ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈಗಾಗಲೇ 25 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಘಟನೆ ವಿವರ...
ನಾಸಿಕ್ನ ಡಿಯೋಲ್ ನಗರದಲ್ಲಿ ಮಾಲೆಗಾಂವ್ನಿಂದ ಕಾಲ್ವಾನ್ಗೆ ತೆರಳುತ್ತಿದ್ದ ಬಸ್ನ ಟೈಯರ್ ಬ್ಲಾಸ್ಟ್ ಆಗಿದ್ದು, ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿರುವ ಬಾವಿಗೆ ಎರಡೂ ವಾಹನಗಳು ಬಿದ್ದಿವೆ.

ಭರದಿಂದ ಸಾಗಿದ ಕಾರ್ಯಾಚರಣೆ...
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಾವಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಮತ್ತು ಬಸ್ನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ. ಪಂಪ್ಸೆಟ್ ಸಹಾಯದಿಂದ ಬಾವಿಯಲ್ಲಿ ನೀರು ಹೊರ ತೆಗೆದು ಮತ್ಯಾರಾದ್ರೂ ಸಿಲುಕಿದ್ದಾರಾ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.

25ಕ್ಕೇರಿದ ಸಾವಿನ ಸಂಖ್ಯೆ...
ಈ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 25 ಜನ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಬಸ್ ಚಾಲಕ ಎಲ್ಲಿ?
ಬಸ್ ಅಪಘಾತದ ಬಳಿಕ ಚಾಲಕನ ಸುಳಿವು ಸಿಕ್ಕಿಲ್ಲ. ಮೃತರಲ್ಲಿ ಬಸ್ ಚಾಲಕ ಸಹ ಸೇರಿದ್ದಾನೆಯೇ ಎನ್ನುವುದು ತಿಳಿಯಬೇಕಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂತಾಪ ಸೂಚಿಸಿದ ಗಣ್ಯರು..
ಇನ್ನು ಭೀಕರ ರಸ್ತೆ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ಪ್ರಧಾನಿ ಮೋದಿ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಆ ಭಗವಂತ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಧೈರ್ಯ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇನ್ನು ಗಾಯಾಳುಗಳು ಆದಷ್ಟು ಗುಣಮುಖರಾಗಲಿ ಎಂದು ಹೇಳಿದ್ದಾರೆ.
-
The accident in Maharashtra’s Nashik district is unfortunate. In this hour of sadness, my thoughts are with the bereaved families. May the injured recover at the earliest: PM @narendramodi
— PMO India (@PMOIndia) January 29, 2020 " class="align-text-top noRightClick twitterSection" data="
">The accident in Maharashtra’s Nashik district is unfortunate. In this hour of sadness, my thoughts are with the bereaved families. May the injured recover at the earliest: PM @narendramodi
— PMO India (@PMOIndia) January 29, 2020The accident in Maharashtra’s Nashik district is unfortunate. In this hour of sadness, my thoughts are with the bereaved families. May the injured recover at the earliest: PM @narendramodi
— PMO India (@PMOIndia) January 29, 2020
ಪರಿಹಾರ ಘೋಷಣೆ...
ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಹಾರಾಷ್ಟ್ರ ಸಾರಿಗೆ ಸಚಿವ ಪರಿಹಾರ ಘೋಷಿಸಿದ್ದಾರೆ. ಸಾರಿಗೆ ಸಚಿವ ಅನಿಲ್ ಪರಬ್, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆಟೋ ಸ್ಟ್ರೈಕ್...
ಇನ್ನು ಈ ಅಪಘಾತ ಖಂಡಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.