ETV Bharat / bharat

ಕೊರೊನಾಗೂ ಮೊದ್ಲು ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿದ್ದ ಮಹಾಮಾರಿಗಳು ಇವೇ ನೋಡಿ... - ಕೋಟಿ ಕೋಟಿ ಜನರನ್ನು ಬಲಿ ಪಡೆದಿದ್ದ ಮಹಾಮಾರಿ

ವಿಶ್ವದಲ್ಲಿ ತಲ್ಲಣವನ್ನುಂಟು ಮಾಡಿರುವ ಕೋವಿಡ್‌ ಮಹಾಮಾರಿ ಸದ್ಯದ ಚಿಕಿತ್ಸೆಗೆ ಸಂಪೂರ್ಣವಾಗಿ ನಾಶವಾಗ್ತಿಲ್ಲ. ಇದಕ್ಕೆ ಸೂಕ್ತ ವ್ಯಾಕ್ಸಿನ್‌ ಕಂಡುಹಿಡಿಯಬೇಕಾದರೆ ಒಂದೂವರೆ ವರ್ಷ ಬೇಕಾಗುತ್ತದೆ. ಆಧುನಿಕ ಯುಗದಲ್ಲೂ ಎಲ್ಲರೂ ದೇವರ ಮೇಲೆ ಭಾರ ಹಾಕುತ್ತಿದ್ದಾರೆ. ಹಿಂದೆ ಕೂಡ ಇಂತಹ ಮಹಾಮಾರಿಗಳು ವಿಶ್ವವನ್ನು ಹಿಂಡಿ ಹಿಪ್ಪೆಮಾಡಿವೆ. ಅವು ಹೇಗೆ ವಿಜೃಂಭಿಸಿದ್ದವೋ ಅಷ್ಟೇ ವೇಗವಾಗಿ ಕಣ್ಮರೆಯಾಗಿವೆ. ಉತ್ತಮ ವೈದ್ಯಕೀಯ ಸೌಕರ್ಯಗಳು ಇಲ್ಲದ ಆ ದಿನಗಳಲ್ಲೇ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಜನ ಈ ರೋಗಳನ್ನು ಹೇಗೆ ಹೊಡೆದು ಓಡಿಸಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

dangerous epidemics
ಕೊರೊನಾಗೂ ಮೊದ್ಲು ಬಂದಿದ್ದ ಮಹಾಮಾರಿಗಳು
author img

By

Published : Apr 19, 2020, 6:48 PM IST

ಹೈದಾರಾಬಾದ್‌: ವೈದ್ಯಕೀಯ ಕ್ಷೇತ್ರದಲ್ಲಿ ಎಂದಿಗೂ ಸವಾಲುಗಳು ಇದ್ದೇ ಇರುತ್ತವೆ. ಹೊಸ ರೋಗಗಳು ಪತ್ತೆಯಾಗುತ್ತಲೇ ಇರುವತ್ತವೆ. ಅದಕ್ಕೆ ಹೊಸದಾಗಿ ಔಷಧಿಗಳನ್ನು ಕಂಡು ಹಿಡಿಯುತ್ತಲೇ ಇರಬೇಕು. ಆದ್ರೆ ಕೆಲ ರೋಗಗಳಿಗೆ ಸೂಕ್ತ ಔಷಧಿ ಸಿಗುವುದಿಲ್ಲ. ಇದು ವೈದ್ಯಕೀಯ ಲೋಕಕ್ಕೆ ಸವಾಲಿನದ್ದಾಗಿರುತ್ತದೆ. ಇದರಲ್ಲಿ ಸಂಕ್ರಾಮಿಕ ರೋಗಳು ಅತಿ ಮುಖ್ಯವಾಗಿವೆ. ಚಿಕಿತ್ಸೆ, ವ್ಯಾಕ್ಸಿನ್‌ಗಳನ್ನು ಕಂಡು ಹಿಡಿಯುವ ವೇಳೆಗೆ ಮಹಾಮಾರಿ ರೋಗಗಳು ಅಪಾರ ನಷ್ಟ ಉಂಟು ಮಾಡಿರುತ್ತವೆ.

