ETV Bharat / bharat

ವಿಶೇಷ ಲೇಖನ.. ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ಸಂಸ್ಥೆಗಳೇ ಆಶ್ರಯದಾತ.. - ಮಾಜಿ ಆರ್‌ಬಿಐ ಗವರ್ನರ್ ಎಂ. ನರಸಿಂಹನ್

2014ರ ಆರಂಭದಲ್ಲಿ ಮೂಲಸೌಕರ್ಯಕ್ಕೆ ಮೋದಿ ಸರ್ಕಾರ ಒತ್ತು ನೀಡುವುದನ್ನು ಪ್ರಾರಂಭಿಸಿದ ಕೂಡಲೇ ಈ ಸಮಸ್ಯೆ ಕಾಡಿತ್ತು. ಈ ಕಗ್ಗಂಟನ್ನು ಪರಿಹರಿಸಲು ಮೋದಿ ಸರ್ಕಾರವು, ಯೋಜಿತ ಆದಾಯದ ಒಂದು ಭಾಗವನ್ನು ಖಾಸಗಿ ವಲಯದ ಬೂಟ್ ಡೆವಲಪರ್‌ಗೆ ಖಚಿತವಾಗಿ ಹಿಂದಿರುಗಿಸುವಂತಹ ಹೈಬ್ರಿಡ್ ವಾರ್ಷಿಕ ಮಾದರಿಯನ್ನು ಅನುಸರಿಸಲು ಪ್ರಯತ್ನಿಸಿತ್ತು..

development-finance-institution-will-speed-up-infra-building
ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ಸಂಸ್ಥೆಗಳೇ ಆಶ್ರಯದಾತ
author img

By

Published : Feb 4, 2021, 9:06 AM IST

ನವದೆಹಲಿ : ಉದಾರೀಕರಣದ ಮೂರು ದಶಕಗಳ ನಂತರ, ಸಾಕಷ್ಟು ದೀರ್ಘಾವಧಿಯ ಸಾಲ ಆಯ್ಕೆಗಳ ಮೂಲಕ, ಭಾರತವು ಆಧುನಿಕ ಹಣಕಾಸು ಮಾರುಕಟ್ಟೆ ನಿರ್ಮಾಣಕ್ಕೆ ಅಂತಿಮವಾಗಿ ಉತ್ಸುಕತೆ ತೋರುತ್ತಿದೆ. ಒಂದು ವೇಳೆ ಈ ಉಪಕ್ರಮವು ಯಶಸ್ವಿಯಾದರೆ, ಮೂಲಸೌಕರ್ಯ ನಿರ್ಮಾಣಕ್ಕೆ ಲಾಭ ನೀಡುವುದಷ್ಟೇ ಅಲ್ಲ, ಎನ್‌ಪಿಎ (ಅನುತ್ಪಾದಕ ಆಸ್ತಿ) ಆಘಾತಗಳಿಂದ ಕೂಡಾ ಹಣಕಾಸು ವ್ಯವಸ್ಥೆಯನ್ನು ಅಪಾಯದಿಂದ ಕಾಪಾಡಬಲ್ಲುದು.

1973ರ ಹಿಂದಿ ಚಲನಚಿತ್ರ ‘ಸೌದಾಗರ್’ನಲ್ಲಿ ವ್ಯಕ್ತವಾದ ಮಾದರಿಯಂತೆ ಇದು ಕಾಣುತ್ತಿದೆ. ಮನೆಯಲ್ಲಿ ತಯಾರಿಸಿದ ಬೆಲ್ಲದ ಮಾರಾಟಗಾರ ಅಮಿತಾಬ್ ಬಚ್ಚನ್ ಅವರು ಸುಂದರಿ ಪದ್ಮಾ ಖನ್ನಾಳಿಗಾಗಿ ತಾವೊಮ್ಮೆ ವಿಚ್ಛೇದನ ನೀಡಿದ್ದ ನೂತನ್ ಅವರ ಮೌಲ್ಯವನ್ನು ಅರಿತುಕೊಂಡಿದ್ದು ಗ್ರಾಹಕರು ತಮ್ಮ ಉತ್ಪನ್ನಗಳನ್ನು ತಿರಸ್ಕರಿಸಿದ ನಂತರ. ಈ ಮಾದರಿಯೂ ಹಾಗೇ ಇದೆ.

