ನವದೆಹಲಿ: ಹಾಸ್ಟೆಲ್ ಶುಲ್ಕ ಹೆಚ್ಚಳ ಖಂಡಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟದ ಕಿಡಿ ಜ್ವಾಲೆಯಾಗಿ ಹೊತ್ತಿಕೊಳ್ಳುತ್ತಿದೆ. ತಿಂಗಳ ಕಾಲ ಹೋರಾಡಿದರೂ ನ್ಯಾಯ ಸಿಗದಿರುವುದೇ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರಪತಿ ಭವನದತ್ತ ತೆರಳುತ್ತಿದ್ದ ಸಂದರ್ಭ ಉಂಟಾದ ಘರ್ಷಣೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದು ವಿದ್ಯಾರ್ಥಿಗಳ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ. ಅಷ್ಟೇ ಅಲ್ಲದೆ, ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಸಹ ಹೈರಾಣಾಗಿದ್ದಾರೆ.
-
#WATCH: Police resorted to lathicharge after a clash with protesting Jawaharlal Nehru University (JNU) students, who were marching towards Rashtrapati Bhawan to meet President over fee hike issue. pic.twitter.com/sAbuN05n2q
— ANI (@ANI) December 9, 2019 " class="align-text-top noRightClick twitterSection" data="
">#WATCH: Police resorted to lathicharge after a clash with protesting Jawaharlal Nehru University (JNU) students, who were marching towards Rashtrapati Bhawan to meet President over fee hike issue. pic.twitter.com/sAbuN05n2q
— ANI (@ANI) December 9, 2019#WATCH: Police resorted to lathicharge after a clash with protesting Jawaharlal Nehru University (JNU) students, who were marching towards Rashtrapati Bhawan to meet President over fee hike issue. pic.twitter.com/sAbuN05n2q
— ANI (@ANI) December 9, 2019
ಏನಾಯಿತು?: ಪತ್ರದಲ್ಲಿ ತಮ್ಮ ಬೇಡಿಕೆಗಳನ್ನು ಪಟ್ಟಿ ಮಾಡಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ರಾಷ್ಟ್ರಪತಿ ಭವನದತ್ತ ಜೆಎನ್ಯು ವಿದ್ಯಾರ್ಥಿ ಸಂಘಟನೆ ತೆರಳಿತು. ಮುಂಚಿತವಾಗಿಯೇ ಈ ವಿಷಯ ಅರಿತ ಪೊಲೀಸರು, ಬಿಕಾಜಿ ಕಾಮಾ ಮೆಟ್ರೋ ನಿಲ್ದಾಣದ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಒಂದು ವೇಳೆ ಪ್ರತಿಭಟನೆ ಕಾವು ಹೆಚ್ಚಾದಲ್ಲಿ, ಪರಿಸ್ಥಿತಿ ಹತೋಟಿಗೆ ತರಲು ಜಲ ಫಿರಂಗಿ ಪ್ರಯೋಗಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನದತ್ತ ಹೊರಟ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ತುಸು ದೂರದಲ್ಲೇ ತಡೆದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಶಾಂತಿಯುತ ಪ್ರತಿಭಟನೆ ಅವಕಾಶ ಮಾಡಿಕೊಡಿ. ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತೇವೆ. ನಮಗೆ ಅವಕಾಶ ನೀಡಿ ಎಂದು ವಿದ್ಯಾರ್ಥಿ ಸಂಘಟನೆ ಪೊಲೀಸರ ಬಳಿ ಮನವಿ ಮಾಡಿಕೊಂಡಿತು.
ಪೊಲೀಸರು ಇದಕ್ಕೆ ಕಿಮ್ಮತ್ತು ನೀಡದ ಕಾರಣ, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ಭವನದತ್ತ ನುಗ್ಗಲು ಯತ್ನಿಸಿದ ಕೆಲ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ನಡೆಸಿದರು. ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಆದರೂ ಪ್ರತಿಭಟನಾಕಾರರು ಜಗ್ಗಲಿಲ್ಲ.
ಸಂಚಾರ ದಟ್ಟಣೆ: ಪೊಲೀಸರ ಮತ್ತು ವಿದ್ಯಾರ್ಥಿಗಳ ವಾಗ್ವಾದದಿಂದಾಗಿ ಬಿಕಾಜಿ ಕಾಮಾ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಸಂಚಾರ ದಟ್ಟಣೆ ಉಂಟಾಗಿತ್ತು. ಟ್ರಾಫಿಕ್ಗೆ ಸಿಲುಕಿಕೊಂಡ ಸವಾರರು, ಕೋಪವನ್ನು ಅದುಮಿಟ್ಟುಕೊಂಡೇ ಮುಂದೆ ಸಾಗಿದರು.
ಪತ್ರದಲ್ಲಿ ಏನಿತ್ತು?: ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿದೆ. ₹ 10 ಹಾಸ್ಟಲ್ ಶುಲ್ಕವನ್ನು 300ಕ್ಕೆ ₹ 20 ಅನ್ನು 600 ಕ್ಕೆ ಹೆಚ್ಚಿಸಲಾಗಿದೆ. ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಕಡಿಮೆಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಉಪಕುಲಪತಿ ಸಲ್ಲಿಸಿರುವ ರಾಜೀನಾಮೆ ಮತ್ತು ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತಲೇ ಇರುತ್ತೇವೆ ಎಂದೂ ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ವಿ.ವಿಯ ಕೆಲ ವಿಭಾಗಗಳ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯದ ಎಲ್ಲಾ ಪ್ರವೇಶ ಧ್ವಾರಗಳನ್ನು ಮುಚ್ಚಲಾಗಿತ್ತು. ಅಲ್ಲದೆ, ಅಕ್ಟೋಬರ್ 28ರಿಂದ ವಿ.ವಿಯ ಆಡಳಿತ ಮಂಡಳಿಯು ಐಎಚ್ಎ ಸಮಿತಿಯ ಸಭೆಗೂ ವಿದ್ಯಾರ್ಥಿ ಸಂಘಟನೆ ಭಾಗವಹಿಸಲೂ ಅವಕಾಶ ನೀಡುತ್ತಿಲ್ಲ. ವಿ.ವಿಯಲ್ಲಿ ಜರುಗುವ ಚುನಾವಣಾ ನಿಯಮಗಳನ್ನು ವಿದ್ಯಾರ್ಥಿ ಸಂಘಟನೆ ಉಲ್ಲಂಘಿಸಿದೆ ಎಂದು ವಿ.ವಿ ಆಡಳಿತ ವಾದಿಸಿದೆ.
ಇಷ್ಟೆಲ್ಲಾ ಆದ ಬಳಿಕ ವಿ.ವಿ.ಆಡಳಿತ ಮಂಡಳಿ ಬಿಪಿಎಲ್ ವರ್ಗದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿತು. ಆದರೆ, ವಿದ್ಯಾರ್ಥಿಗಳು ಮಂಡಳಿ ನೀಡಿದ ಭರವಸೆಯನ್ನು ನಿರಾಕರಿಸಿದರು.