ETV Bharat / bharat

ಪ್ರಪಂಚ ದ್ವಿಮುಖ ದಾಳಿಯನ್ನ ಎದುರಿಸುತ್ತಿದೆ : ಜೈಶಂಕರ್ ಕಳವಳ - ಅಲೈಯನ್ಸ್ ಫಾರ್ ಮಲ್ಟಿಲ್ಯಾಟರಲಿಸಂನ ವರ್ಚುವಲ್ ಮಿನಿಸ್ಟ್ರಿ ಸಭೆ

ಅಲಯನ್ಸ್ ಫಾರ್ ಮಲ್ಟಿ ಲ್ಯಾಟರಲಿಸಂನ ವರ್ಚುವಲ್ ಮಿನಿಸ್ಟ್ರಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್​, ಜಗತ್ತು ಒಂದು ಬದಲಾವಣೆಯ ಹಂತದಲ್ಲಿ ನಿಂತಿದೆ. ಜೊತೆಗೆ ಸಾಂಕ್ರಾಮಿಕ ರೋಗ ಮತ್ತು ತಪ್ಪು ಮಾಹಿತಿ ವೈರಲ್ ಆಗುತ್ತಿರುವ ದ್ವಿಮುಖ ದಾಳಿಯನ್ನು ಎದುರಿಸುತ್ತಿದ್ದೇವೆ ಎಂದು ಒತ್ತಿ ಹೇಳಿದರು.

Jaishankar
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್
author img

By

Published : Jun 27, 2020, 8:17 AM IST

ನವದೆಹಲಿ : ಪ್ರಸ್ತುತ ಕಾಲ ಘಟ್ಟದಲ್ಲಿ ಉದ್ವೇಗಕ್ಕೆ ಒಳಗಾಗದೇ ಸೂಕ್ಷ್ಮವಾಗಿ ಪರಿಶೀಲಿಸಿ, ಎಲ್ಲ ಬಹುಪಕ್ಷೀಯ ಘಟಕಗಳ ಉತ್ಸಾಹಭರಿತ ಚಲನೆ ಮತ್ತು ಸುಧಾರಣೆ ಮಾಡುವ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದ್ದಾರೆ.

ಅಲಯನ್ಸ್ ಫಾರ್ ಮಲ್ಟಿ ಲ್ಯಾಟರಲಿಸಂನ ವರ್ಚುವಲ್ ಮಿನಿಸ್ಟ್ರಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವರು, ಜಗತ್ತು ಒಂದು ಬದಲಾವಣೆಯ ಹಂತದಲ್ಲಿ ನಿಂತಿದೆ. ಜೊತೆಗೆ ಸಾಂಕ್ರಾಮಿಕ ರೋಗ ಮತ್ತು ತಪ್ಪು ಮಾಹಿತಿ ವೈರಲ್ ಆಗುತ್ತಿರುವ ದ್ವಿಮುಖ ದಾಳಿಯನ್ನು ಎದುರಿಸುತ್ತಿದೆ ಎಂದು ಒತ್ತಿ ಹೇಳಿದರು.

ಇದೀಗ ಮತ್ತೊಮ್ಮೆ ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಸಾಂಕ್ರಾಮಿಕ ರೋಗವು ನಮ್ಮ ಜಾಗತಿಕ, ಆರ್ಥಿಕ ವ್ಯವಸ್ಥೆಯನ್ನು ನಾಶಮಾಡಿದೆ. ಜೊತೆಗೆ 40,0000 ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದೇವೆ. ಇದರಿಂದ ನಾವು ವಾಸಿಸುವ ಸ್ಥಳ, ಕೆಲಸ, ಪ್ರಯಾಣ ಮತ್ತು ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ ಎಂದು ಕಳವಳವನ್ನೂ ವ್ಯಕ್ತಪಡಿಸಿದರು.

ಕೊರೊನಾ ವೈರಸ್​​ ನಮ್ಮ ಜೀವನ ವಿಧಾನವನ್ನು ಶಾಶ್ವತವಾಗಿ ಬದಲಿಸಿದೆ, ಈ ಹಿಂದೆಯೇ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿ ಮತ್ತು ಉದ್ದೇಶಿತ ತಪ್ಪುಗಳ ಮೂಲಕ ಮಾನವನ ಸಂಬಂಧದ ಮೇಲೆ ಪರಿಣಾಮ ಬೀರಿತ್ತು. ಇದೀಗ ಸಾಂಕ್ರಾಮಿಕ ರೋಗದಿಂದಾಗಿ ಅದು ಮತ್ತಷ್ಟು ಹದಗೆಟ್ಟಿದೆ ಎಂದರು.

ನಾವೀಗ ಎರಡು ಸವಾಲುಗಳನ್ನು ಎದುರಿಸಲು ಮುಂದಿನ ದಾರಿ ಹುಡುಕಬೇಕಿದೆ ವೈಜ್ಞಾನಿಕ ವಿಧಾನಗಳಲ್ಲಿ ನಂಬಿಕೆಯನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ವಿದೇಶಾಂಗ ಸಚಿವರು ಸಭೆಯಲ್ಲಿ ಪ್ರತಿಪಾದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.