ETV Bharat / bharat

ಜಲಪ್ರಳಯಕ್ಕೆ ತತ್ತರಿಸಿದ ದಕ್ಷಿಣ ಭಾರತ.. ಸಾವಿನ ಸಂಖ್ಯೆ 86ಕ್ಕೇರಿಕೆ !

ವರುಣನ ರೌದ್ರಾವತಾರಕ್ಕೆ ದೇಶಕ್ಕೆ ದೇಶವೇ ತತ್ತರಿಸಿ ಹೋಗಿದೆ. ಉತ್ತರ ಭಾರತದ ಸ್ಥಿತಿ ಒಂದೆಡೆಯಾದರೆ, ಇತ್ತ ದಕ್ಷಿಣ ಭಾರತದ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದಲ್ಲಿ ಜನರ ಬದುಕು ಅತಂತ್ರವಾಗಿದೆ. ಈ ನಡುವೆ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ.

ಜಲಪ್ರಳಯಕ್ಕೆ ತತ್ತರಿಸಿದ ದಕ್ಷಿಣ ಭಾರತ
author img

By

Published : Aug 10, 2019, 8:44 AM IST

Updated : Aug 10, 2019, 10:27 AM IST

ಹೈದರಾಬಾದ್​ : ಜಲಪ್ರಳಯಕ್ಕೆ ದಕ್ಷಿಣ ಭಾರತ ತತ್ತರಿಸಿದೆ. ಈ ನೈಸರ್ಗಿಕ ವಿಕೋಪ ಅತ್ತ ಉತ್ತರ ಭಾರತವನ್ನೂ ಬಿಟ್ಟಿಲ್ಲ. ಇತ್ತ ದಕ್ಷಿಣ ಭಾರತವನ್ನೂ ಬಿಡುತ್ತಿಲ್ಲ. ಈ ನಡುವೆ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಮಳೆಯ ಅವಾಂತರಕ್ಕೆ ತತ್ತರಿಸಿದ್ದು, ಹಲವರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯವೂ ಸಾಗಿದೆ. ಪ್ರವಾಹದಿಂದಾಗಿ ಶುಕ್ರವಾರ ಒಂದೇ ದಿನ ಕರ್ನಾಟಕದಲ್ಲಿ 10 ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 26 ಜನ ಸಾವನ್ನಪ್ಪಿದ್ದಾರೆ. ರಾಜ್ಯದ 12 ಜಿಲ್ಲೆಗಳಿಗೆ ಬಹುಪಾಲು ನಷ್ಟವುಂಟಾಗಿದ್ದು, ಈ ಎಲ್ಲಾ ಜಿಲ್ಲೆಗಳ ಜನರ ಬದುಕು ಅತಂತ್ರವಾಗಿದೆ. ಇತ್ತ ದಕ್ಷಿಣ ಕರ್ನಾಟಕದಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯಿದ್ದರೆ, ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಉತ್ತರ ಕನ್ನಡ ಮೊದಲಾದ ರಾಜ್ಯಗಳಲ್ಲಿ ಪ್ರವಾಹ ವಿಕೋಪಕ್ಕೆ ತಲುಪಿದೆ. ಮುಂಜಾಗೃತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ.

Death tolls increased in Kerala, Karnakata and Maharashtra
ಜಲಪ್ರಳಯಕ್ಕೆ ತತ್ತರಿಸಿದ ದಕ್ಷಿಣ ಭಾರತ..

ದೇವರ ನಾಡು ಕೇರಳ ನೆರೆ ಪರಿಸ್ಥಿತಿಗೆ ಅಕ್ಷರಶಃ ತತ್ತರಿಸಿದೆ. ಶುಕ್ರವಾರ ಒಂದೇ ದಿನದಲ್ಲಿ 20 ಜನ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪ್ರಮುಖ ಪ್ರವಾಹಪೀಡಿತ ಜಿಲ್ಲೆಗಳಾದ ವಯನಾಡು ಹಾಗೂ ಮಲಪ್ಪುರಂನ ಬಹುಭಾಗ ಜಲದಿಗ್ಬಂಧನಕ್ಕೊಳಗಾಗಿದ್ದು, ಸುಮಾರು 40 ಜನರು ಪ್ರವಾಹದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರವಾಹದಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ಹೀಗಾಗಿ ಸಾವು- ನೋವುಗಳ ನಿಖರ ಸಂಖ್ಯೆ ಇನ್ನಷ್ಟೇ ತಿಳಿಯಬೇಕಾಗಿದೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ. ಶುಕ್ರವಾರ ಮಳೆ ಹಾಗೂ ಪ್ರವಾಹದಿಂದಾಗಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪುಣೆ ಭಾಗದಲ್ಲಿ ಈವರೆಗೆ 29 ಜನ ಸಾವನ್ನಪ್ಪಿದ್ದಾರೆ. ಸಾಂಗ್ಲಿ ಹಾಗೂ ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮಿತಿಮೀರಿದ್ದು, ಪಂಚಗಂಗಾ ಹಾಗೂ ಕೃಷ್ಣಾ ನದಿಗಳು ಅಪಾಯ ಪರಿಸ್ಥಿತಿ ಮೀರಿ ಹರಿಯುತ್ತಿವೆ.

Intro:Body:Conclusion:
Last Updated : Aug 10, 2019, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.