್ತಿದ್ದಾರೆ. ಆಮದಿನಿಂದ ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಇದು ಗ್ರಾಮೀಣ ಆರ್ಥಿಕತೆಗೆ ಧಕ್ಕೆ ತರುತ್ತದೆ ಎಂಬ ನಿರೀಕ್ಷೆಗಳಿವೆ. ದಶಕಗಳಿಂದ ಭಾರತೀಯ ಕೋಳಿ ಉದ್ಯಮವು ಸರ್ಕಾರದ ಯಾವುದೇ ಬೆಂಬಲವಿಲ್ಲದೆ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಸುಂಕವನ್ನು ಕಡಿಮೆ ಮಾಡಲು ಯುಎಸ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದವನ್ನು ಒಪ್ಪಿಕೊಂಡರೆ ಉದ್ಯಮವು ಖಂಡಿತವಾಗಿಯೂ ತ್ವರಿತ ದರದಲ್ಲಿ ಕುಸಿಯುವುದರೊಂದಿಗೆ ಮುಂದಿನ ವರ್ಷಗಳಲ್ಲಿ ರಾಷ್ಟ್ರದ ಆರ್ಥಿಕತೆಯನ್ನೂ ಕತ್ತಲೆಯಲ್ಲಿ ಮುಳುಗಿಸುತ್ತದೆ.

- ನೀಲಿ ವೇಣುಗೋಪಾಲ ರಾವ್.

Intro:Body:

ಕೋಳಿ ಆಮದು ಸುಂಕ ಕಡಿತ... ಭಾರತೀಯ ಕೋಳಿ ಸಾಕಣೆದಾರರಲ್ಲಿ ಆತಂಕ! 