20,000 ಕೋಟಿ ರೂ.ಗಳ ಆರಂಭಿಕ ಬಂಡವಾಳದೊಂದಿಗೆ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು (ಡಿಎಫ್‌ಐ) ಮರುಸೃಷ್ಟಿಸಲು ಮತ್ತು ಖಾಸಗಿ ಮಾಲಿಕತ್ವದಲ್ಲಿ ಅಂತಹ ಇನ್ನಷ್ಟು ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೈಗೊಂಡಿರುವ ನಿರ್ಧಾರವು ಮೂಲಸೌಕರ್ಯ ಹಣಕಾಸು ಮತ್ತು ಇನ್ನಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ಸೌದಾಗರ್ ಚಿತ್ರದ ರೀತಿಯ ಸಂದರ್ಭ ತಲೆದೋರುವುದನ್ನು ನಿವಾರಿಸಿದೆ.

ಉದಾರೀಕರಣದ ಮೂರು ದಶಕಗಳ ನಂತರ, ಸಾಕಷ್ಟು ದೀರ್ಘಾವಧಿಯ ಸಾಲ ಆಯ್ಕೆಗಳ ಮೂಲಕ, ಭಾರತವು ಆಧುನಿಕ ಹಣಕಾಸು ಮಾರುಕಟ್ಟೆ ನಿರ್ಮಾಣಕ್ಕೆ ಅಂತಿಮವಾಗಿ ಉತ್ಸುಕತೆ ತೋರುತ್ತಿದೆ. ಒಂದು ವೇಳೆ ಈ ಉಪಕ್ರಮವು ಯಶಸ್ವಿಯಾದರೆ, ಮೂಲಸೌಕರ್ಯ ನಿರ್ಮಾಣಕ್ಕೆ ಲಾಭ ನೀಡುವುದಷ್ಟೇ ಅಲ್ಲ, ಎನ್‌ಪಿಎ (ಅನುತ್ಪಾದಕ ಆಸ್ತಿ) ಆಘಾತಗಳಿಂದ ಕೂಡಾ ಹಣಕಾಸು ವ್ಯವಸ್ಥೆಯನ್ನು ಅಪಾಯದಿಂದ ಕಾಪಾಡಬಲ್ಲುದು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯ (ಎಫ್‌ಐಐ-ಫಾರೆನ್‌ ಇನ್ಸಿಟ್ಯೂಷನಲ್‌ ಇನ್ವೆಸ್ಟ್‌), ವಿಶೇಷವಾಗಿ ಪಿಂಚಣಿ ನಿಧಿಯಿಂದ, ಒಳಹರಿವನ್ನು ಹೆಚ್ಚಿಸಬಲ್ಲುದು.

ಸತ್ಯ ಎಂದು ಸಾಬೀತಾದ ದಾಸ್‌ ಮುನ್ಷಿ

ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ ಭಾರತದ ಮೂಲಸೌಕರ್ಯ ಅಭಿವೃದ್ಧಿ ಬ್ಯಾಂಕ್‌) ಕಾಯ್ದೆ, 1964 ಅನ್ನು ಸಂಸತ್ತು ರದ್ದುಪಡಿಸುವವರೆಗೂ, 2003ರ ವರೆಗೆ ಭಾರತದ ಆರ್ಥಿಕ ಭೂದೃಶ್ಯದ ಪೈಕಿ ಡಿಎಫ್‌ಐಗಳು ಪ್ರಮುಖ ಭಾಗವಾಗಿದ್ದವು.

ಐಡಿಬಿಐ ಪ್ರಧಾನ ಡಿಎಫ್‌ಐ ಆಗಿದ್ದು, ಆಗ ಎರಡು ದೊಡ್ಡ ಡಿಎಫ್‌ಐಗಳಾಗಿದ್ದ- ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಐಎಫ್‌ಸಿಐ) ಮತ್ತು ಕೈಗಾರಿಕಾ ಸಾಲ ಮತ್ತು ಹೂಡಿಕೆ ಕಾರ್ಪೊರೇಷನ್ ಆಫ್ ಇಂಡಿಯಾ (ಐಸಿಐಸಿಐ) ಹಾಗೂ ಇತರ ಸಣ್ಣ ಸಂಸ್ಥೆಗಳ ನಿಯಂತ್ರಕನಾಗಿ ಕಾರ್ಯ ನಿರ್ವಹಿಸುತ್ತಿತ್ತು.

