ನವದೆಹಲಿ: ಕಟ್ಟಿಕೊಂಡ ಹೆಂಡತಿ ಹಾಗೂ ಮಗನ ಹೆಂಡತಿ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಗೊಂಡ ನಿವೃತ್ತ ಶಿಕ್ಷಕನೋರ್ವ ಇಬ್ಬರನ್ನೂ ಕೊಲೆಗೈದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ವಾಯುವ್ಯ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, 62 ವರ್ಷದ ನಿವೃತ್ತ ಶಿಕ್ಷಕ ಸತೀಶ್ ಚೌಧರಿ ಈ ಕೃತ್ಯವೆಸಗಿದ್ದಾನೆ. 62 ವರ್ಷದ ಪತ್ನಿ ಸ್ನೇಹಲತಾ ಹಾಗೂ ಮಗ ಗೌರವ್ ಚೌಧರಿ ಪತ್ನಿ ಪ್ರಜ್ಞಾ ಚೌಧರಿ(35) ಕೊಲೆಯಾಗಿರುವ ದುರ್ದೈವಿಗಳು. ದೆಹಲಿಯ ರೋಹಿಣಿ ನಗರದ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ಮಗ ಸೌರಭ್ ಸಹ ಗಾಯಗೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಕೃತ್ಯದ ಬಗ್ಗೆ ಆರೋಪಿ ಸತೀಶ್ ಚೌಧರಿ ಎರಡನೇ ಮಗ ಸೌರಭ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ. ದೆಹಲಿ ಸಾರಿಗೆಯಲ್ಲಿ ಉದ್ಯೋಗಿಯಾಗಿರುವ ಪ್ರಜ್ಞಾ ಗಂಡ ಸಿಂಗಪೂರ್ದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಎಸ್.ಡಿ ಮಿಶ್ರಾ, ನಮಗೆ ಈ ಘಟನೆಯ ಬಗ್ಗೆ ಸತೀಶ್ ಚೌಧರಿ ಅವರ ಎರಡನೇ ಪುತ್ರ ಸೌರಭ್ ಚೌಧರಿ ಮಾಹಿತಿ ನೀಡಿದಾಗ ನಾವು ತಕ್ಷಣ ಸ್ಥಳಕ್ಕೆ ಹೋದೆವು. ಆಗ ದೆಹಲಿ ಸಾರಿಗೆ ನಿಗಮದಲ್ಲಿ ನಿವೃತ್ತ ಉದ್ಯೋಗಿಯಾಗಿರುವ ಪ್ರಜ್ಞಾ ಚೌಧರಿ ಮತ್ತು ಅವರ ಅತ್ತೆ ಸ್ನೇಹಲತಾ ಚೌಧರಿ ಅವರು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಈಗಾಗಲೇ ಆರೋಪಿ ಸತೀಶ್ ಚೌಧರಿ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.