ಅಮೆರಿಕ ಈ ಹಿಂದೆ ಕೋಳಿ ಕಾಲುಗಳನ್ನು ತೃತೀಯ ಜಗತ್ತಿನ ರಾಷ್ಟ್ರಗಳು, ಯುರೋಪಿಯನ್ ಯೂನಿಯನ್ ಮತ್ತು ಚೀನಾಕ್ಕೆ ರಫ್ತು ಮಾಡಿದೆ. ಅಂತಿಮವಾಗಿ ಆಯಾ ದೇಶಗಳ ಮಾರುಕಟ್ಟೆಗಳು ಮಾಂಸ ಉತ್ಪನ್ನಗಳಲ್ಲಿ ಸ್ವಾವಲಂಬಿಯಾದವು. ಯುಎಸ್ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ವಾಣಿಜ್ಯ ಪೈಪೋಟಿ ಮತ್ತು ಚೀನಾದಲ್ಲಿ ಕೋಳಿ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಯುಎಸ್ ಗಮನವು ಈಗ ಭಾರತದತ್ತ ಸಾಗಿದೆ. 135 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತೀಯ ಮಾರುಕಟ್ಟೆ ಅಮೆರಿಕಕ್ಕೆ ದೊಡ್ಡ ಭರವಸೆಯಾಗಿದೆ. ಭಾರತೀಯರು ಕೋಳಿ ತೊಡೆಗಳಿಗೆ (ಕೋಳಿ ಕಾಲುಗಳು ಅಥವಾ ಡ್ರಮ್ ಸ್ಟಿಕ್) ಆದ್ಯತೆ ನೀಡುತ್ತಾರೆ, ಇದು ಯುಎಸ್ ಕೋಳಿ ಉದ್ಯಮಕ್ಕೆ ತಮ್ಮ ಎಲ್ಲಾ ಉತ್ಪನ್ನಗಳನ್ನು ನಮ್ಮ ಮೇಲೆ ಹೇರಲು ಸಮರ್ಥ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಕೋಳಿ ಮಾಂಸವು ಅಮೆರಿಕದಲ್ಲಿ ಅಗ್ಗವಾಗಿರುವುದರಿಂದ ಈ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರುವ ಮೂಲಕ ಮುಳುಗಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಕೋಳಿ ಸಾಕಣಿಕಾ ವಲಯವು ಭಾರತದ ವಾರ್ಷಿಕ ಒಟ್ಟು ದೇಶೀಯ ಉತ್ಪನ್ನದ ಒಂದು ಟ್ರಿಲಿಯನ್ ರೂಪಾಯಿಗಳಷ್ಟು ಪಾಲು ಹೊಂದಿದೆ. ದೇಶದಲ್ಲಿ ವಾರ್ಷಿಕವಾಗಿ ಸುಮಾರು 9,000 ಕೋಟಿ ಮೊಟ್ಟೆಗಳು ಉತ್ಪತ್ತಿಯಾಗುತ್ತವೆ. ಭಾರತ (ಚೀನಾ ನಂತರ) ವಿಶ್ವದ ಎರಡನೇ ಅತಿದೊಡ್ಡ ಮೊಟ್ಟೆಗಳನ್ನು ಉತ್ಪಾದಿಸುವ ದೇಶ. ದೇಶಾದ್ಯಂತ ಸುಮಾರು 400 ಮಿಲಿಯನ್ ಬ್ರಾಯ್ಲರ್ ಕೋಳಿಗಳನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತದೆ. ಕೋಳಿ ಉದ್ಯಮದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ, ಮೊದಲ ಮತ್ತು ಎರಡನೆಯ ಸ್ಥಾನದಲ್ಲಿ ಯುಎಸ್ ಮತ್ತು ಚೀನಾ ಇವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮೊಟ್ಟೆಗಳನ್ನು ಬಡ ಮಕ್ಕಳಿಗೆ ಪೌಷ್ಠಿಕಾಂಶಕ್ಕೆ ಪೂರಕವಾಗಿ ಬಳಸಲು ಶಿಫಾರಸು ಮಾಡಿದೆ. ಭಾರತದ ತಲಾ ಮೊಟ್ಟೆಗಳ ಬಳಕೆ 68 ಮೊಟ್ಟೆಗಳು ಆದರೆ ಶಿಫಾರಸು ಮಾಡಿರುವುದು 180 ಮೊಟ್ಟೆಗಳು. ಮತ್ತು 11 ಕೆಜಿ ಕೋಳಿಯ ಶಿಫಾರಸು ಇದ್ದು ತಲಾ 3.5 ಕೆಜಿ ತಿನ್ನಲಾಗುತ್ತಿದೆ ಎಂದು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್ಐಎನ್) ಹೇಳಿದೆ. ಈ ಮಟ್ಟಿಗೆ ಲೆಕ್ಕಾಚಾರಕ್ಕೆ ಹೊಂದಿಕೊಳ್ಳಲು ಉದ್ಯಮವನ್ನು ವಿಸ್ತರಿಸಲು ಸಾಕಷ್ಟು ಆಯ್ಕೆಗಳಿವೆ. ದೇಶೀಯ ಕೋಳಿ ಉದ್ಯಮದಲ್ಲಿ ಸುಮಾರು 40 ಲಕ್ಷ ಉದ್ಯೋಗಿಗಳಾಗಿದ್ದು ಈ ಪೈಕಿ ಸುಮಾರು 20 ಮಿಲಿಯನ್ ಜನರು ಮೆಕ್ಕೆಜೋಳ ಮತ್ತು ಸೋಯಾಬೀನ್ ರೈತರಿಂದಲೇ ಉದ್ಯೋಗದಲ್ಲಿದ್ದಾರೆ. ಭಾರತದಲ್ಲಿ ಕೋಳಿ ಫೀಡ್ ಮುಖ್ಯವಾಗಿ ಜೋಳ ಮತ್ತು ಸೋಯಾಬೀನ್ ನಿಂದ ರೂಪುಗೊಳ್ಳುತ್ತದೆ. ಕೋಳಿ ಉದ್ಯಮದ ಫೀಡ್ ಅಗತ್ಯದ ಮೇಲೆ ಫೋಕಸ್ ಮಾಡುವ ರೈತರು ಈ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೆಳೆಗಳ ಅರ್ಧದಷ್ಟು ಭಾಗವನ್ನು ಕೋಳಿ ಉದ್ಯಮವು ಬಳಸುತ್ತದೆ. ಭಾರತೀಯ ಕೋಳಿ ಉದ್ಯಮಕ್ಕೆ ಪೆಟ್ಟು ಬಿದ್ದರೆ, ಕೋಳಿ ಸಾಕಾಣಿಕೆ ಅವಲಂಬಿಸಿರುವ ಈ ರೈತರ ಸ್ಥಿತಿ ಅಪಾಯಕ್ಕೆ ಈಡಾಗಲಿದೆ.