ಮಾಜಿ ಆರ್‌ಬಿಐ ಗವರ್ನರ್ ಎಂ. ನರಸಿಂಹನ್ ಮತ್ತು ಐಡಿಬಿಐ ಅಧ್ಯಕ್ಷ ಎಸ್.ಎಚ್. ಖಾನ್ ನೇತೃತ್ವದ ಎರಡು ಉನ್ನತ ತಜ್ಞರ ಸಮಿತಿಗಳು ಸಾರ್ವತ್ರಿಕ ಬ್ಯಾಂಕಿಂಗ್ ಮತ್ತು ಅವಧಿ ಸಾಲಗಳ ಮೇಲೆ ಡಿಎಫ್‌ಐಗಳು ಅಕ್ಷರಶಃ ಹೊಂದಿದ್ದ ಏಕಸ್ವಾಮ್ಯವನ್ನು ರದ್ದುಗೊಳಿಸಲು ಶಿಫಾರಸು ಮಾಡಿದಾಗ, 1998ರ ಹಿಂದೆಯೇ ಇಂತಹ ನಿರ್ಧಾರದ ಮುನ್ಸೂಚನೆ ಸಿಕ್ಕಿತ್ತು.

ಈ ವರದಿಯನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಸರ್ಕಾರವು ಮೊದಲು ಅವಧಿ ಸಾಲ ಪ್ರಾರಂಭಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿತು. ಈ ಅವಕಾಶ ಬಳಸಿಕೊಂಡ ಐಸಿಐಸಿಐ ಬ್ಯಾಂಕನ್ನು ತೆರೆಯಿತು. ಆಗ ಡಿಎಫ್‌ಐ ನಿಯಂತ್ರಣ ಕಾಯ್ದೆಯನ್ನು ರದ್ದುಪಡಿಸುವುದು ಕೇವಲ ಔಪಚಾರಿಕ ಕ್ರಿಯೆಯಾಗಿತ್ತು.

ಯಾವುದೇ ಡಿಎಫ್‌ಐ ಇಲ್ಲದೆ ಅಮೆರಿಕ ಕಾರ್ಯನಿರ್ವಹಿಸುತ್ತಿದೆ ಎಂದು ತಜ್ಞರು ಆಗ ವಾದಿಸಿದ್ದರು.

ಕೊನೆಗೆ ಒಬ್ಬನೇ ಒಬ್ಬ ಸಂಸದ, ಕಾಂಗ್ರಸ್‌ನ ದಿವಂಗತ ಪ್ರಿಯ ರಂಜನ್ ದಾಸ್‌ ಮುನ್ಷಿ ಅವರು ಸಂಸತ್ತಿನಲ್ಲಿ ಈ ಕ್ರಮವನ್ನು ವಿರೋಧಿಸಿದರು. ತನ್ನ ನಿರ್ಧಾರವನ್ನು ಸರ್ಕಾರ ಪುನರ್ವಿಮರ್ಶೆ ಮಾಡಬೇಕೆಂದು ಅವರು ಬಯಸಿದ್ದರು. ಎರಡು ದಶಕಗಳ ನಂತರ, ದಾಸ್‌ಮುನ್ಷಿ ಅವರ ಅಭಿಪ್ರಾಯ ಸರಿಯಾಗಿತ್ತು ಎಂಬುದು ಸಾಬೀತಾಗಿದೆ.

ಗಂಭೀರ ನ್ಯೂನತೆ

ಬ್ಯಾಂಕಿಂಗ್ ಭಾಷೆಯಲ್ಲಿ ಅವಧಿ ಸಾಲವು ‘ಸಂಪನ್ಮೂಲ-ರಹಿತ ಸಾಲ’ ಎಂದು ಅರ್ಥೈಸಲಾಗುತ್ತದೆ. ಅಂದರೆ ಅಂತಹ ಸಾಲಗಳನ್ನು ಅಢಾವೆ ಪತ್ರಿಕೆಯು (ಬ್ಯಾಲೆನ್ಸ್ ಶೀಟ್) ಬೆಂಬಲಿಸುವುದಿಲ್ಲವಾದ್ದರಿಂದ ಅವು ಅಪಾಯಕಾರಿ. ಆದಾಗ್ಯೂ, ಬೆಳೆಯುತ್ತಿರುವ ಆರ್ಥಿಕತೆಗೆ ಅಂತಹ ಸಾಲಗಳು ನಿರ್ಣಾಯಕ ಎನಿಸಿವೆ.

