ನವದೆಹಲಿ: ದೆಹಲಿ ಜಲ ಮಂಡಳಿ ತನ್ನ ನೀರಿನ ಬಿಲ್ ಮನ್ನಾ ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ಅಂದರೆ ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಿದೆ. ಈವರೆಗೆ 4,08,374 ಗ್ರಾಹಕರು ಈ ಯೋಜನೆಯ ಲಾಭ ಪಡೆದಿದ್ದಾರೆ.
"ದೆಹಲಿ ಜಲ ಮಂಡಳಿಯ ಅಧ್ಯಕ್ಷರು ಜೂನ್ 30ರ ವರೆಗೆ ನೀಡಿದ್ದ ಆದೇಶವನ್ನು 2020ರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದ್ದಾರೆ" ಎಂದು ಡಿಜೆಬಿ ನಿರ್ದೇಶಕ ಪರಸ್ ರಾಮ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ಗಡುವು ಹಲವು ಬಾರಿ ವಿಸ್ತರಿಸಲಾಗಿದೆ.
ಎಲ್ಲ ಕಂದಾಯ ಅಧಿಕಾರಿಗಳು ಯೋಜನೆಗೆ ವ್ಯಾಪಕ ಪ್ರಚಾರ ನೀಡಬೇಕು. ಯೋಜನೆಯ ಪ್ರಕಾರ ಬಿಲ್‌ಗಳನ್ನು ಸಂಗ್ರಹಿಸಲು ಅಗತ್ಯ ಕ್ರಮವನ್ನು ಕೈಗೊಂಡು ಸಾಧ್ಯವಾದಲ್ಲೆಲ್ಲ ಅದನ್ನು ಸೇರಿಸಬೇಕು. ಲಾಕ್‌ಡೌನ್ ನಿರ್ಬಂಧದಿಂದಾಗಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದವರಿಗೆ ಈ ವಿಸ್ತರಣೆಯು ಪ್ರಯೋಜನ ನೀಡಲಿದೆ ಎಂದು ಡಿಜೆಬಿ ಉಪಾಧ್ಯಕ್ಷ ಮತ್ತು ಎಎಪಿ ಮುಖಂಡ ರಾಘವ್ ಚಾಧಾ ಟ್ವಿಟರ್ಲ್ಲಿ ತಿಳಿಸಿದ್ದಾರೆ.