ಭಾರತದಲ್ಲಿ ನಾಗರಿಕರ ಆಹಾರ ಪದ್ಧತಿ ವೇಗವಾಗಿ ಬದಲಾಗುತ್ತಿದೆ. ಯುವಕರು ಪಿಜ್ಜಾ ಮತ್ತು ಬರ್ಗರ್ಗಳಂತಹ ‘ಫಾಸ್ಟ್ಫುಡ್’ಗೆ ಒಗ್ಗಿಕೊಳ್ಳುತ್ತಿದ್ದಾರೆ. ಹೋಟೆಲ್ಗಳಲ್ಲಿ ಮಾಂಸಾಹಾರ ತಿನ್ನುವುದೂ ಹೆಚ್ಚಾಗಿದೆ. ಈ ಅರ್ಥದಲ್ಲಿ ಅಮೇರಿಕಾದ ಕೋಳಿಗಳಿಗೆ ಬೇಡಿಕೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ ಭಾರತೀಯರು ತಾಜಾ ಆಹಾರವನ್ನು ಬಯಸುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಗಳು ವಿಸ್ತರಿಸುತ್ತಿದ್ದರೂ ಬಹುಪಾಲು ಭಾರತೀಯರು ಇನ್ನೂ ತಾಜಾ ತರಕಾರಿಗಳು ಮತ್ತು ಮಾಂಸವನ್ನು ಸೇವಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಭಾರತದ ಪಟ್ಟಣಗಳು ಮತ್ತು ನಗರಗಳ ಪ್ರತಿಯೊಂದು ವಸಾಹತುಗಳಲ್ಲಿ ತರಕಾರಿ ಮಾರುಕಟ್ಟೆಗಳು ಮತ್ತು ಕೋಳಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದ್ದರಿಂದ ನಾವು ಭಾರತದಲ್ಲಿ ಕೋಲ್ಡ್ ಸ್ಟೋರೇಜ್ ಕೋಳಿಗಳ ಬೇಡಿಕೆಯನ್ನು ಗಮನಿಸಬೇಕು.

ಕೋಳಿ ಮಾಂಸದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದರಿಂದ ಲಕ್ಷಾಂತರ ಸ್ಥಳೀಯ ಕಾರ್ಮಿಕರನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಕೈಗಾರಿಕಾ ಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಕೂಗಿ ಹೇಳುತ್ತಿದ್ದಾರೆ. ಆಮದಿನಿಂದ ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಇದು ಗ್ರಾಮೀಣ ಆರ್ಥಿಕತೆಗೆ ಧಕ್ಕೆ ತರುತ್ತದೆ ಎಂಬ ನಿರೀಕ್ಷೆಗಳಿವೆ. ದಶಕಗಳಿಂದ ಭಾರತೀಯ ಕೋಳಿ ಉದ್ಯಮವು ಸರ್ಕಾರದ ಯಾವುದೇ ಬೆಂಬಲವಿಲ್ಲದೆ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಸುಂಕವನ್ನು ಕಡಿಮೆ ಮಾಡಲು ಯುಎಸ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದವನ್ನು ಒಪ್ಪಿಕೊಂಡರೆ ಉದ್ಯಮವು ಖಂಡಿತವಾಗಿಯೂ ತ್ವರಿತ ದರದಲ್ಲಿ ಕುಸಿಯುವುದರೊಂದಿಗೆ ಮುಂದಿನ ವರ್ಷಗಳಲ್ಲಿ ರಾಷ್ಟ್ರದ ಆರ್ಥಿಕತೆಯನ್ನೂ ಕತ್ತಲೆಯಲ್ಲಿ ಮುಳುಗಿಸುತ್ತದೆ.

- ನೀಲಿ ವೇಣುಗೋಪಾಲ ರಾವ್.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.