ETV Bharat / bharat

ಬದುಕಿನ ಜೊತೆ ಜೀವ ಕಸಿದುಕೊಂಡ ಕೊರೊನಾ: ಮನೆಗೆ ಹೊರಟು ಸ್ಮಶಾನ ಸೇರಿದ ವಲಸಿಗರು - ಅಪಘಾತದಲ್ಲಿ ವಲಸೆ ಕಾರ್ಮಿಕರು ಸಾವು

ಇಡೀ ವಿಶ್ವವನ್ನೇ ಸಂಕಷ್ಟದ ಕೂಪಕ್ಕೆ ದೂಡಿದ ಕೊರೊನಾ ವೈರಾಣು​ ಅತೀ ಹೆಚ್ಚು ಬಾಧಿಸಿದ್ದು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರನ್ನು. ತುತ್ತಿನ ಚೀಲ ತುಂಬಲು ಹುಟ್ಟೂರು ಬಿಟ್ಟು , ತನ್ನವರನ್ನೆಲ್ಲಾ ತೊರೆದು ಹೋದವರು ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮತ್ತೆ ತಮ್ಮೂರಿನಿತ್ತ ಹೆಜ್ಜೆಹಾಕ ತೊಡಗಿದ್ರು. ಕೆಲವರು ಕಾಲ್ನಡಿಗೆಯಲ್ಲೇ ಪ್ರೀತಿಪಾತ್ರರನ್ನು ಮತ್ತೆ ಸೇರಲು ಹೊರಟರೆ ಇನ್ನೂ ಕೆಲವರು ವಾಹನಗಳಲ್ಲಿ ಹೊರಟರು. ಆದರೆ, ಹೀಗೆ ಹೊರಟವರಲ್ಲಿ ಎಷ್ಟೋ ಮಂದಿ ಹಸಿವಿನಿಂದ ,ಇನ್ನೆಷ್ಟೋ ಜನ ಅಪಘಾತದಿಂದ ಊರು ಸೇರುವ ಮೊದಲೇ ಮಸಣ ಸೇರಿದ್ರು. ತನ್ನವರನ್ನು ಕಾಣುವ ಮೊದಲೇ ಕಂಗಳು ಮುಚ್ಚಿದವು.

deaths-of-migrant-workers
ತಮ್ಮೂರಿನಿತ್ತ ಹೊರಟು ಸ್ಮಶಾನ ಸೇರಿದ ವಲಸೆ ಕಾರ್ಮಿಕರು
author img

By

Published : May 16, 2020, 7:13 PM IST

ಕೊರೊನಾ ವೈರಸ್ ತಂದ ಅವಾಂತರಗಳು ಅಷ್ಟಿಷ್ಟಲ್ಲ. ಕೊರೊನಾ ಲಾಕ್​ಡೌನ್​ಗೆ ಅದೆಷ್ಟು ವಲಸೆ ಕಾರ್ಮಿಕರು ಜೀವತೆತ್ತಿದ್ದಾರೆ. ಇಲ್ಲಿದೆ ಅದೆಲ್ಲದರ ಸಂಪೂರ್ಣ ಚಿತ್ರಣ.

16.05.2020: ಉತ್ತರ ಪ್ರದೇಶದ ಔರಿಯಾ ಜಿಲ್ಲೆ ಬಳಿ ನಡೆದ 2 ಟ್ರಕ್​ಗಳ ಮುಖಾಮುಖಿ ಡಿಕ್ಕಿಯಲ್ಲಿ 21 ವಲಸೆ ಕಾರ್ಮಿಕರ ದುರ್ಮರಣ, 7 ಕಾರ್ಮಿಕರು ಗಾಯಾಳು

14.05.2020: ಮಧ್ಯಪ್ರದೇಶದ ಗುಣ ಬಳಿ ನಡೆದ ಬಸ್​ ಹಾಗೂ ಟ್ರಕ್​ ಅಪಘಾತದಲ್ಲಿ 8 ಕಾರ್ಮಿಕರ ಸಾವು, 54 ಕಾರ್ಮಿಕರಿಗೆ ಗಾಯ

