ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಜತೆಗೆ ಡೆಂಘೀ ಜ್ವರಕ್ಕೊಳಗಾಗಿ ಪ್ಲಾಸ್ಮಾ ಥೆರೆಪಿ ಮಾಡಿಸಿಕೊಂಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
-
Delhi Deputy CM Manish Sisodia discharged from Max hospital today after he tested negative for COVID-19. Doctors have advised him to take rest for a week: Office of Deputy CM pic.twitter.com/tePqLEv39V
— ANI (@ANI) September 29, 2020 " class="align-text-top noRightClick twitterSection" data="
">Delhi Deputy CM Manish Sisodia discharged from Max hospital today after he tested negative for COVID-19. Doctors have advised him to take rest for a week: Office of Deputy CM pic.twitter.com/tePqLEv39V
— ANI (@ANI) September 29, 2020Delhi Deputy CM Manish Sisodia discharged from Max hospital today after he tested negative for COVID-19. Doctors have advised him to take rest for a week: Office of Deputy CM pic.twitter.com/tePqLEv39V
— ANI (@ANI) September 29, 2020
ಸೆ.14ರಂದು ಕೊರೊನಾ ಸೋಂಕಿಗೊಳಗಾಗಿದ್ದ ಸಿಸೋಡಿಯಾಗೆ ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ಸೆ.23ರಂದು ದೆಹಲಿಯ ಲೋಕ ನಾಯಕ್ ಜಯ ಪ್ರಕಾಶ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಡೆಂಘೀ ಜ್ವರ ಕಾಣಿಸಿಕೊಂಡಿದ್ದರಿಂದ ಸಾಂಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಡೆಂಘೀ, ಕೊರೊನಾದಿಂದ ಬಳಲುತ್ತಿರುವ ಮನೀಷ್ ಸಿಸೋಡಿಯಾಗೆ ಪ್ಲಾಸ್ಮಾ ಥೆರೆಪಿ!
ಸೆಪ್ಟೆಂಬರ್ 25ರಂದು ಪ್ಲಾಸ್ಮಾ ಥೆರೆಪಿಗೊಳಗಾಗಿದ್ದ ಅವರು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.