ETV Bharat / bharat

ಪೊಲೀಸ್ ಬೆಂಗಾವಲಲ್ಲಿ ಮದುಮಗನ ಮೆರವಣಿಗೆ.. ಇದ್ದಿದ್ದು ಇಷ್ಟೇ ಜನ!

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್​ಡೌನ್ ಘೋಷಣೆ ಮಾಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಇಂತಾ ಸಮಯದಲ್ಲಿ ವರನೊಬ್ಬನಿಗೆ ವಿವಾಹ ಸ್ಥಳ ತಲುಪಲು ಪೊಲೀಸರು ಸಹಾಯ ಮಾಡಿದ್ದಾರೆ

Delhi Police escorts baraat
ಪೊಲೀಸ್ ಬೆಂಗಾವಲಲ್ಲಿ ಮದುಮಗನ ಮೆರವಣಿಗೆ
author img

By

Published : Apr 27, 2020, 11:41 AM IST

Updated : Apr 27, 2020, 11:53 AM IST

ನವದೆಹಲಿ: ದೇಶದಾದ್ಯಂತ ಲಾಕ್​ಡೌನ್ ಘೋಷಣೆ ಮಾಡಿರುವ ಪರಿಣಾಮ ಪೊಲೀಸರ ಬೆಂಗಾವಲಲ್ಲಿ ಮದುಮಗನ ಮೆರವಣಿಗೆ ನಡೆದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಗಾಂಧಿ ನಗರ ಸಹಾಯಕ ಪೊಲೀಸ್ ಆಯುಕ್ತ, ಸಿದ್ಧಾರ್ಥ್ ಜೈನ್ ಅವರಿಗೆ ಸ್ಥಳೀಯ ನಿವಾಸಿಯೊಬ್ಬರು ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಪೂರ್ವ ದೆಹಲಿಯ ಉಸ್ಮಾನ್​ಪುರದಲ್ಲಿ ನಡೆಯುವ ವಿವಾಹ ಸ್ಥಳವನ್ನು ತಲುಪಲು ಸಹಾಯವನ್ನು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಅಂತರ ನಿಯಮಗಳೊಂದಿಗೆ ಮದುಮಗ, ಹಿಮಾಂಶು ಎಂಬುವವರನ್ನು ಕರೆದುಕೊಂಡು ಗಾಂಧಿ ನಗರದಿಂದ ವಿವಾಹದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವಂತೆ ಸಿದ್ಧಾರ್ಥ್ ಜೈನ್ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಈ ಮೆರವಣಿಗೆಯಲ್ಲಿ ಕೇವಲ ನಾಲ್ಕು ಜನರು ಮಾತ್ರ ಭಾಗವಹಿಸಿದ್ದರು. ಅವರ ಖಾಸಗಿ ವಾಹನವನ್ನು ಪೊಲೀಸ್ ಬೆಂಗಾವಲಿನಲ್ಲಿ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.

Last Updated : Apr 27, 2020, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.