13.05.2020: ಉತ್ತರ ಪ್ರದೇಶದ ಮುಜಾಫರ್​​​ಪುರ್​- ಸಹರನ್​ಪುರ್​​ ಹೈವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹರಿಯಾಣದಿಂದ -ಬಿಹಾರ್​​ಗೆ ಕಾಲ್ನಡಿಗೆಯಲ್ಲಿ ಹೊರಟ 6 ವಲಸೆ ಕಾರ್ಮಿಕರ ಸಾವು, 16 ಜನರಿಗೆ ಗಾಯ

09.05.2020: ಮಧ್ಯಪ್ರದೇಶದ ನರಸಿಂಗ್​​ಪುರ್​ ಬಳಿ ಸಂಭವಿಸಿದ ಅಪಘಾತದಲ್ಲಿ ಟ್ರಕ್​​ನಲ್ಲಿದ್ದ 5 ಕಾರ್ಮಿಕರ ದುರ್ಮರಣ, 13 ಕಾರ್ಮಿಕರಿಗೆ ಗಾಯ

08.05.2020 : ಮಹಾರಾಷ್ಟ್ರದ ಔರಂಗಾಬಾದ್​​ ಜಿಲ್ಲೆಯ ಜಲ್ನಾ ಬಳಿ ಗೂಡ್ಸ್​ ರೈಲು ಹರಿದು ರೈಲ್ವೆ ಟ್ರ್ಯಾಕ್​ ಮೇಲೆ ಮಲಗಿದ್ದ ಮಧ್ಯಪ್ರದೇಶ ಮೂಲದ 15 ವಲಸೆ ಕಾರ್ಮಿಕರ ಸಾವು.

05.05.2020: ಉತ್ತರಪ್ರದೇಶದ ಮಥುರಾ ಬಳಿ ಆಟೋ ಮತ್ತು ಟ್ರಕ್​​ ನಡುವೆ ಸಂಭವಿಸಿದ ಅಪಘಾತದಲ್ಲಿ ಮಧ್ಯಪ್ರದೇಶದ ಚತಪೂರ್​ ಜಿಲ್ಲೆಯ7 ಕಾರ್ಮಿಕರು ಸಾವು, ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ

03.05.2020: ಒಡಿಶಾಗೆ ಮರಳುತ್ತಿದ್ದ ವೇಳೆ ನಡೆದ 2 ಪ್ರತ್ಯೇಕ ಬಸ್​ ಅಪಘಾತಗಳಲ್ಲಿ ವಲಸೆ ಕಾರ್ಮಿಕರು ಗಾಯಗೊಂಡ್ರು. ಗುಜರಾತ್​​ನಿಂದ 50 ಒಡಿಶಾ ಕಾರ್ಮಿಕರನ್ನ ಹೊತ್ತೊಯ್ಯುತ್ತಿದ್ದ ಬಸ್​​ ನಾಗ್ಪುರ - ಅಮರಾವತಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ 3 ಕಾರ್ಮಿಕರು ಗಾಯಗೊಂಡ್ರು. ಅದೇ ರೀತಿ ಇನ್ನೂ 50 ಜನರನ್ನು ಸೂರತ್​​ನ ಗಂಜಾಮ್​​ನಿಂದ ಕರೆದೊಯ್ಯುತ್ತಿದ್ದ ಬಸ್​​ ಕಳಿಂಗ ಘಾಟಿ ಬಳಿ ಅಪಘಾತಕ್ಕೊಳಗಾಗಿ 3 ಕಾರ್ಮಿಕರು ಗಾಯಗೊಂಡ್ರು.