ಏಕೆಂದರೆ ಹೆಚ್ಚಿನ ಆರ್ಥಿಕ ಆಸ್ತಿಯಿಲ್ಲದ ಸಣ್ಣ ಉದ್ಯಮಿಗಳು ಇಂತಹ ಸಾಲಗಳನ್ನು ದೊಡ್ಡದಾಗಿ ಗುರಿ ಮಾಡುತ್ತಾರೆ. ಈ ಅವಕಾಶವನ್ನು ತೆಗೆದು ಹಾಕುವುದು ಎಂದರೆ, ಸಾಲಗಳನ್ನು ದೊಡ್ಡ ಗುಂಪುಗಳಿಗೆ ಮತ್ತು ಕಡಿಮೆ-ಅಪಾಯಕಾರಿ ಯೋಜನೆಗಳಿಗೆ ಮಾತ್ರ ನಿರ್ದೇಶಿಸಲಾಗುತ್ತದೆ ಎಂದರ್ಥ.

ವೃತ್ತಿಪರನಾಗಿ ಬದಲಾದ ಉದ್ಯಮಿಯಿಂದ ಚಾಲನೆ ಪಡೆದುಕೊಂಡಿರುವ ಹಲ್ದಿಯಾ ಪೆಟ್ರೋಕೆಮಿಕಲ್ಸ್ ಉದ್ಯಮವು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎನಿಸಿದೆ. ಕಡಿಮೆ ಪ್ರಸಿದ್ಧ ಪ್ರವರ್ತಕರು ಸ್ಥಾಪಿಸಿದ ಹಲವಾರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಕಳೆದ ದಶಕದಲ್ಲಿ, ಅವಧಿ ಸಾಲದ ಸೌಲಭ್ಯಗಳನ್ನು ಪಡೆದುಕೊಂಡವು. ಹೆದ್ದಾರಿ ಮೂಲಸೌಕರ್ಯ ಕಟ್ಟಡದ ಯೋಜನೆಗಳಲ್ಲಿ ಸಾಮಾನ್ಯವಾಗಿರುವ ಬೂಟ್ (ಬಿಲ್ಡ್ ಓನ್‌ ಆಪರೇಟ್‌ ಟ್ರಾನ್ಸಫರ್‌ ನಿರ್ಮಿಸು, ಮಾಲೀಕನಾಗು, ಕಾರ್ಯಾಚರಿಸು, ವರ್ಗಾಯಿಸು) ಯೋಜನೆಗಳಿಗೆ ಅವಧಿ ಸಾಲ ಅಗತ್ಯವಾಗಿತ್ತು.

ತನ್ನ ಕಡೆಯಿಂದ ಆಗಬಹುದಾದ ತಪ್ಪುಗಳು ಎಷ್ಟರ ಮಟ್ಟಿಗೆ ಇರುತ್ತವೆ ಎಂಬುದನ್ನು ಬೂಟ್ ಅಭಿವೃದ್ಧಿಕಾರನೊಬ್ಬ ಖಚಿತವಾಗಿ ಹೇಳುತ್ತಾನೆ. ಆದರೆ, ಭೂಸ್ವಾಧೀನತೆಯಲ್ಲಿ ಆಗುವ ವಿಳಂಬ ಅಥವಾ ಯೋಜಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ರಸ್ತೆ ಶುಲ್ಕ ಸಂಗ್ರಹಕ್ಕೆ ಅವನನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ.

