ನವದೆಹಲಿ: ನವದೆಹಲಿಯಲ್ಲಿ ಕರ್ತವ್ಯನಿರತ ಎಎಸ್ಐಗೂ ಕೊರೊನಾ ಸೋಂಕು ವಕ್ಕರಿಸಿಕೊಂಡಿದೆ. ಏಮ್ಸ್ ಆಸ್ಪತ್ರೆಯ ತುರ್ತು ಸೇವಾ ಘಟಕದಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಕ್ಕೆ ಮೂವರು ಪೊಲೀಸರು ಒಳಗಾಗಿದ್ದಾರೆ.
ನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಹಜವಾಗಿಯೇ ರಾಜಧಾನಿಯ ಜನತೆ ಆತಂಕದಲ್ಲಿದ್ದಾರೆ. ವೈರಾಣು ಬಾಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವು ಪ್ರದೇಶಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಪ್ರದೇಶಗಳಿಗೆ ಲಗ್ಗೆ ಹಾಕದಂತೆ ಮಾಹಿತಿ ನೀಡಲಾಗಿದೆ.
ದೆಹಲಿಯಲ್ಲಿ 1,154 ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ನಿನ್ನೆ ಒಂದೇ ದಿನ 85 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಈಗಾಗಾಲೇ ಐವರು ಸಾವನ್ನಪ್ಪಿದ್ದಾರೆ.