01.05.2020: ದೆಹಲಿಯಿಂದ ಬಿಹಾರ್​​ಗೆ ಸೈಕಲ್​​ನಲ್ಲಿ ಹೊರಟಿದ್ದ 35 ವರ್ಷದ ಕಾರ್ಮಿನೊಬ್ಬ ದಾರಿಮಧ್ಯೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡು ಅಸುನೀಗಿದ.

29.04.2020 : ಸೈಕಲ್​ನಲ್ಲಿ 1640 ಕಿ.ಮೀ. ​​ ಮ್ಯಾರಾಥಾನ್ ಹೊರಟ್ಟಿದ್ದ​ 11 ವಲಸೆ ಕಾರ್ಮಿಕರ ಗುಂಪಿನಲ್ಲಿ ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿ ಬಳಿ ಸೈಕಲ್​ನಿಂದ ಬಿದ್ದು ಸಾವು.

28.04.2020: ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯ ಚೆಕ್​​ಪೋಸ್ಟ್​​ನಿಂದ ತಪ್ಪಿಸಿಕೊಳ್ಳಲು ಹೋಗಿ ಬರ್ವಾನಿ ಜಿಲ್ಲೆಯ 45 ವರ್ಷದ ಅಸ್ತಮಾ ಪೀಡಿತ ವಲಸೆ ಕಾರ್ಮಿಕ ಸಾವು.

21.04.2020 : ಪೂರ್ವ ಉತ್ತರಪ್ರದೇಶ ಭಾಗದಿಂದ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕ ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿ ದಾಟುವ ವೇಳೆ ದುರ್ಮರಣ

18.04.2020: ಮುಳುಗು ಜಿಲ್ಲೆಯಿಂದ ಛತ್ತೀಸ್​​ಗಢದ ಬಿಜಾಪುರ್​​ ಜಿಲ್ಲೆಯ ತನ್ನೂರಿಗೆ ಕಾಲ್ನಡಿಗೆಯಲ್ಲಿ ಹೊರಟ 12 ವರ್ಷದ ಬಾಲಕಿ ಇನ್ನೇನು ತನ್ನೂರು ಸೇರಲು 10 ಕಿ.ಮೀ. ಇರುವಾಗ ಮರಣವನ್ನಪ್ಪಿದಳು.

18.04.2020 : ಕರ್ನೂಲ್​ ಜಿಲ್ಲೆಯ 48 ವರ್ಷದ ವಲಸೆ ಕಾರ್ಮಿಕನೊಬ್ಬ ಎದೆನೋವಿನಿಂದ ಅಸುನೀಗಿದ.

02.04.2020 : ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕ ಹರಿದ್ವಾರ - ದೆಹಲಿ ಹೆದ್ದಾರಿಯ ತಾತ್ಕಾಲಿಕ ವಿಶ್ರಾಂತಿ ಕ್ಯಾಂಪ್​​ನಲ್ಲಿ ಸಾವನ್ನಪ್ಪಿದ.

01.04.2020: ಮರಳಿ ಗೂಡು ಸೇರಲು ತನ್ನ ಸ್ನೇಹಿತರೊಂದಿಗೆ ಸುಮಾರು 500 ಕಿ,ಮೀ ನಡೆದ 23 ವರ್ಷದ ತೆಲಂಗಾಣದ ಯುವಕ ಮೃತಪಟ್ಟಿದ್ದಾನೆ.

29.03.2020 : ಹರಿಯಾಣದ ಬಳಿ ಮುಂಜಾನೆ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮನೆಗೆ ಹಿಂದಿರುಗಲು ಕಾಯುತ್ತಿದ್ದ ಯುಪಿ ಮೂಲದ ಐದು ವಲಸಿಗರು ಸಾವನ್ನಪ್ಪಿ,8 ಕಾರ್ಮಿಕರು ಗಾಯಗೊಂಡಿದ್ದಾರೆ.

28.03.2020 : ದೆಹಲಿಯ ರೆಸ್ಟೋರೆಂಟ್‌ನಲ್ಲಿ ಹೋಮ್ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ವ್ಯಕ್ತಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ತೆರಳುತ್ತಿದ್ದಾಗ ಆಗ್ರಾದಲ್ಲಿ ಸಾವನ್ನಪ್ಪಿದ.

