ETV Bharat / bharat

ನಿಯಮ ಉಲ್ಲಂಘಿಸಿದರೆ 2 ವಾರ ವಿಮಾನ ಮಾರ್ಗ ರದ್ದು: ಡಿಜಿಸಿಎ ಹೊಸ ಆದೇಶ - ವಿಮಾನ ನಿಯಮಗಳ ಉಲ್ಲಂಘನೆ

ಏರೋಡ್ರೋಮ್‌ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ ಯಾವುದೇ ವ್ಯಕ್ತಿಯ ವೈಯಕ್ತಿಕ ಫೋಟೋ ತೆಗೆದರೆ ಕ್ರಮ ಕೈಗೊಳ್ಳುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ. ತಪ್ಪು ಸಾಬೀತಾದರೆ ವಿಮಾನ ಸಂಸ್ಥೆಗೆ ನೀಡಲಾದ ಮಾರ್ಗವನ್ನು 2 ವಾರಗಳ ಕಾಲ ರದ್ದು ಮಾಡುವಂತಹ ಹೊಸ ಆದೇಶವನ್ನು ಹೊರಡಿಸಿದೆ.

dgca-warns-airlines-of-suspending-route-for-2-weeks-upon-rule-violation
ನಿಯಮ ಉಲ್ಲಂಘಿಸಿದರೆ 2 ವಾರ ವಿಮಾನ ಮಾರ್ಗ ರದ್ದು; ಡಿಜಿಸಿಎ ಹೊಸ ಆದೇಶ
author img

By

Published : Sep 12, 2020, 3:21 PM IST

ನವದೆಹಲಿ: ವಿಮಾನಯಾನ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿದರೆ 2 ವಾರಗಳ ಕಾಲ ತಮಗೆ ನೀಡುವ ವಿಮಾನ ಮಾರ್ಗಗಳನ್ನು ರದ್ದು ಮಾಡುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಎಚ್ಚರಿಸಿದೆ.

ಏರೋಡ್ರೋಮ್‌ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಫೋಟೋ ತೆಗೆದರೆ ಕ್ರಮ ಕೈಗೊಳ್ಳುವುದಾಗಿ ಎಲ್ಲಾ ಪ್ರಾದೇಶಿಕ ವಿಮಾನ ಸಂಸ್ಥೆಗಳು, ಭಾರತದ ಏರ್​ಪೋರ್ಟ್‌ ಪ್ರಾಧಿಕಾರ, ಇತರೆ ಕಾರ್ಯನಿರ್ವಹಣ ಸಂಸ್ಥೆಗಳಿಗೆ ಡಿಜಿಸಿಎ ಇಂದು ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸಿದರೆ ಈ ಹೊಸ ಆದೇಶವನ್ನು ಜಾರಿಗೆ ಮಾಡುವುದಾಗಿ ತಿಳಿಸಿದೆ.

ಸೆಪ್ಟೆಂಬರ್‌ 9ರಂದು ಬಾಲಿವುಡ್‌ ನಟಿ ಕಂಗನಾ ರನೌತ್​‌ ಇಂಡಿಗೋ ವಿಮಾನದಲ್ಲಿ ಚಲಿಸುತ್ತಿದ್ದಾಗ ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್ ಗೆ‌ ಅವಕಾಶ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಮಾತ್ರವಲ್ಲದೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಈ ವಿಡಿಯೋ ವೈರಲ್‌ ಆಗಿ ಸುದ್ದಿಗೆ ಗ್ರಾಸವಾಗಿತ್ತು. ಈ ಸಂಬಂಧ ಡಿಜಿಸಿಎ ಇಂಡಿಯೋ ಸಂಸ್ಥೆಗೆ ವರದಿ ಕೇಳಿದ ಮರು ದಿನವೇ ಹೊಸ ಆದೇಶ ಜಾರಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.