ETV Bharat / bharat

ವ್ಯವಹಾರ ಶ್ರೇಯಾಂಕದಲ್ಲಿ ಏರಿಕೆ ಕಂಡ ಭಾರತ: ಕೇಂದ್ರ-ರಾಜ್ಯಗಳ ಸಹಕಾರದಿಂದ ಅಭಿವೃದ್ಧಿ ಸಾಧ್ಯ - ವಿಶ್ವ ಬ್ಯಾಂಕ್​ ಸುದ್ದಿ

ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ. 65ರಷ್ಟು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿದ್ದಾರೆ. ಇವರೆಲ್ಲಾ ಪರಿಣಾಮಕಾರಿ ಮಾನವ ಸಂಪನ್ಮೂಲವಾಗಿ ಪರಿವರ್ತನೆಯಾದರೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು ಇನ್ನೂ ಸುಲಭವಾಗುತ್ತದೆ. ಭಾರತ ಕೈಗಾರಿಕಾ ಕ್ರಾಂತಿಯ ನಾಲ್ಕನೇ ಮುಖವಾಗಬಹುದು. ಅಲ್ಲದೆ ಕೇಂದ್ರ ಹಾಗೂ ರಾಜ್ಯಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದರೆ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ.

ಜಾಗತಿಕ ವ್ಯವಹಾರ ಶ್ರೇಯಾಂಕದಲ್ಲಿ ಏರಿಕೆ ಕಂಡ ಭಾರತ
author img

By

Published : Oct 28, 2019, 8:24 PM IST

ವಿಶ್ವ ಬ್ಯಾಂಕ್​​ ಇತ್ತೀಚೆಗೆ ಬಿಡುಗಡೆ ಮಾಡಿದ ವ್ಯವಹಾರ ಶ್ರೇಯಾಂಕದಲ್ಲಿ ಭಾರತವು 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 190 ದೇಶಗಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಾಗಿದೆ.

ಈ ವ್ಯವಹಾರ ಶ್ರೇಯಾಂಕವನ್ನು ವ್ಯವಹಾರ ಪ್ರಾರಂಭಿಸುವ ನಿಯಮಗಳು, ನಿರ್ಮಾಣ ಪರವಾನಗಿಗಳನ್ನು ನಿಭಾಯಿಸುವ ರೀತಿ, ವಿದ್ಯುತ್ ಪಡೆಯುವುದು, ಆಸ್ತಿ ನೋಂದಣಿ, ಸಾಲ ಪಡೆಯುವುದು, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ, ತೆರಿಗೆ ಪಾವತಿ ಮೊದಲಾದ ಸೂಚಕಗಳನ್ನಾಧರಿಸಿ ನೀಡಲಾಗಿದೆ.

ಸೌದಿ ಅರೇಬಿಯಾ, ಜೋರ್ಡಾನ್, ಟೋಗೊ, ಬಹ್ರೇನ್, ತಜಕಿಸ್ತಾನ್, ಪಾಕಿಸ್ತಾನ, ಕುವೈತ್ ಹಾಗೂ ನೈಜೀರಿಯಾ ಜೊತೆಗೆ ಭಾರತ ಮತ್ತು ಚೀನಾ ದೇಶಗಳು ಶ್ರೇಯಾಂಕ ಪಟ್ಟಿಯಲ್ಲಿ ಹೆಚ್ಚು ಸುಧಾರಣೆಗೊಂಡ ಮೊದಲ ಹತ್ತು ಆರ್ಥಿಕತೆಗಳಾಗಿವೆ. ಭಾರತ ಈ ಸಾಧನೆಯನ್ನು ಸತತ ಮೂರನೇ ಬಾರಿಗೆ ಸಾಧಿಸಿದೆ. ಅಲ್ಲದೆ ಈ ವಿಷಯದಲ್ಲಿ ಭಾರತವು ಚೀನಾಕ್ಕಿಂತ ಉತ್ತಮವಾಗಿದೆ.

ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ್​ ಎರಡನೇ ಸ್ಥಾನದಲ್ಲಿದೆ. ಹಾಂಗ್​​ಕಾಂಗ್, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಜಾರ್ಜಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ನಾರ್ವೆ ನಂತರದ ಸ್ಥಾನಗಳಲ್ಲಿವೆ.

ಭಾರತದ ಸಾಧನೆಯನ್ನು ಉನ್ನತ ಶ್ರೇಣಿಯ ದೇಶಗಳೊಂದಿಗೆ ಹೋಲಿಸಲಾಗದಿದ್ದರೂ ಪರಿಷ್ಕೃತ ದಿವಾಳಿತನ ಮತ್ತು ದಿವಾಳಿತನ ಸಂಹಿತೆ 2016 ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯು ದೇಶದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತದ ನಿಧಾನಗತಿಯ ಬೆಳವಣಿಗೆಯ ದರವನ್ನು ಎತ್ತಿಹಿಡಿದಿರುವ ಸಮಯದಲ್ಲಿ, ವ್ಯವಹಾರ ಶ್ರೇಯಾಂಕದಲ್ಲಾದ ಏರಿಕೆಯು ದೇಶಕ್ಕೆ ಭರವಸೆಯ ಕಿರಣವಾಗಿದೆ. ಇದರ ಜೊತೆಗೆ ಜಾಗತಿಕ ರಾಷ್ಟ್ರಗಳ ಜೊತೆಗೆ ನಮ್ಮ ಪ್ರಗತಿಯನ್ನು ಅಳೆಯುವುದರೊಂದಿಗೆ ಆತ್ಮಾವಲೋಕನ ಮಾಡುವುದು ಅನಿವಾರ್ಯವಾಗಿದೆ.

ಕಳೆದ ಯುಪಿಎ ಸರ್ಕಾರದ ಅವಧಿಗಿಂತ ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. 2006ರಲ್ಲಿ ಇದೇ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 116ನೇ ಸ್ಥಾನದಲ್ಲಿತ್ತು. ನಂತರದ 8 ವರ್ಷಗಳಲ್ಲಿ ದೇಶ 26 ಸ್ಥಾನಗಳ ಕುಸಿತ ಕಂಡು 2014ರಲ್ಲಿ 142ನೇ ಸ್ಥಾನಕ್ಕೆ ಇಳಿದಿತ್ತು. ಆಫ್ರಿಕನ್ ರಾಷ್ಟ್ರಗಳಾದ ರುವಾಂಡಾ ಮತ್ತು ಅಂಗೋಲಾ ಸಾಧಿಸಿದ ಅಭಿವೃದ್ಧಿಯನ್ನು ಭಾರತ ಸಾಧಿಸಲಿಲ್ಲ ಎಂದು ವಿಶ್ವಬ್ಯಾಂಕ್‌ ಟೀಕಾತ್ಮಕವಾಗಿ ನುಡಿದಿದ್ದು, ಯುಪಿಎ ಸರ್ಕಾರದ ಆಡಳಿತದ ವಿಫಲತೆಯನ್ನು ತೋರಿಸುತ್ತದೆ.

ಆದರೆ 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ವರ್ಷಗಳಲ್ಲಿ ಭಾರತ 79 ಶ್ರೇಯಾಂಕಗಳ ಜಿಗಿತ ಕಂಡಿದೆ. ಕಳೆದ 15 ವರ್ಷಗಳಿಂದ ಬಾಕಿ ಇದ್ದ ಹಲವಾರು ಮಸೂದೆಗಳನ್ನು ಎನ್‌ಡಿಎ ಸರ್ಕಾರ ಅಂಗೀಕರಿಸಿತು. ಇಂತಹ ಶ್ರೇಯಾಂಕಗಳಿಂದ ದೇಶಕ್ಕಿರುವ ಜವಾಬ್ದಾರಿಯನ್ನು ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಇನ್ನೂ ಹಲವು ಸುಧಾರಣೆಗಳನ್ನು ಅವರು ತಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್​ಟಿ)ಯನ್ನು ಸರಳಗೊಳಿಸುವ ಬಗ್ಗೆಯೂ ಸುಳಿವು ನೀಡಿದ್ದಾರೆ.