28.03.2020: ಮುಂಬೈ - ಗುಜರಾತ್ ಹೆದ್ದಾರಿಯ ವಿರಾರ್‌ನಲ್ಲಿ ಟ್ರಕ್​ ಡಿಕ್ಕಿ ಹೊಡೆದು ರಾಜಸ್ಥಾನ ಮೂಲದ ನಾಲ್ವರು ವಲಸೆ ಕಾರ್ಮಿಕರು ಕಣ್ಮುಚ್ಚಿದ್ರು.

28.03.2020: ಹರಿಯಾಣದ ಸೋನಿಪತ್‌ನಿಂದ ಉತ್ತರ ಪ್ರದೇಶದ ರಾಂಪುರದ ತನ್ನ ಹಳ್ಳಿಗೆ ತೆರಳುತ್ತಿದ್ದಾಗ 26 ವರ್ಷದ ವಲಸೆ ಕಾರ್ಮಿಕ ಮೊರದಾಬಾದ್‌ನ ಪಕ್ವಾರ್ಹಾ ಪ್ರದೇಶದಲ್ಲಿ ಅಸುನೀಗಿದ.

27.03.2020: ತೆಲಂಗಾಣದಿಂದ ಕರ್ನಾಟಕದ ರಾಯಚೂರಿಗೆ ಹೊರಟ 8 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಈ ರಸ್ತೆ ಅಪಘಾತ ಒಂದೂವರೆ ವರ್ಷದ ಮಗು, 9 ವರ್ಷದ ಬಾಲಕ ಹಾಗೂ ಒಬ್ಬ ಬಾಲಕಿ ಕೂಡ ಬಲಿ ಪಡೆದುಕೊಂಡಿತು.

28.03.2020 : ತೆಲಂಗಾಣದ ಸೂರ್ಯಪೇಟ್​​ನಿಂದ ಕರ್ನಾಟಕಕ್ಕೆ ನಡೆದುಕೊಂಡೇ ಹೊರಟಿದ್ದ ವಲಸೆ ಕಾರ್ಮಿಕರು ಹಿಂದಿನಿಂದ ಲಾರಿ ಬಂದು ಗುದ್ದಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ರು. ಇದರಲ್ಲಿ ಇಬ್ಬರು ಚಿಕ್ಕ ಮಕ್ಕಳು ಇದ್ರು. ಘಟನೆಯಲ್ಲಿ ಆರು ಮಂದಿ ಗಾಯಗೊಂಡ್ರು.

24.03.2020: ತಮಿಳುನಾಡಿನ ರಸಿಂಗಪುರಂ ಬಳಿ ನಡೆದ ಅಪಘಾತದಲ್ಲಿ 1 ವರ್ಷದ ಮಗು ಸೇರಿದಂತೆ ನಾಲ್ಕು ಜನ ವಲಸೆ ಕಾರ್ಮಿಕರು ಮೃತಪಟ್ಟರು.

ಒಟ್ಟಿನಲ್ಲಿ ಹುಟ್ಟೂರನ್ನು ಸೇರುವ ದಾವಂತದಲ್ಲಿ ಪ್ರಾಣಕಳೆದುಕೊಂಡು ಅದೆಷ್ಟೋ ಜನ ಅನಾಥ ಶವಗಳಾದರೆ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರು ದುಡಿಯುವ ಕೈಗಳ ಜೊತೆ ನಡೆಯುವ ಕಾಲುಗಳನ್ನು ಕಳೆದುಕೊಂಡರು. ಕೊರೊನಾ ಎಂಬ ಮಹಾಮಾರಿ ಕಾರ್ಮಿಕರ ಬದುಕನ್ನೇ ಕಸಿದುಕೊಂಡು ಕಗ್ಗತ್ತಲೆಗೆ ದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.