ETV Bharat / bharat

ಜ್ವರ ಬಂದು ಮೃತಪಟ್ರೂ ಕಾಡುವ ಕೊರೊನಾ ಭೀತಿ: ಅಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ - ಕೊರೊನಾ ಭೀತಿ

ಜ್ವರದಿಂದ ಮೃತಪಟ್ಟ ವ್ಯಕ್ತಿಯನ್ನು ಕೊರೊನಾ ಭೀತಿಯಿಂದಾಗಿ ಸೈಕಲ್​ ಗಾಡಿಯಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.

fear of corona
ಕೊರೊನಾ ಭೀತಿ
author img

By

Published : Aug 6, 2020, 3:35 PM IST

ಪುರಿ (ಒಡಿಶಾ): ಕೊರೊನಾ ಭೀತಿಯಿಂದಾಗಿ ವ್ಯಕ್ತಿಯ ಮೃತದೇಹವನ್ನು ಸೈಕಲ್ ​ಗಾಡಿಯಲ್ಲಿ ಸಾಗಿಸಿದ ಘಟನೆ ಪುರಿ ಜಿಲ್ಲೆಯ ಕೊನಾರ್ಕ್​ ಬಳಿ ಮಂಕದ್​ ಗೋರ್ಡಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ನಿವಾಸಿ 27 ವರ್ಷದ ವ್ಯಕ್ತಿಯೋರ್ವ 10 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಗೋಪ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪ ಫಲಕಾರಿಯಾಗದ ಪರಿಣಾಮ ಇವರು ಸಾವನ್ನಪ್ಪಿದ್ದರು.

ಸೈಕಲ್‌ ಗಾಡಿಯಲ್ಲಿ ಶವವನ್ನು ಸಾಗಿಸುತ್ತಿರುವುದು.

ಆದರೆ ಕೊರೊನಾ ಭೀತಿಯಿಂದ ಗ್ರಾಮಸ್ಥರು ವ್ಯಕ್ತಿಯ ಮೃತದೇಹವನ್ನು ಮುಟ್ಟಲು ಭಯಪಟ್ಟಿದ್ದಾರೆ. ಕೊನೆಗೆ ಕೊನಾರ್ಕ್​ನ ನೋಟಿಫೈಡ್​ ಏರಿಯಾ ಕೌನ್ಸಿಲ್​ನ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಮೃತನ ಸಂಬಂಧಿಗಳು ಪಿಪಿಇ ಕಿಟ್​ ಧರಿಸಿ, ಸೈಕಲ್​ ಗಾಡಿಯ ಮೂಲಕ ಶವವನ್ನು ಸ್ಮಶಾನ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಸೈಕಲ್​ ಗಾಡಿಯ ಮೂಲಕ ಶವವನ್ನು ಸಾಗಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.