ನವದೆಹಲಿ: ಲಾಕ್‌ಡೌನ್ ಪಾಲಿಸದೆ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಮನೆಯಲ್ಲೇ ಉಳಿದುಕೊಳ್ಳುವುದರ ಮಹತ್ವವನ್ನು ತಿಳಿಸಿಕೊಡಲು ದೆಹಲಿ ಪೊಲೀಸರು ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ವಸಂತ್ಕುಂಜ್ ಬಳಿಯ ರಸ್ತೆಯಲ್ಲಿ ಮುಖಗವಚಗಳಿಲ್ಲದೆ ನಾಲ್ವರು ತಿರುಗಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಅವರಿಂದ ಬಸ್ಕಿ ತೆಗೆಸಿದ್ದಾರೆ. ಈ ಮೂಲಕ ಲಾಕ್‌ಡೌನ್ ಸೂಚನೆಯನ್ನು ಉಲ್ಲಂಘಿಸುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಇಂತಹದ್ದೇ ಶಿಕ್ಷೆಗಳನ್ನು ವಿಧಿಸಲಾಗುತ್ತದೆ ಎಂಬ ಸಂದೇಶವನ್ನು ರವಾನಿಸಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೆಹಲಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.