ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿಯ ಮಧ್ಯೆ ಜನರಿಗೆ ವಿಮಾನ ನಿಲ್ದಾಣದ ಸಮೀಪದ ಏರೋಸಿಟಿಯಲ್ಲಿ ಮೂರು ಪ್ರಮುಖ ಹೋಟೆಲ್‌ಗಳಲ್ಲಿ ಪೇ ಅಂಡ್ ಯೂಸ್ ಐಸೋಲೇಷನ್ ಸೌಲಭ್ಯ ಒದಗಿಸುವುದಾಗಿ ದೆಹಲಿ ಸರ್ಕಾರ ತಿಳಿಸಿದೆ.
ಸಾರ್ವಜನಿಕ ಸಂಪರ್ಕವನ್ನು ತಡೆಯಲು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ರೆಡ್‌ಫಾಕ್ಸ್, ಐಬಿಐಎಸ್ ಮತ್ತು ಲೆಮನ್ ಟ್ರಿ ಎಂಬ ಮೂರು ಹೋಟೆಲ್‌ಗಳಲ್ಲಿ ಪೇ ಅಂಡ್ ಯೂಸ್ ಐಸೋಲೇಷನ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಿಎಂ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿತರು ಈ ಹೋಟೆಲ್‌ಗಳಲ್ಲಿ ಹಣ ಪಾವತಿಸಿ ಇಲ್ಲಿ ಪಾಥಮಿಕ ಚಿಕಿತ್ಸೆ ಪಡೆಯಬಹುದಾಗಿದೆ.
ವಿದೇಶದಿಂದ ಬರುವ ಅನೇಕ ಜನರಿಗೆ ಉನ್ನತ ಮಟ್ಟದ ಸೌಲಭ್ಯಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರ ವಿಮಾನ ನಿಲ್ದಾಣದ ಸಮೀಪವಿರುವ ಮೂರು ಹೋಟೆಲ್‌ಗಳಲ್ಲಿ ಈ ಉದ್ದೇಶಕ್ಕಾಗಿ 182 ಕೊಠಡಿಗಳನ್ನು ನಿಗದಿತ ಬೆಲೆಗೆ ಕಾಯ್ದಿರಿಸುವಂತೆ ತಿಳಿಸಿದೆ.