ETV Bharat / bharat

ಹುಟ್ಟಿದ ದಿನವೇ ಕೊರೊನಾದಿಂದ ಸಾವನ್ನಪ್ಪಿದ ತಮಿಳುನಾಡಿನ ಡಿಎಂಕೆ ಶಾಸಕ

author img

By

Published : Jun 10, 2020, 9:49 AM IST

ಕೊರೊನಾ ಸೋಂಕಿನಿಂದ ತಮಿಳುನಾಡಿನ ಡಿಎಂಕೆ ಶಾಸಕರೊಬ್ಬರು ತಮ್ಮ ಹುಟ್ಟಿದ ದಿನದಂದೇ ಸಾವನ್ನಪ್ಪಿದ್ದಾರೆ.

J. Anbazhagan
ಜೆ.ಅನ್ಬಳಗನ್​

ಚೆನ್ನೈ (ತಮಿಳುನಾಡು): ತಾವು ಹುಟ್ಟಿದ ದಿನವಾದ ಇಂದೇ ಡಿಎಂಕೆ ಶಾಸಕ ಜೆ.ಅನ್ಬಳಗನ್​ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಮೃತಪಟ್ಟ ಮೊದಲ ಶಾಸಕರಾಗಿದ್ದಾರೆ.

ಡಿಎಂಕೆ ಪಕ್ಷದ ಚೆನ್ನೈ ಪಶ್ಚಿಮ ಜಿಲ್ಲೆಯ ಕಾರ್ಯದರ್ಶಿಯೂ ಆಗಿದ್ದ ಇವರಿಗೆ 62 ವರ್ಷ ವಯಸ್ಸಾಗಿತ್ತು.

ಜೂನ್​ 2ರಂದು ಉಸಿರಾಟದ ತೊಂದರೆಯಿಂದ ಚೆನ್ನೈನ ಕ್ರೋಮ್​ಪೇಟ್​ನಲ್ಲಿರುವ ಡಾ.ರೇಲಾ ಇನ್ಸ್​​​ಟಿಟ್ಯೂಟ್ ಆ್ಯಂಡ್ ಮೆಡಿಕಲ್​ ಸೆಂಟರ್​ಗೆ ದಾಖಲಾಗಿದ್ದ ಇವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ಅನ್ಬಳಗನ್​ 2001, 2011 ಹಾಗೂ 2016ರಲ್ಲಿ ಟಿ. ನಗರ್​​ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.