ETV Bharat / bharat

ವಣಕ್ಕಂ ಕಮಲಕ್ಕಾ... ಅಮೆರಿಕ ಉಪಾಧ್ಯಕ್ಷೆಗೆ ತಮಿಳಿನಲ್ಲೇ ಪತ್ರ ಬರೆದ ಸ್ಟಾಲಿನ್​! - ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷಿಯ ಚುನಾವಣೆ

ಭಾರತೀಯ ಮೂಲದವರಾಗಿರುವ ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷಿಯ ಚುನಾವಣೆಯಲ್ಲಿ ಗೆಲುವು ದಾಖಲು ಮಾಡಿದ್ದು, ಅವರಿಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಪತ್ರ ಬರೆದಿದ್ದಾರೆ.

DMK chief Stalin writes to Kamala Harris

author img

By

Published : Nov 9, 2020, 8:43 PM IST

Updated : Nov 9, 2020, 8:48 PM IST

ಚೆನ್ನೈ: ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಆಯ್ಕೆಯಾಗಿದ್ದು, ಅವರಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಮಧ್ಯೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಕಮಲಾ ಹ್ಯಾರಿಸ್​ಗೆ ತಮಿಳಿನಲ್ಲೇ ಪತ್ರ ಬರೆದಿದ್ದಾರೆ.

'ವಣಕ್ಕಂ' ಎಂದು ತಮಿಳು ಭಾಷೆಯಲ್ಲಿ ಶುಭಾಶಯ ಕೋರಿರುವ ಡಿಎಂಕೆ ಅಧ್ಯಕ್ಷ ಸ್ಟಾಲಿನ್​, ಅವರಿಗೆ ತಮಿಳುನಾಡಿನೊಂದಿಗೆ ಇರುವ ಸಂಬಂಧದ ಬಗ್ಗೆ ಪತ್ರದಲ್ಲಿ ಬರೆದಿದ್ದಾರೆ. ನಿಮ್ಮ ಅಧಿಕಾರವಧಿಯಲ್ಲಿ ಅಮೆರಿಕಕ್ಕೆ ಒಳ್ಳೆಯ ಹೆಸರು ತಂದುಕೊಡಿ ಎಂದಿರುವ ಸ್ಟಾಲಿನ್​, ಕಮಲಾ ಹ್ಯಾರಿಸ್​ ಅವರ ತಾಯಿ ಅವರ ಮಾತೃ ಭಾಷೆ ತಮಿಳು ಆಗಿರುವ ಕಾರಣ ಈ ಪತ್ರ ಮತ್ತಷ್ಟು ಸಂತೋಷವನ್ನುಂಟು ಮಾಡಲಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ಕಮಲಾ ಹ್ಯಾರಿಸ್​ ಅವರ ಗೆಲುವು ದ್ರಾವಿಡ್​ ಚಳಚಳಿಗೆ ಆತ್ಮವಿಶ್ವಾಸ ನೀಡಿದೆ ಎಂದಿದ್ದಾರೆ.

DMK chief Stalin writes to Kamala Harris
ಕಮಲಾ ಹ್ಯಾರಿಸ್​ಗೆ ತಮಿಳಿನಲ್ಲೇ ಪತ್ರ

ತಮಿಳುನಾಡಿನೊಂದಿಗೆ ಕಮಲಾ ಹ್ಯಾರಿಸ್ ತಾಯಿ ಶಿಮಲಾ ಗೋಪಾಲನ್​ ಹ್ಯಾರಿಸ್​ ಅವರು ಹೆಚ್ಚು ಸಂಪರ್ಕವಿರುವ ವಿಚಾರ ಹಂಚಿಕೊಂಡಿರುವ ಸ್ಟಾಲಿನ್​, ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರು ತಮಿಳುನಾಡಿನವರು ಆಯ್ಕೆಯಾಗಿದ್ದಕ್ಕೆ ತಮಗೆ ಹೆಮ್ಮೆ ಇದೆ ಎಂದಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಹ್ಯಾರಿಸ್​ ಗೆಲುವು ತಂದುಕೊಟ್ಟಿದ್ದು, ತಮಿಳು ಸಂಬಂಧ ಹೊಂದಿರುವ ಮಹಿಳೆ ಯುಎಸ್​ನಲ್ಲಿ ಆಡಳಿತ ನಡೆಸಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮ ಅಧಿಕಾರಾವಧಿ ಅಮೆರಿಕಕ್ಕೆ ಹೆಚ್ಚಿನ ಪ್ರಶಸ್ತಿ ತಂದುಕೊಡಲಿ ಮತ್ತು ತಮಿಳರ ಪರಂಪರೆ ಹೆಮ್ಮೆಯನ್ನ ಜಗತ್ತಿಗೆ ತಿಳಿಸಲಿ ಎಂದಿರುವ ಸ್ಟಾಲಿನ್​, ನಿಮ್ಮೆ ಭೇಟಿಯನ್ನ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಪತ್ರ ಸ್ಟಾಲಿನ್​ ಅವರು ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Last Updated : Nov 9, 2020, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.