ETV Bharat / bharat

ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ: ಆಸ್ಪತ್ರೆ ಎದುರು ವೈದ್ಯರ ಪ್ರತಿಭಟನೆ

ಕೊರೊನಾ ಪಾಸಿಟಿವ್​ ಇರುವ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹಿನ್ನೆಲೆ, ಆತನ ಸಂಬಂಧಿಕನೊಬ್ಬ ಈ ಸಾವಿಗೆ ವೈದ್ಯರೇ ಕಾರಣ ಎಂದು ಹಲ್ಲೆ ನಡೆಸಿದ್ದಾನೆ.

Docs in Hyderabad protest
ಆಸ್ಪತ್ರೆ ಎದುರು ವೈದ್ಯರ ಪ್ರತಿಭಟನೆ
author img

By

Published : Jun 10, 2020, 1:36 PM IST

ಹೈದರಾಬಾದ್(ತೆಲಂಗಾಣ): ಕೊರೊನಾ ವೈರಸ್​​ ರೋಗದಿಂದ ಸಾವನ್ನಪ್ಪಿದ್ದ ರೋಗಿಯ ಸಂಬಂಧಿಕನೊಬ್ಬ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ, ಹೈದರಾಬಾದ್ ಗಾಂಧಿ ಆಸ್ಪತ್ರೆಯ ಮುಂಭಾಗದಲ್ಲಿ ವೈದ್ಯರು ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಶನಿವಾರ ರಾತ್ರಿ 55 ವರ್ಷದ ವ್ಯಕ್ತಿಯೊಬ್ಬನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರದಂದು ಕೋವಿಡ್​​-19 ಗೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು​ ದೃಢಪಟ್ಟಿತ್ತು. ಈ ನಿಟ್ಟಿನಲ್ಲಿ ರೋಗಿಯನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗಿತ್ತು. ರೋಗಿಗೆ ಸಿಪಿಎಪಿ ಯಂತ್ರದ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಿ ಅದನ್ನು ತೆಗೆಯದಂತೆ ಸೂಚಿಸಲಾಗಿತ್ತು. ಆದರೆ, ವೈದ್ಯರ ಮಾತು ಕೇಳದ ರೋಗಿ, ಅದನ್ನು ತೆಗೆದು ಹೊರ ನಡೆದಿದ್ದ. ಈ ವೇಳೆ, ಉಸಿರಾಟದ ಸಮಸ್ಯೆಯಿಂದಾಗಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ರೋಗಿ ಮರಣ ಹೊಂದಿದ ಸ್ವಲ್ಪ ಸಮಯದ ನಂತರ, ಅವರ ಸಂಬಂಧಿ ಆಸ್ಪತ್ರೆಗೆ ಧಾವಿಸಿ, ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಸಂಬಂಧಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ. ಈ ಸಮಯದಲ್ಲಿ ವಾರ್ಡ್‌ನಲ್ಲಿದ್ದ ಇಬ್ಬರು ವೈದ್ಯರು ಮತ್ತು ಮೂವರು ಶಸ್ತ್ರಚಿಕಿತ್ಸಕರ ಮೇಲೆ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಕುರ್ಚಿಗಳನ್ನು ಎಸೆದು ಹಲ್ಲೆ ಮಾಡಿದ್ದ ಎಂದು ವೈದ್ಯರು ದೂರಿದ್ದಾರೆ.

ಈ ಘಟನೆಯ ಬಗ್ಗೆ ತಿಳಿದ ಪೊಲೀಸರು ಕೂಡಲೇ ಆಸ್ಪತ್ರೆಗೆ ಬಂದು ದಾಳಿಕೋರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನಡೆದ ಬಳಿಕ ಆಸ್ಪತ್ರೆಯ ವೈದ್ಯರು ಸೇರಿದಂತೆ ಇನ್ನಿತರ ಸಿಬ್ಬಂದಿ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸಿದ್ದು, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ರಕ್ಷಿಸಲು ತೆಲಂಗಾಣ ಸರ್ಕಾರ ವಿಶೇಷ ರಕ್ಷಣಾ ಪಡೆ ರಚಿಸಬೇಕು ಎಂದು ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.