ETV Bharat / bharat

ದಿನಾಂಕ ನಿಗದಿಯಾದ ಪ್ರಕಾರ ಟಿ-20 ವಿಶ್ವಕಪ್​ ನಡೆಯುವುದು ಡೌಟ್​: ಡೇವಿಡ್​ ವಾರ್ನರ್​

ಈಗಾಗಲೇ ನಿಗದಿಗೊಂಡಿರುವ ದಿನಾಂಕದ ಪ್ರಕಾರ ಐಸಿಸಿ ಟಿ-20 ವಿಶ್ವಕಪ್​ ಟೂರ್ನಮೆಂಟ್​ ನಡೆಯುವುದು ಬಹುತೇಕ ಡೌಟ್​ ಎಂದು ಡೇವಿಡ್​ ವಾರ್ನರ್​ ಮಾಹಿತಿ ನೀಡಿದ್ದಾರೆ.

David Warner
David Warner
author img

By

Published : May 8, 2020, 6:07 PM IST

ನವದೆಹಲಿ: ಈಗಾಗಲೇ ಯೋಜನೆ ರೂಪಿಸಿರುವ ಪ್ರಕಾರ ಮುಂಬರುವ ಟಿ-20 ವಿಶ್ವಕಪ್​ ಟೂರ್ನಿ​ ನಡೆಯುವುದು ಡೌಟ್​​ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಜತೆ ಇನ್​ಸ್ಟಾಗ್ರಾಂನಲ್ಲಿ ಲೈಟ್​ ಚಾಟ್​ನಲ್ಲಿ ಭಾಗಿಯಾಗಿದ್ದ ವೇಳೆ ಈ ಮಾಹಿತಿ ಹೊರಹಾಕಿದ್ದಾರೆ. ಟೂರ್ನಮೆಂಟ್​ ವೇಳೆ ದೊಡ್ಡ ಮಟ್ಟದ ಜನಸಂದಣಿ ನಿಯಂತ್ರಣ ಮಾಡುವುದು ತುಂಬಾ ಕಷ್ಟ ಎಂದು ಆಸ್ಟ್ರೇಲಿಯಾ ಕ್ರೀಡಾ ಮಂತ್ರಿ ಹೇಳಿದ್ದಾಗಿ ಅವರು ತಿಳಿಸಿದರು. ಪ್ರಪಂಚದಾದ್ಯಂತ ಕೋವಿಡ್​-19 ಅಬ್ಬರ ಜೋರಾಗಿರುವ ಕಾರಣ ಯಾವುದೇ ಕ್ರೀಡಾಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಮುಂದೂಡಿಕೆಯಾಗಿದೆ.

ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್​ ಟೂರ್ನಮೆಂಟ್​ ಆಯೋಜನೆಗೊಂಡಿದ್ದು, ಅದು ಮುಂದೂಡಿಕೆಯಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬಂದಿವೆ.

ಕ್ರಿಕೆಟ್​ ಪಂದ್ಯಾವಳಿಯಲ್ಲಿ ಭಾಗಿಯಾಗಲು ಎಲ್ಲ ದೇಶದ ತಂಡಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳುವುದರಿಂದ ಕೋವಿಡ್​-19 ಹಬ್ಬುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಮಾತು ಕೇಳಿ ಬರುತ್ತಿದ್ದು, ಪಂದ್ಯ ನೋಡಲು ಬರುವ ವೀಕ್ಷಕರಲ್ಲಿ ಇದರ ಗುಣಲಕ್ಷಣಗಳಿದ್ದರೆ ಮತ್ತಷ್ಟು ಕಠಿಣ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

ಇನ್ನು ಐಸಿಸಿ ವಿಶ್ವಕಪ್​ ಟಿ-20 ಕ್ರೀಡಾಭಿಮಾನಿಗಳು ಇಲ್ಲದೇ ನಡೆಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದಕ್ಕೆ ಈಗಾಗಲೇ ವಿರಾಟ್​ ಕೊಹ್ಲಿ ಸೇರಿದಂತೆ ಅನೇಕ ಪ್ಲೇಯರ್ಸ್​ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಪ್ರಸಕ್ತ ವರ್ಷ ನಡೆಯುವ ಟಿ-20 ವಿಶ್ವಕಪ್​ ಮುಂದೂಡಿಕೆಯಾಗುವುದು ಬಹುತೇಕ ಖಚಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.