ತಿರುವನಂತಪುರಂ (ಕೇರಳ) : ಕೆಲವು ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆ ಸಾವು ದೇಶಾದ್ಯಂತ ಸುದ್ದಿಯಾಗಿತ್ತು. ಈಗ ನಾಯಿಯೊಂದರ ಬಾಯಿಯನ್ನು ಇನ್ಸುಲೇಷನ್ ಟೇಪ್ನಲ್ಲಿ ಬಿಗಿದು ವಿಕೃತಿ ಮೆರೆದ ಘಟನೆ ತ್ರಿಶ್ಯೂರ್ ಜಿಲ್ಲೆಯ ಒಲ್ಲೂರ್ನಲ್ಲಿ ನಡೆದಿದೆ.
ಸುಮಾರು ಎರಡು ವಾರಗಳಿಂದ ನಾಯಿ ನರಳುತ್ತಿದ್ದು, ಅನಿಮಲ್ ವೆಲ್ಫೇರ್ ಸರ್ವೀಸಸ್ ನಾಯಿಯನ್ನು ರಕ್ಷಣೆ ಮಾಡಿದೆ. ಇನ್ಸುಲೇಷನ್ ಟೇಪ್ ಅನ್ನು ಬಿಚ್ಚಿದ ತಕ್ಷಣ ಎರಡು ಲೀಟರ್ ನೀರನ್ನು ನಾಯಿ ಕುಡಿದಿದ್ದು, ಅಲ್ಲಿ ನೆರದಿದ್ದವರ ಮನಕಲಕಿತ್ತು.
ಈಗ ಸದ್ಯಕ್ಕೆ ನಾಯಿಯನ್ನು ಪ್ರಾಣಿ ಪ್ರಿಯರ ಸಂಘಟನೆಯೊಂದಕ್ಕೆ ನೀಡಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.