ETV Bharat / bharat

ಪರೀಕ್ಷೆಯಲ್ಲಿ 100 ಅಂಕ ತೆಗೆದ ಆ ಹುಡುಗನಿಗೇನಾಯ್ತು? ಅಯ್ಯೋ ದುರ್ವಿಧಿಯೇ! - etv bharat

ದೆಹಲಿಯ ಅಮಿತಿ ಇಂಟರ್​ನ್ಯಾಷನಲ್ ಶಾಲೆಯ ವಿದ್ಯಾರ್ಥಿ ವಿನಾಯಕ್​ ಶ್ರೀಧರ್ ಸಿಬಿಎಸ್​ಇ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿ 100, ವಿಜ್ಞಾನ ವಿಷಯದಲ್ಲಿ 96 ಮತ್ತು ಸಂಸ್ಕೃತದಲ್ಲಿ 97 ಅಂಕ ಗಳಿಸಿದ್ದು, ಫಲಿತಾಂಶ ಬರುವ ಮೊದಲೇ ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿ ಸಾವು
author img

By

Published : May 8, 2019, 8:05 AM IST

ದೆಹಲಿ: ವಿಧಿ ಯಾರ ಬಾಳಲ್ಲಿ ಹೇಗೆ ಆಟವಾಡುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಲ್ಲೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದರೂ ಆ ಖುಷಿ ಅನುಭವಿಸಲು ಆತನಿಗೆ ಸಾಧ್ಯವಾಗಲಿಲ್ಲ.

ದೆಹಲಿಯ ನೋಯಿಡಾ ಪ್ರದೇಶದಲ್ಲಿರುವ ಅಮಿತಿ ಇಂಟರ್​ನ್ಯಾಷನಲ್ ಶಾಲೆಯ ವಿದ್ಯಾರ್ಥಿ ವಿನಾಯಕ್​ ಶ್ರೀಧರ್,​ ಈ ಬಾರಿಯ ಸಿಬಿಎಸ್​ಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾನೆ. ಆಂಗ್ಲಭಾಷೆಯಲ್ಲಿ 100, ವಿಜ್ಞಾನ ವಿಷಯದಲ್ಲಿ 96 ಮತ್ತು ಸಂಸ್ಕೃತದಲ್ಲಿ 97 ಅಂಕಗಳನ್ನು ಪಡೆದಿದ್ದಾನೆ.

ಆದ್ರೆ, ಈ ವಿದ್ಯಾರ್ಥಿ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೊನೆಯ ಎರಡು ಪರೀಕ್ಷೆಗಳು ಬಾಕಿಯಿರುವಾಗಲೇ ತೀವ್ರವಾಗಿ ಬಳಲಿದ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ.
ಪರೀಕ್ಷೆಯಲ್ಲಿ ಸ್ವತಂತ್ರವಾಗಿ ಬರೆಯಲು ಸಾಧ್ಯವಾಗದ ಕಾರಣ ಇಂಗ್ಲಿಷ್​ ಮತ್ತು ವಿಜ್ಞಾನ ವಿಷಯಗಳಿಗೆ ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆದಿದ್ದ.
ಎರಡು ವರ್ಷದ ಬಾಲಕನಿದ್ದಾಗಲೇ ವಿನಾಯಕನಿಗೆ ಸ್ನಾಯು ಸಂಬಂಧಿ ಕಾಯಿಲೆ ಬಾಧಿಸಿದೆ. ಆತನ ದೇಹದ ಚಲನವಲನ ಮಂದಗತಿಯಲ್ಲಿದ್ದರೂ, ಬುದ್ದಿ ಶಕ್ತಿ ಚುರುಕುತನದಿಂದ ಕೂಡಿತ್ತು ಎಂದು ವಿನಾಯಕ್ ತಾಯಿ ಮಮತಾ ಶ್ರೀಧರ್​ ಹೇಳಿದ್ದಾರೆ.

ಪರೀಕ್ಷೆಗಳು ಮುಗಿದ ನಂತರ ಕನ್ಯಾಕುಮಾರಿಯ ರಾಮೇಶ್ವರ ದೇವಸ್ಥಾನಕ್ಕೆ ಪ್ರವಾಸ ತೆರಳಬೇಕೆಂಬ ಆಸೆ ವಿದ್ಯಾರ್ಥಿ ವಿನಾಯಕನದ್ದಾಗಿತ್ತು.