ಅಲ್ಲದೇ ಪ್ರಸ್ತಾವನೆಗಳು ತಪ್ಪಾಗಿ, ಸಾಲಗಾರನಿಗೆ ಹಣವನ್ನು ಮರುಪಡೆಯಲು ಹೆಚ್ಚಿನ ಆಯ್ಕೆಗಳು ಅಲ್ಲಿ ಉಳಿಯುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವಧಿ ಸಾಲ ನೀಡಿಕೆ ಒಂದು ವಿಶೇಷ ಕಾರ್ಯವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದಾರೀಕರಣವನ್ನು ಸಮರ್ಥಿಸಲಾಗಿದ್ದರೂ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ (1998-2004) ಮತ್ತು ಮನಮೋಹನ್ ಸಿಂಗ್ ಸರ್ಕಾರಗಳೆರಡೂ (2004-2014) ಅಂತಹ ತಜ್ಞರಿಗೆ ಅವಕಾಶ ಸೃಷ್ಟಿಸುವಲ್ಲಿ ವಿಫಲವಾದವು.

ಅಲ್ಲದೇ, ದೇಶವು ದೀರ್ಘಕಾಲೀನ ಬಾಂಡ್ ಮಾರುಕಟ್ಟೆಯನ್ನು ಹೊಂದಿರಲಿಲ್ಲ. ಸಾಲ ವಿಸ್ತರಣೆಗೆ ಆರ್‌ಬಿಐ ವಿಧಿಸಿದ್ದ ನಿರ್ಬಂಧಗಳು ಅಂತಹ ಮಾರುಕಟ್ಟೆ ಸೃಷ್ಟಿಸುವಲ್ಲಿ ಅಡ್ಡಗಂಟಾಗಿ ಪರಿಣಮಿಸಿದವು. ಸಮಾಜವಾದಿ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ – ಎಂಪ್ಲಾಯೀಸ್‌ ಪ್ರಾವಿಡಂಟ್‌ ಫಂಡ್‌ ಆರ್ಗನೈಜೇಶನ್‌) ಮಾರುಕಟ್ಟೆ ಚಾಲಿತ ಪಿಂಚಣಿ ನಿಧಿಗಳ ಬೆಳವಣಿಗೆಯನ್ನು ಕಷ್ಟಕರಗೊಳಿಸಿತು.

ಇದರ ಪರಿಣಾಮ ದುರಂತಮಯವಾಗಿತ್ತು. 2004 ಮತ್ತು 2009ರ ನಡುವಿನ ಉತ್ಕರ್ಷದ ಸಮಯದಲ್ಲಿ ಸಣ್ಣ ಗಾತ್ರದ ಬ್ಯಾಂಕುಗಳ ಸಮೂಹವು ಗುಂಪುಗುಂಪಾಗಿ ಅವಧಿ ಸಾಲ ನೀಡುವ ಹುಚ್ಚು ಓಟಕ್ಕೆ ಸೇರಿಕೊಂಡಿತು.

15 ವರ್ಷಗಳ ಅವಧಿಯಲ್ಲಿ ವಾಪಾಸಾಗುವಂತಹ ಹೆದ್ದಾರಿ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಅವು ಅಲ್ಪಾವಧಿಯ (ಎರಡು ಮೂರು ವರ್ಷ) ಠೇವಣಿಗಳನ್ನು ಬಳಸುತ್ತಿದ್ದವು.

ಆದರೆ, ಹೆದ್ದಾರಿ ಯೋಜನೆಗಳು ಭೂಸ್ವಾಧೀನ ವಿಳಂಬದಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದಂತೆ ಅಥವಾ ನಿರೀಕ್ಷೆ ಮಾಡಿದ ಸಂಭಾವನೆ ದರದಲ್ಲಿ ಹೆಚ್ಚಿನ ವಿದ್ಯುತ್ ಮಾರಾಟ ಮಾಡಲು ವಿದ್ಯುತ್ ಸ್ಥಾವರಗಳು ವಿಫಲವಾದ ಕಾರಣ, ಎಲ್ಲರೂ ತೊಂದರೆ ಅನುಭವಿಸಿದರು. ಮರುಪಾವತಿ ಏಟು ತಿನ್ನುತ್ತಿದ್ದಂತೆ, ನಿರ್ಮಾಣಗಾರರು ದಿವಾಳಿಯಾದರು. ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿ ಪೇರಿಸಲ್ಪಟ್ಟಿತು.

