ETV Bharat / bharat

ಮಾಜಿ ಪ್ರಧಾನಿಗೆ ತಮಿಳುನಾಡಿನಲ್ಲಿಲ್ಲ ಸ್ಥಾನ.. ರಾಜ್ಯಸಭೆ ಆಯ್ಕೆಗೆ ರಾಜಸ್ಥಾನದತ್ತ 'ಕೈ' ಕಣ್ಣು.. - undefined

ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ರನ್ನು ತಮಿಳುನಾಡು ಮೂಲಕ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಕಾಂಗ್ರೆಸ್​ ಹಾಗೂ ಡಿಎಂಕೆ ಒಮ್ಮತಕ್ಕೆ ಬರಲಾಗಿಲ್ಲ. ಅಸ್ಸೋಂ, ಗುಜರಾತ್, ತಮಿಳುನಾಡು ನಂತರ ಇದೀಗ ರಾಜಸ್ಥಾನದಿಂದ ಅವರನ್ನು ನಾಮನಿರ್ದೇಶನ ಮಾಡಿ ಕಳುಹಿಸಲು ಕಾಂಗ್ರೆಸ್​ ಮುಂದಾಗಿದೆ.

ಮಾಜಿ ಪ್ರಧಾನಿ ಮನಮೋಹನ್
author img

By

Published : Jul 3, 2019, 9:34 AM IST

Updated : Jul 3, 2019, 12:35 PM IST

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಡಿಎಂಕೆ ಒಪ್ಪದ ಕಾರಣ, ರಾಜಸ್ಥಾನದತ್ತ ಕಾಂಗ್ರೆಸ್​ ನಾಯಕರ ದೃಷ್ಟಿ ಹರಿದಿದೆ.

ಸಿಂಗ್​ರನ್ನು ತಮಿಳುನಾಡು ಮೂಲಕ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಕಾಂಗ್ರೆಸ್​ ಹಾಗೂ ಡಿಎಂಕೆ ಒಮ್ಮತಕ್ಕೆ ಬರಲಾಗಿಲ್ಲ. ಅಸ್ಸೋಂ, ಗುಜರಾತ್, ತಮಿಳುನಾಡು ನಂತರ ಇದೀಗ ರಾಜಸ್ಥಾನದಿಂದ ಅವರನ್ನು ನಾಮನಿರ್ದೇಶನ ಮಾಡಿ ಕಳುಹಿಸಲು ಕಾಂಗ್ರೆಸ್​ ಮುಂದಾಗಿದೆ.

ನಿನ್ನೆಯಷ್ಟೆ ಡಿಎಂಕೆ, ತಮಿಳುನಾಡಿನ ಮೂವರು ಅಭ್ಯರ್ಥಿಗಳ ಹೆಸರನ್ನು ರಾಜ್ಯಸಭೆಗಾಗಿ ಘೋಷಣೆ ಮಾಡಿದೆ. ಚುನಾವಣೆ ವೇಳೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಅವರು, ರಾಹುಲ್ ಪ್ರಧಾನಿಯಾಗಬೇಕೆಂದು ಅಭಿಪ್ರಾಯಪಟ್ಟಾಗ, ಸಿಂಗ್​ರನ್ನು ತಮಿಳುನಾಡು ಮೂಲಕ ಮೇಲ್ಮನೆಗೆ ಕಳಿಸಲು ಸಮ್ಮತಿಸಿದ್ದರು. ಆದರೆ, ಚುನಾವಣೆಯಲ್ಲಿ 2ನೇ ಸ್ಥಾನವನ್ನೂ ಸಮರ್ಥವಾಗಿ ಪಡೆಯಲಾಗದ ಪಕ್ಷದೊಂದಿಗೆ ಕೈಜೋಡಿಸುವುದು ಸರಿಯಲ್ಲ ಎಂದು ಸ್ಟಾಲಿನ್​ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನದ ರಾಜ್ಯಸಭೆ ಸದಸ್ಯರಾಗಿದ್ದ ಬಿಜೆಪಿ ಮದನ್ ಲಾಲ್​ ಶೈನಿ ಅವರು ನಿಧನದಿಂದಾಗಿ ಸ್ಥಾನ ತೆರವಾಗಿದೆ. ಸಿಂಗ್​ರನ್ನು ಈ ಮೂಲಕ ಆಯ್ಕೆ ಮಾಡುವ ಪ್ಲಾನ್ ಕಾಂಗ್ರೆಸ್​ನದ್ದಾಗಿದೆ.

Intro:Body:

 Manmohan Singh 

Conclusion:
Last Updated : Jul 3, 2019, 12:35 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.