ತೆರಿಗೆ ಪಾವತಿಯಲ್ಲಿ ಭಾರತವು 115ನೇ ಸ್ಥಾನದಲ್ಲಿದೆ. ಆದರೆ ಇದು ಇನ್ನಷ್ಟು ಸುಧಾರಣೆಯಾಗಬೇಕಿದೆ. ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ(ಜಿಸಿಐ)ದಲ್ಲಿ ಕಳೆದ 3 ವರ್ಷಗಳಲ್ಲಿ ಭಾರತ 30 ಸ್ಥಾನ ಕುಸಿದಿದ್ದು, ಈ ನ್ಯೂನ್ಯತೆ ಸರಿಪಡಿಸುವತ್ತ ನಾಯಕರು ಗಮನಹರಿಸಬೇಕಿದೆ.

ನ್ಯೂಜಿಲೆಂಡ್‌ನಲ್ಲಿ ಒಂದು ವ್ಯವಹಾರವನ್ನು ಪ್ರಾರಂಭಿಸಲು ಅರ್ಧ ದಿನ ಸಾಕು. ಆಸ್ತಿ ನೋಂದಣಿ ಅಲ್ಲಿ ಕೇವಲ ಗಂಟೆಗಳ ವಿಷಯ. ಇನ್ನು ಸಿಂಗಾಪುರದಲ್ಲಿ ರಫ್ತು ಪರವಾನಗಿ ಪಡೆಯಲು ಕೇವಲ 10 ಗಂಟೆ ಸಾಕಂತೆ. ಆದರೆ ನಮ್ಮ ದೇಶದಲ್ಲಿ ಒಂದು ನಿರ್ಮಾಣ ಪರವಾನಗಿ ಪಡೆಯಲು 106 ದಿನಗಳು ಬೇಕು. ಅದೇ ಆಸ್ತಿ ನೋಂದಣಿಗೆ 58 ದಿನ ಹಾಗೂ ಹೊಸ ವಿದ್ಯುತ್ ಸಂಪರ್ಕ ಪಡೆಯಲು 53 ದಿನಗಳು ಬೇಕಾಗುತ್ತದೆ. ಸೆಷನ್ಸ್ ನ್ಯಾಯಾಲಯಗಳಲ್ಲಿ ವಾಣಿಜ್ಯ ಪ್ರಕರಣಗಳ ಪರಿಹಾರಕ್ಕಾಗಿ ಬರೋಬ್ಬರಿ 1,445 ದಿನಗಳು ಕಾಯಬೇಕಾಗಿದೆ. ದೇಶದಲ್ಲಿ ಭ್ರಷ್ಟಾಚಾರವು ಎಲ್ಲಾ ಹಂತಗಳಲ್ಲಿಯೂ ಆಳವಾಗಿ ಬೇರೂರಿರುವುದು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂಬುದು ವಿಷಾದದ ಸಂಗತಿಯಾಗಿದೆ.

ಪೂರೈಕೆ ಸರಪಳಿಯಲ್ಲಿನ ಮಂದಗತಿ ಭಾರತದ ಬೆಳವಣಿಗೆಗೆ ದೊಡ್ಡ ಅಡಚಣೆಯಾಗಿದೆ ಎಂದು ಫೋರ್ಬ್ಸ್ ವರದಿ ಬಹಳ ಹಿಂದೆಯೇ ಬಹಿರಂಗಪಡಿಸಿತ್ತು. ವ್ಯವಹಾರವನ್ನು ಸುಲಭಗೊಳಿಸುವಲ್ಲಿ ಕೇಂದ್ರ ಸರ್ಕಾರವೇ ಸಂಪೂರ್ಣ ಜವಾಬ್ದಾರನಾಗಿರುವುದಿಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯಗಳು ಪಕ್ಷದ ಪರವಾಗಿ ನಡೆದರೆ, ಇದರ ಪ್ರಭಾವ ನಾಗರಿಕರ ಮೇಲಾಗುತ್ತದೆ.

Intro:Body:

DAWN OF DEVELOPMENT WITH THE AID OF STATES

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.