ಅವಧಿ ಸಾಲ ಇಲ್ಲ

ಒಟ್ಟಾರೆ ಫಲಿತಾಂಶ ಏನೆಂದರೆ, ಇಂದು ಬ್ಯಾಂಕುಗಳು ಹಣದಿಂದ ತುಂಬಿಹೋಗಿವೆಯಾದರೂ ಅವು ಅವಧಿ ಸಾಲ ನೀಡುವುದನ್ನು ಬಹುತೇಕ ನಿಲ್ಲಿಸಿಬಿಟ್ಟಿವೆ. ಯೋಜನೆಗಳಿಗೆ ಅವು ಹಣಕಾಸು ನೆರವನ್ನು ನೀಡುತ್ತವಾದರೂ, ಅವೇನಿದ್ದರೂ ಉತ್ತಮ ಅಢಾವೆ ಪತ್ರಿಕೆ ಹೊಂದಿರುವಂತಹ ಕಂಪನಿಗಳಿಗೆ ಮಾತ್ರ. ಬ್ಯಾಂಕಿಂಗ್ ಭಾಷೆಯಲ್ಲಿ ಇದನ್ನು ಕಾರ್ಪೊರೇಟ್ ಸಾಲ ಎಂದು ಕರೆಯಲಾಗುತ್ತದೆ. ನಿಶ್ಚಿತವಾಗಿ ಹಿಂದಿರುಗುತ್ತದೆ ಎಂಬ ಭರವಸೆಯೊಂದಿಗೆ ನಗದನ್ನು ಆರ್‌ಬಿಐನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

2014ರ ಆರಂಭದಲ್ಲಿ ಮೂಲಸೌಕರ್ಯಕ್ಕೆ ಮೋದಿ ಸರ್ಕಾರ ಒತ್ತು ನೀಡುವುದನ್ನು ಪ್ರಾರಂಭಿಸಿದ ಕೂಡಲೇ ಈ ಸಮಸ್ಯೆ ಕಾಡಿತ್ತು. ಈ ಕಗ್ಗಂಟನ್ನು ಪರಿಹರಿಸಲು ಮೋದಿ ಸರ್ಕಾರವು, ಯೋಜಿತ ಆದಾಯದ ಒಂದು ಭಾಗವನ್ನು ಖಾಸಗಿ ವಲಯದ ಬೂಟ್ ಡೆವಲಪರ್‌ಗೆ ಖಚಿತವಾಗಿ ಹಿಂದಿರುಗಿಸುವಂತಹ ಹೈಬ್ರಿಡ್ ವಾರ್ಷಿಕ ಮಾದರಿಯನ್ನು (ಎಚ್‌ಎಎಂ ಹೈಬ್ರಿಡ್‌ ಅನ್ಯುಯಿಟಿ ಮಾಡೆಲ್) ಅನುಸರಿಸಲು ಮೊದಲು ಪ್ರಯತ್ನಿಸಿತು.

ಆದಾಗ್ಯೂ, ಸರಕಾರದ ಈ ಕ್ರಮ ಬ್ಯಾಂಕುಗಳ ಮೆಚ್ಚುಗೆ ಗಳಿಸುವಲ್ಲಿ ವಿಫಲವಾದ್ದರಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಥವಾ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಯೋಜನೆಗಳಿಗೆ ಹಣಕಾಸು ನೆರವು ನೀಡುವಂತಹ ಇಪಿಸಿ (ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ) ಮಾದರಿಗೆ ಸರ್ಕಾರ ಅಂತಿಮವಾಗಿ ಸ್ಥಳಾಂತರಗೊಂಡಿತು. ಇಲ್ಲಿ ಖಾಸಗಿ ವಲಯವು ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತದೆ.

