ETV Bharat / bharat

ಸಿಎಎ ವಿರುದ್ಧ ಸಮರ, ನಿರುದ್ಯೋಗಿಗಳಿಗೆ ಭತ್ಯೆ: ದೆಹಲಿ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ

ಪ್ರಮುಖವಾಗಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ಸಮರ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ದೆಹಲಿಯಲ್ಲಿ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಜಾರಿ ಮಾಡುವುದಿಲ್ಲ ಎಂದು ಘೋಷಿಸಿದೆ.

ದೆಹಲಿ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ
author img

By

Published : Feb 2, 2020, 7:21 PM IST

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್​ ತನ್ನ ಚುನಾವಣಾ ಪ್ರಣಾಳಿಕೆಯಯನ್ನು ಬಿಡುಗಡೆ ಮಾಡಿದ್ದು, 5000 ದಿಂದ 7,500 ಮಾಸಿಕ ನಿರುದ್ಯೋಗಿ ಭತ್ಯೆ, ನೀರು ಮತ್ತು ವಿದ್ಯುತ್​ ದರದಲ್ಲಿ ಗ್ರಾಹಕರಿಗೆ ಕ್ಯಾಶ್​ ಬ್ಯಾಕ್​ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಕಾನೂನು ಸಮರ ನಡೆಸುವುದು ಸೇರಿದಂತೆ ಬರಪೂರ ಭರವಸೆಗಳನ್ನು ನೀಡಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿದ ದೆಹಲಿ ಕಾಂಗ್ರೆಸ್​ ಮುಖ್ಯಸ್ಥ ಶುಭಾಶ್​ ಚೋಪ್ರಾ, ಪ್ರತೀ ವರ್ಷ ರಾಜ್ಯ ಬಜೆಟ್​ನಲ್ಲಿ 25 ಶೇ. ಹಣವನ್ನು ದೆಹಲಿಯ ಸಾರಿಗೆ ಅಭಿವೃದ್ದಿ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಮೀಸಲಿಡಲಾಗುವುದು ಎಂದು ತಿಳಿಸಿದರು.

ದೆಹಲಿ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ

ಇನ್ನುಳಿದಂತೆ, ಪ್ರತೀ ತಿಂಗಳು 300 ಯುನಿಟ್​ ಉಚಿತ ವಿದ್ಯುತ್​, ನಗರದಾದ್ಯಂತ 15 ರೂಪಾಯಿಗೆ ಆಹಾರ ಒದಗಿಸುವ 100 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯುವುದು ಮತ್ತು ಯುವ ಸ್ವಾಭಿಮಾನ್ ಯೋಜನೆಯಡಿ ನಿರುದ್ಯೋಗಿ ಯುವ ಪದವೀದರರಿಗೆ 5 ಸಾವಿರ ಮತ್ತು ಸ್ನಾತಕೋತ್ತರ ಪದವೀದರರಿಗೆ 7,500 ರೂ. ಮಾಸಿಕ ಭತ್ಯೆಯನ್ನು ನೀಡುವುದು ಒಳಗೊಂಡಿದೆ. ಎಎಪಿ ಮತ್ತು ಬಿಜೆಪಿ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೆ ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಪ್ರಮುಖವಾಗಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ಸಮರ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ದೆಹಲಿಯಲ್ಲಿ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಜಾರಿ ಮಾಡುವುದಿಲ್ಲ ಎಂದು ಘೋಷಿಸಿದೆ.

ಇನ್ನು ಅಧಿಕಾರಕ್ಕೆ ಬಂದ 6 ತಿಂಗಳ ಒಳಗಾಗಿ ಲೋಕ್​ಪಾಲ್​ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು, ವಿದ್ಯುತ್​ ಉಳಿತಾಯ ಮಾಡುವ ಗ್ರಾಹಕರಿಗೆ ಪ್ರತೀ ತಿಂಗಳು 300 ಯುನಿಟ್​ ಉಚಿತ ವಿದ್ಯುತ್​, ಶೀಲಾ ಪೆನ್ಶನ್ ಯೋಜನೆಯನ್ನು ಜಾರಿಗೆ ತಂದು ಹಿರಿಯ ನಾಗರಿಕರಿಗೆ ಪ್ರತೀ ತಿಂಗಳು 5 ಸಾವಿರ ರೂ. ಪಿಂಚಣಿ ನೀಡುವುದು, "ಯಾರಿ ಸ್ಟಾರ್ಟ್ಅಪ್ ಇನ್ಕ್ಯುಬೇಷನ್ ಫಂಡ್" ಸ್ಥಾಪಿಸಿ ಸ್ಟಾರ್ಟ್ ಅಪ್​ ಗಳ ಉತ್ತೇಜನಕ್ಕೆ 5 ಸಾವಿರ ಕೋಟಿ ಮೀಸಲಿಡುವುಡುವುದು, ದೇವಿ-ದೆಹಲಿ ಎಲೆಕ್ಟ್ರಿಕ್ ವೆಹಿಕಲ್ಸ್​ ಯೋಜನೆಯಡಿ ದೆಹಲಿಯನ್ನು ಭಾರತದ ಪ್ರಥಮ ವಿದ್ಯುತ್​ ಚಾಲಿತ ವಾಹನಗಳ ನಗರವನ್ನಾಗಿ ಮಾರ್ಪಡಿಸುವುದು ಕೈ ಬಣದ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.

ಇದೇ ವೇಳೆ ಕಾಂಗ್ರೆಸ್​ ಚುನಾವಣಾ ಪ್ರಚಾರದ "ಐಸಿ ಹೋಗಿ ಹಮಾರಿ ದಿಲ್ಲಿ " ಹಾಡನ್ನು ಬಿಡುಗಡೆ ಮಾಡಲಾಯಿತು. ಹಿರಿಯ ನಾಯಕ ಆನಂದ್​ ಶರ್ಮಾ, ಪ್ರಣಾಳಿಕೆ ಸಮಿತಿಯ ಅಜಯ್ ಮಕೇನ್, ರಾಜೀವ್​ ಗೌಡ, ಶರ್ಮಿಷ್ಠಾ ಮುಖರ್ಜಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.