ಅಸ್ಸೋಂ/ಕೊಕ್ರಜಾರ್ : ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಕೊಕ್ರಜಾರ್ ಜಿಲ್ಲೆ ಭೇಟಿಗೆ ಒಂದು ದಿನ ಮುಂಚಿತವಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಕೊಕ್ರಜಾರ್ ಜಿಲ್ಲೆಯ ಸರಬೀಲ್ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ಎಕೆ 47 ರೈಫಲ್‌ಗಳು, ಮದ್ದುಗುಂಡುಗಳು, ಗ್ರೆನೇಡ್, ಬಾಂಬ್‌ಗಳು, ನಾಡ ಬಂದೂಕುಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 7 ಮತ್ತು 10ರಂದು ನಡೆಯಲಿರುವ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಚುನಾವಣೆಗೆ ಕೊಕ್ರಜಾರ್ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ (ಬಿಟಿಆರ್) ಇತರ ನಾಲ್ಕು ಜಿಲ್ಲೆಗಳಲ್ಲಿ ಚುನಾವಣೆ ಹಿನ್ನೆಲೆ ಸರ್ಬಾನಂದ ಸೋನೊವಾಲ್ ಭೇಟಿ ನೀಡಿಲಿದ್ದು, ಈಗಾಗಲೇ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಸ್ಥಳದಿಂದ ಕೇವಲ 11 ಕಿ.ಮೀ ದೂರದಲ್ಲಿರುವ ಫಕಿರಾಗ್ರಾಮ್ ಪ್ರದೇಶದಲ್ಲಿ ಬಿಟಿಸಿ ಚುನಾವಣೆಯ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಸೋನೊವಾಲ್ ಇಂದು ಮಾತನಾಡಲಿದ್ದಾರೆ.