ಬಿಜ್ನೋರ್(ಉತ್ತರ ಪ್ರದೇಶ) : ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಚಾಂದಪುರದ ಕಾಯಸ್ಥಾನ್ ಮೊಹಲ್ಲಾದ ನಿವಾಸಿಯಾಗಿದ್ದ ಖಾಸಗಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.
ವೈದ್ಯರ ಪತ್ನಿ ಮತ್ತು ಮಗನನ್ನು ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಿಜ್ನೋರ್ ಜಿಲ್ಲೆಯಲ್ಲಿ ಈವರೆಗೆ 31 ಕರೋನಾ ರೋಗಿಗಳು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 20 ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 11 ಕೊರೊನಾ ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈಗ 10 ಕೊರೊನಾ ರೋಗಿಗಳಿದ್ದಾರೆ.
ಜಿಲ್ಲೆಯ ಕಾಯಸ್ಥಾನ್ ಮತ್ತು ಷಾ ಚಂದನ್ ಮೊಹಲ್ಲಾ ಜಿಲ್ಲೆಗಳಲ್ಲಿ ಈವರೆಗೆ 5 ಕೊರೊನಾ ಸಂಬಂಧಿತ ರೋಗಿಗಳಿದ್ದರು. ಇದರಲ್ಲಿ ಕಯಸ್ಥಾನ್ ಮೊಹಲ್ಲಾದ ಖಾಸಗಿ ವೈದ್ಯರೊಬ್ಬರು ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಅದೇ ಜಿಲ್ಲೆಯ ವ್ಯಕ್ತಿ ಖಾಸಗಿ ವೈದ್ಯರು ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆ ಕಂಗಾಲಾಗಿದೆ. ಈಗಾಗಲೇ ಗುರುತಿಸಿರುವ ಎಲ್ಲಾ 17 ಹಾಟ್ಸ್ಪಾಟ್ಗಳಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.