ಭಾರತದ ಕೊರತೆ ಹಣಕಾಸು ಹಾಗೂ ಮೂಲಸೌಕರ್ಯ ನಿರ್ಮಾಣದ ದೊಡ್ಡ ಅಗತ್ಯವನ್ನು ಪರಿಗಣಿಸುವುದಾದರೆ, ಇದು ನಮಗೆ ಸಮರ್ಥ ಮಾದರಿಯಲ್ಲ. ಏಕೆಂದರೆ, ಇದು ನಿಧಿಯ ಲಭ್ಯತೆಯನ್ನು NHAI ಅಥವಾ NHIDCLನ ಅಢಾವೆ ಪತ್ರಿಕೆಯ ಸಾಮರ್ಥ್ಯದ ಮಟ್ಟಕ್ಕೆ ಸೀಮಿತಗೊಳಿಸುತ್ತದೆ. ಮೂಲ ಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂತಹ, ಮುಖ್ಯವಾಗಿ ಭೂಸ್ವಾಧೀನದಂತಹ, ಸಮಸ್ಯೆಗಳು ಇಲ್ಲ. ಅಲ್ಲದೆ, ಅಮೆರಿಕವು ಅಭಿವೃದ್ಧಿ ಹೊಂದುತ್ತಿರುವ ಬಾಂಡ್ ಮಾರುಕಟ್ಟೆಯನ್ನು ಹೊಂದಿದೆ. ಆಸ್ಟ್ರೇಲಿಯಾವು ಯೋಜನೆಯಿಂದ ಹಣಗಳಿಸುವಂತಹ ಶ್ರೀಮಂತ ಉದ್ಯಮವನ್ನು ಹೊಂದಿದೆ.

ಹಣಗಳಿಕೆ ಯೋಜನೆ

ತಮ್ಮ ಬಜೆಟ್ ಪ್ರಸ್ತಾವನೆಯಲ್ಲಿ, ಹಣಕಾಸು ಸಚಿವರು ಮೂರು ಕ್ಷೇತ್ರಗಳನ್ನು ಗುರಿ ಮಾಡಿಕೊಂಡಿದ್ದಾರೆ: ಮೊದಲನೆಯದಾಗಿ, ಸರ್ಕಾರವು ಈಗ ಹಣಗಳಿಕೆ ಯೋಜನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರರ್ಥ: ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ನಿಂದ ಪೂರ್ಣಗೊಂಡ ಯೋಜನೆಗಳನ್ನು ನಿರ್ಬಂಧಿಸಲಾಗುವುದು ಮತ್ತು ಅವನ್ನು ಖಾಸಗಿ ಪ್ರವರ್ತಕರಿಗೆ ನಿಶ್ಚಿತ ಮೌಲ್ಯಕ್ಕೆ ನೀಡಲಾಗುವುದು.

ಖಾಸಗಿ ವಲಯವು ಬಳಕೆದಾರರಿಂದ ಆದಾಯವನ್ನು ಗಳಿಸುತ್ತದೆ. ಇದು ಮೌಲ್ಯವನ್ನು ಅನಿರ್ಬಂಧ ಮಾಡುವುದಲ್ಲದೇ ಎನ್‌ಎಚ್‌ಎಐ ಅಥವಾ ಎನ್‌ಎಚ್‌ಐಡಿಸಿಎಲ್‌ನಂತಹ ಕಾರ್ಯಗತಗೊಳಿಸುವ ಏಜೆನ್ಸಿಯ ಅಢಾವೆ ಪತ್ರಿಕೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಅವರ ಸಾಲ ಅರ್ಹತೆಯು ಸುಧಾರಿಸಿ, ಭವಿಷ್ಯದ ಮೂಲಸೌಕರ್ಯ ರಚನೆಯನ್ನು ವೇಗಗೊಳಿಸುತ್ತದೆ. ಸದ್ಯಕ್ಕೆ ಇದು ಹೊಸ ಪರಿಕಲ್ಪನೆಯಾಗಿರುವುದರಿಂದ, ಮಾಗಲು ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು. ಆದರೂ, ವಿತ್ತ ಸಚಿವರ ಈ ಕ್ರಮ ಶ್ಲಾಘನೀಯ.

ಸಾಲ ಮಾರುಕಟ್ಟೆಯು ಪ್ರವರ್ಧಮಾನಕ್ಕೆ ಬರುವುದನ್ನು ನೋಡಲು ವಿತ್ತ ಸಚಿವೆ ಸೀತಾರಾಮನ್ ಅಷ್ಟೇ ಉತ್ಸುಕರಾಗಿದ್ದಾರೆ. ಆದರೆ, ಅದು ಅಷ್ಟು ಸುಲಭವಾಗಿ ಈಡೇರುವಂಥದಲ್ಲ. ಈ ಹಿನ್ನೆಲೆಯಲ್ಲಿ ಮೊದಲು ಅವರು ಬಂಡವಾಳ ಹೂಡಿಕೆದಾರರಿಗೆ ದೀರ್ಘಾವಧಿಯ ಹೂಡಿಕೆ ಆಯ್ಕೆಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಿರುವ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳ ರಚನೆಯನ್ನು ಪ್ರಸ್ತಾಪಿಸಿದ್ದಾರೆ.

