ನವದೆಹಲಿ: ಭಾರತ ಸರ್ಕಾರವೂ ದಿವಾಳಿ ಆಗಿರುವ ಯೆಸ್ ಬ್ಯಾಂಕ್ ಪುನಶ್ಚೇತನ ಕಾರ್ಯಕ್ರಮ ಜಾರಿ ಮಾಡಿದ್ದು, ತೊಂದರೆಗೊಳಗಾದ ಖಾಸಗಿ ಸಾಲದಾತರ ಮೇಲಿನ ನಿಷೇಧವನ್ನ ಮಾರ್ಚ್ 18ಕ್ಕೆ ಅನ್ವಯವಾಗುವಂತೆ ತೆಗೆದುಹಾಕಿದೆ.
ಯೆಸ್ ಬ್ಯಾಂಕ್ನ ಆಡಳಿತಾಧಿಕಾರಿಯಾಗಿರುವ ಪ್ರಶಾಂತ್ ಕುಮಾರ್ ಅವರನ್ನ ಯೆಸ್ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇದೇ ವೇಳೆ ಹೊಸ ಆಡಳಿತ ಮಂಡಳಿಯನ್ನೂ ರಚನೆ ಮಾಡಿದೆ. ಯೆಸ್ ಬ್ಯಾಂಕ್ ಪುನರ್ನಿರ್ಮಾಣ ಸ್ಕೀಂ 2020 ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಸಂಬಂಧ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಲಾಗಿದೆ. ಇನ್ನು ಆರ್ಬಿಐ ಬ್ಯಾಂಕ್ ದಿವಾಳಿ ಹಿನ್ನೆಲೆಯಲ್ಲಿ ಏಪ್ರಿಲ್ -3 ರವರೆಗೂ ಖಾತೆದಾರರು ತಮ್ಮ ಅಕೌಂಟ್ಗಳಿಂದ 50 ಸಾವಿರದ ವರೆಗೆ ಮಾತ್ರ ಹಣ ವಾಪಸ್ ಪಡೆಯುವಂತೆ ನಿರ್ಬಂಧ ವಿಧಿಸಿದೆ.