ETV Bharat / bharat

ತಮ್ಮ ಬಂದೂಕಿನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಧರಂ ಜಾಗರಣ್​ ಮಂಚ್​ನ ಜಿಲ್ಲಾ ಸಂಚಾಲಕರೊಬ್ಬರು ತಮ್ಮ ಬಂದೂಕಿನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಗೂಢ ರೀತಿಯ ಸಾವು ಸಂಭವಿಸಿದ್ದರಿಂದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

author img

By

Published : Nov 7, 2020, 3:58 PM IST

Dharam Jagran leader allegedly shoots self in Jhalawar of Rajasthan, dies
ಸಾಂದರ್ಭಿಕ ಚಿತ್ರ

ಝಲವಾರ್​(ರಾಜಸ್ಥಾನ) : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ಧರಂ ಜಾಗರಣ್​ ಮಂಚ್​ನ ಜಿಲ್ಲಾ ಸಂಚಾಲಕರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಝಲವಾರ್​​ನಲ್ಲಿ ನಡೆದಿದೆ.

ಮಹಿಪಾಲ್ ಸಿಂಗ್ ಶಕ್ತಾವತ್ ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾ ಸಂಚಾಲಕ ಎಂದು ತಿಳಿದು ಬಂದಿದೆ. ಮಹಿಪಾಲ್ ಇಂದು ಬೆಳಗ್ಗೆ 6.30 ರ ಸುಮಾರಿಗೆ ಅವರ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಪಾಲ್ ತಮ್ಮ ಬಂದೂಕಿನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಯಾವುದೇ ರೀತಿಯ ಡೆತ್​ ನೋಟ್​ ಕೂಡಾ ಲಭ್ಯವಾಗಿಲ್ಲ. ಹಾಗಾಗಿ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

ಅಲ್ಲಿನ ಎಸ್‌ಆರ್‌ಜಿ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು. ಝಲವಾರ್ ಕೊಟ್ವಾಲಿ ಪೊಲೀಸ್ ಠಾಣೆಯ ಸಿಐ ಬಲ್ವೀರ್ ಸಿಂಗ್ ಅವರು ಆಸ್ಪತ್ರೆಯಿಂದ ಸಾವಿನ ಖಚಿತತೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿಗೂಢ ರೀತಿಯ ಸಾವು ಸಂಭವಿಸಿದ್ದರಿಂದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.