ETV Bharat / bharat

ವರಂಗಲ್‌ನಲ್ಲಿ ಒಂಬತ್ತು ಜನರನ್ನು ಕೊಂದ ಕೊಲೆಗಾರನಿಗೆ ಮರಣದಂಡನೆ!

author img

By

Published : Oct 28, 2020, 9:40 PM IST

ಕೊಲೆಗಾರ ಸಂಜಯ್ ಕುಮಾರ್ ಯಾದವ್ ಪ್ರಜ್ಞಾಹೀನ ವ್ಯಕ್ತಿಗಳನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದ. ಮಹಿಳೆಯೊಬ್ಬಳ ಕೊಲೆ ಮುಚ್ಚಿ ಹಾಕಲು ಆಕೆಯ ಸಂಬಂಧಿಕರು ಹಾಗೂ ಬಾಡಿಗೆದಾರನ್ನು ಅಪರಾಧಿ ಕೊಲೆ ಮಾಡಿದ್ದ.

arrest
arrest

ವರಂಗಲ್​​​ (ತೆಲಂಗಾಣ): ಗೊರೆಕುಂಟಾ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಒಂಬತ್ತು ಮಂದಿಯನ್ನು ಮಾದಕ ದ್ರವ್ಯ ನೀಡಿ ಬಾವಿಗೆ ಎಸೆದು ಕೊಂದ ಅಪರಾಧಿಗೆ ವರಂಗಲ್​ನ ಜಿಲ್ಲಾ ನ್ಯಾಯಾಧೀಶರು ಮರಣದಂಡನೆ ವಿಧಿಸಿದ್ದಾರೆ.

ಕೊಲೆಗಾರ ಸಂಜಯ್ ಕುಮಾರ್ ಯಾದವ್ ಪ್ರಜ್ಞಾಹೀನ ವ್ಯಕ್ತಿಗಳನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದ. ಮಹಿಳೆಯೊಬ್ಬಳ ಕೊಲೆ ಮುಚ್ಚಿ ಹಾಕಲು ಆಕೆಯ ಸಂಬಂಧಿಕರು ಹಾಗೂ ಬಾಡಿಗೆದಾರನ್ನು ಅಪರಾಧಿ ಕೊಲೆ ಮಾಡಿದ್ದ. ಮೃತರಲ್ಲಿ ಮೂರು ವರ್ಷದ ಬಾಲಕನೂ ಸೇರಿದ್ದಾನೆ.

ಭೀಕರ ಕೊಲೆಗಳು ಸಾಕಷ್ಟು ಸಂಚಲನ ಸೃಷ್ಟಿಸಿದ್ದವು. ಕೊಲೆಯಾದ ನಾಲ್ಕು ದಿನಗಳ ಬಳಿಕ ಆತನನ್ನು ಬಂಧಿಸಲಾಗಿತ್ತು. ಕಠಿಣ ವಿಚಾರಣೆ ಹಾಗೂ ತನಿಖೆಯ ಬಳಿಕ ಕೊಲೆಗಾರನ ಅಪರಾಧ ಸಾಬೀತಾಗಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಶಿಕ್ಷೆಗೊಳಪಡಿಸಿ ಮರಣದಂಡನೆ ವಿಧಿಸಿದ್ದಾರೆ.

ಶಿಕ್ಷೆಗೊಳಗಾದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯ ವಿರುದ್ಧ ಹೈಕೋರ್ಟ್​ಗೆ ಹೋಗಲು ಆಯ್ಕೆ ನೀಡಲಾಗಿದೆ. ಐಪಿಸಿಯ ಸೆಕ್ಷನ್ 449, 328, 380, 404 ಮತ್ತು 30 ರ ಅಡಿಯಲ್ಲಿ ಆರೋಪಿಯ ತಪ್ಪನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.