ಇವು ಪರಿಶೋಧನಾತ್ಮಕ ಹಂತಗಳಾಗಿದ್ದು, ನಿರ್ದಿಷ್ಟ ಉದ್ಯಮದಲ್ಲಿನ ನಿಯಂತ್ರಕ ಪರಿಸರ ವ್ಯವಸ್ಥೆಯೂ ಸೇರಿದಂತೆ ಅನೇಕ ಅನುಷ್ಠಾನ ವಿಷಯಗಳ ಮೇಲೆ ಉಪಕ್ರಮಗಳ ಯಶಸ್ಸು ಅವಲಂಬಿತವಾಗಿರುತ್ತದೆ. ನಿರಂತರ ರಾಜಕೀಯ ಇಚ್ಛಾಶಕ್ತಿ ಮತ್ತು ನೀತಿ ಸ್ಥಿರತೆಯು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆದಾಗ್ಯೂ, ಡಿಎಫ್‌ಐ ಸ್ಥಾಪಿಸುವ ಪ್ರಸ್ತಾಪದ ಮೂಲಕ ಅವಧಿ ಸಾಲಗಳ ಸಂಸ್ಕೃತಿ ಮತ್ತು ಪರಿಣತಿಯನ್ನು ಮತ್ತೆ ಜಾರಿಗೆ ತರುವಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಒತ್ತಿಹೇಳಿದೆ. ಖಾಸಗಿ ವಲಯ ಕುರಿತು ಪ್ರಸ್ತಾಪಿಸಿದ್ದನ್ನು ನೋಡಿದರೆ, ಏಕಸ್ವಾಮ್ಯವಲ್ಲದ ಆದರೆ, ಸಾಧ್ಯವಾಗಿಸುವ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಲು ಸರ್ಕಾರ ಆಸಕ್ತಿ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ.

ಸದ್ಯಕ್ಕೆ ಇದು ನಿಜಕ್ಕೂ ಉತ್ತಮ ಸುದ್ದಿ. ಯಾಕೆಂದರೆ, ಸರ್ಕಾರದ ಉಪಸ್ಥಿತಿಯು ಸಾಲ ಸಂಸ್ಕೃತಿಯನ್ನು ಹಾಳು ಮಾಡುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳೇ (ಪಿಎಸ್‌ಬಿ) ಅದಕ್ಕೆ ಉತ್ತಮ ಉದಾಹರಣೆ. ಏತನ್ಮಧ್ಯೆ ಪಿಎಸ್‌ಬಿಗಳ ಬಲವರ್ಧನೆಯು ಅವಧಿ ಸಾಲ ನೀಡುವ ಅವಕಾಶವನ್ನೂ ಸೃಷ್ಟಿಸುತ್ತದೆ. ಸ್ಟೇಟ್ ಬ್ಯಾಂಕ್ ಈ ಕ್ಷೇತ್ರದಲ್ಲಿ ತನ್ನ ಪರಿಣತಿಯನ್ನು ಈಗಾಗಲೇ ಸಾಬೀತುಪಡಿಸಿದೆ. ಸರ್ಕಾರವು ಈಗ ಸರಿಯಾದ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಗಮನ ಹರಿಸುವುದರಿಂದ, ದೊಡ್ಡ ಬ್ಯಾಂಕುಗಳು ತಮ್ಮ ಜಡತ್ವ ಕಳಚಿಕೊಳ್ಳಬಹುದು ಹಾಗೂ ಹೊಮ್ಮುತ್ತಿರುವ ಅವಕಾಶವನ್ನು ಬಳಸಿಕೊಳ್ಳಬಹುದು.

- ಪ್ರತಿಮ್ ರಂಜನ್ ಬೋಸ್

(ಲೇಖಕರು ಕೋಲ್ಕತಾ ಮೂಲದ ಹಿರಿಯ ಪತ್ರಕರ್ತರು. ಇಲ್ಲಿನ ಅನಿಸಿಕೆಗಳು ಅವರ ವೈಯಕ್ತಿಕ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.