Intro:ಬಿಸಿಲ ಝಳಕ್ಕೆ ಹೈರಾಣಾದ ಹಾಸನದ ಜನತೆ; ಕಲ್ಲಂಗಡಿ ಹಣ್ಣಿಗೆ ಹೆಚ್ಚಿದೆ ಬೆಡಿಕೆ...!  ಹಾಸನ: ನೆತ್ತಿ ಸುಡುತ್ತಿರುವ ಬಿಸಿಳ ಝಳದಿಂದ ದೇಹ ತಣಿಸಿಕೊಳ್ಳಲು ಜನತೆ ಹಣ್ಣುಗಳ ಮೊರೆ ಹೋಗಿದ್ದಾರೆ. ರಸ್ತೆ ಇಕ್ಕೆಲಗಳಲ್ಲಿ ಮಾರಾಟಮಾಡುವ ಕಲ್ಲಂಗಡಿ ಹಣ್ಣಿಗಂತೂ ಬೇಡಿಕೆ ಜೋರಾಗಿಯೇ ಇದೆ.  ನಗರದ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ ಜೋರಾಗಿದೆ. ಬಿ.ಎಂ.ರಸ್ತೆ, ಎನ್‌.ಆರ್‌.ವೃತ್ತ, ಕಟ್ಟಿನಕೆರೆ ಮಾರುಕಟ್ಟೆ, ಜಿಲ್ಲಾ ಕ್ರೀಡಾಂಗಣ, ಎನ್‌.ಆರ್‌.ವೃತ್ತ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆರ್‌.ಸಿ. ರಸ್ತೆ, ಹಿಮ್ಸ್‌ ಆಸ್ಪತ್ರೆಗೆ ರಸ್ತೆಗಳಲ್ಲಿ ಹಣ್ಣುಗಳ ರಾಶಿ ನೋಡಬಹುದು.ತಳ್ಳುವ ಗಾಡಿಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಬಿರು ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಕಲ್ಲಂಗಡಿ ದರವೂ ಹೆಚ್ಚುತ್ತಿದೆ. ಆರಂಭದಲ್ಲಿ ಕೆ.ಜಿ 15 ರಿಂದ   20 ರೂ ರಂತೆ ಮಾರಾಟವಾಗುತ್ತಿತ್ತು. ಹಣ್ಣು ಪೂರೈಕೆ ಕಡಿಮೆ ಆಗಿರುವ ಕಾರಣ ದರವೂ ಹೆಚ್ಚಿದೆ. ಪ್ರಸ್ತುತ ಕೆ.ಜಿ 25 ರಿಂದ 30 ರೂ ವರೆಗೆ ಮಾರಲಾಗುತ್ತಿದೆ. ನಗರದಲ್ಲಿ ತಾಪಮಾನ 32ರಿಂದ 36 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹದಿನೈದು ದಿನಗಳ ಹಿಂದೆ ಒಂದೆರೆಡು ಬಾರಿ ಹದ ಮಳೆಯಾದ್ದರಿಂದ ಧಗೆ ಹೆಚ್ಚಳವಾಗಿದೆ. ಬಿಸಿಲಿನ ಝಳದಿಂದ ಹೈರಾಣಾಗಿರುವ ಜನರು ದಣಿವು ನಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಸುಮಾರು 3 ರಿಂದ 12 ಕೆ.ಜಿ.ವರೆಗಿನ ತೂಕ ಹೊಂದಿರುವ ಕಲ್ಲಂಗಡಿ ಹಣ್ಣು ಲಭ್ಯವಿದ್ದು, ಕತ್ತರಿಸಿದ ಒಂದು ಹೋಳು 10 ರೂ ಗೆ ಮಾರಲಾಗುತ್ತಿದೆ. ದಾರಿಹೋಕರು, ವಾಹನ ಸವಾರರು ಸ್ಥಳದಲ್ಲಿಯೇ ಹಣ್ಣು ಸವಿಯುವ ಜತೆಗೆ, ಖರೀದಿ ಮಾಡಿ ಮನೆಗೂ ಕೊಂಡೊ ಯ್ಯುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟು ನಡೆಯುತ್ತಿದೆ. ಅರಸೀಕೆರೆ, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಹಾಸನ ಹಾಗೂ ಕಡೂರು ಭಾಗದಿಂದ ಹಾಸನ ನಗರಕ್ಕೆ ಹಣ್ಣು ಪೂರೈಕೆಯಾಗುತ್ತಿತ್ತು. ಈಗ ಸ್ಥಗಿತಗೊಂಡಿದ್ದು, ಸದ್ಯ ತಮಿಳುನಾಡಿನಿಂದ ಲೋಡ್‌ಗಟ್ಟಲೇ ತರಿಸಲಾಗುತ್ತಿದೆ. ಕಲ್ಲಂಗಡಿಯಲ್ಲೂ ಎರಡು ತಳಿಯಿದ್ದು, ಜನರು ನಾಟಿ ತಳಿಯನ್ನೇ ಹೆಚ್ಚು ಕೇಳುತ್ತಾರೆ. ಒಮ್ಮೆ ತರಿಸುವ ಲೋಡ್ ಎರಡ್ಮೂರು ದಿನಗಳಲ್ಲಿಯೇ ಖಾಲಿಯಾಗುತ್ತದೆ. ತಮಿಳುನಾಡಿನಿಂದ ಹಣ್ಣು ತರಿಸಲಾಗುತ್ತಿದ್ದು, ಮಾಲು ಕಡಿಮೆ ಬರುತ್ತಿರುವ ಕಾರಣ ದರ ಹೆಚ್ಚಾಗಿದೆ. ಸ್ವಲ್ಪವೂ ರುಚಿಯೂ ಕಡಿಮೆ ಆಗಿದೆ. ಲಾಭ, ನಷ್ಟ ಲೆಕ್ಕ ಹಾಕುವುದಿಲ್ಲ. ವ್ಯಾಪಾರ ಉತ್ತಮವಾಗಿದೆ’ ಎನ್ನುತ್ತಾರೆ ಡೇರಿ ವೃತ್ತದಲ್ಲಿನ ಕಲ್ಲಂಗಡಿ ಹಣ್ಣು ವ್ಯಾಪಾರಿ ತಂಗ್ಯಮ್ಮ. - ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ‌.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.