ಪ್ರಸ್ತುತ ಹೊಸದಾಗಿ ಪತ್ತೆಯಾಗುವ ರೋಗಗಳಿಗೆ ಔಷಧಿ ಕಂಡುಹಿಡಿಯುವುದು ಕಷ್ಟದ ಕೆಲಸವೇನಲ್ಲ. ಸ್ವಲ್ಪ ತಡವಾದ್ರೂ ಖಚಿತವಾಗಿ ಔಷಧಿ ಕಂಡುಹಿಡಿಯಲಾಗುತ್ತದೆ. ಕೊರೊನಾ ವೈರಸ್‌ ವಿಷಯದಲ್ಲೂ ಅದೇ ಆಗುತ್ತಿದೆ. ಕೋವಿಡ್‌ ವೈರಸ್‌ ಪತ್ತೆಯಾದಾಗಿನಿಂದಲೂ ಇದನ್ನು ಮಟ್ಟಹಾಕಲು ಸಂಶೋಧನೆಗಳು ನಡೆಯುತ್ತಿವೆ. ಕೆಲ ಸಂಸ್ಥೆಗಳು ಕ್ಲಿನಿಕ್‌ಗಳಲ್ಲಿ ಪ್ರಯೋಗಳನ್ನು ಮಾಡಿವೆ. ಆದ್ರೆ ಸಂಪೂರ್ಣವಾಗಿ ಗುಣಮುಖವಾಗುವಂತ ಔಷಧಿ ಕಂಡು ಹಿಡಿಯಬೇಕಾದರೆ ಕನಿಷ್ಠ 18 ತಿಂಗಳು ಹಿಡಿಯಲಿದೆ ಅಂತಿದ್ದಾರೆ ತಜ್ಞರು.

ಬಂದು ಹೋದ ಮಹಾಮಾರಿಗಳು..

ಇಂತಹ ಆಧುನಿಕ ಜ್ಞಾನ ಇರುವ ದಿನಗಳಲ್ಲಿ ವ್ಯಾಕ್ಸಿನ್‌ ತರಲು ಇಷ್ಟು ತಿಂಗಳು ಹಿಡಿಯುತ್ತವೆ. ಆದ್ರೆ ಸೂಕ್ತ ವೈದ್ಯಕೀಯ ಸೌಕರ್ಯಗಳು ಇಲ್ಲದ ಅಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ತಜ್ಞ ವೈದ್ಯರು, ಸಂಶೋಧನೆ ಇಲ್ಲದ ಕಾಲದಲ್ಲೇ ಬಂದಿದ್ದ ಜಸ್ಟಿನಿಯನ್‌ ಪ್ಲೇಗು, ಬುಬೋನಿಕ್‌ ಪ್ಲೇಗು, ದಿ ಗ್ರೇಟ್‌ ಪ್ಲೇಗ್‌ ಆಫ್‌ ಲಂಡನ್, ಸಿಡುಬು, ಕಾಲರಾ ನಂತಹ ಮಹಾಮಾರಿ ರೋಗಗಳು ವರ್ಷಗಳ ಕಾಲ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿ ಅಷ್ಟೇ ವೇಗವಾಗಿ ಕಣ್ಮರೆಯಾದವು. ಇದಕ್ಕೆ ಪ್ರಮುಖ ಕಾರಣಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ಹೆಚ್ಚಳ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಿರುವುದು.

ಪ್ಲೇಗ್‌ನ ಅಬ್ಬರ ಹೇಗಿತ್ತು?

ಇತಿಹಾಸದಲ್ಲಿ ಅತಿ ಭಯಂಕರವಾದ ರೋಗಗಳಲ್ಲಿ ಪ್ಲೇಗು ಒಂದು. ಇದು ಕ್ರಿ.ಶ 541ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ಅರೇಬಿಯಾ ದೇಶದಲ್ಲಿ ವ್ಯಾಪಿಸಿತ್ತು. ಅಂದು ಈ ರೋಗಕ್ಕೆ ಸೂಕ್ತ ಔಷಧಿ ಇಲ್ಲದ ಕಾರಣ ವಿಶ್ವದಾದ್ಯಂತ ಸುಮಾರು 3 ರಿಂದ 5 ಕೋಟಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕ್ರಿ.ಶ 750ರ ವರೆಗೆ ಪ್ಲೇಗು ರೌದ್ರನರ್ತನ ಮಾಡಿದೆ. ಬಳಿಕ ಕಣ್ಮರೆ ಆಯಿತು. ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ಹೆಚ್ಚಾಗಿದ್ದವರು ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾರೆ ಅನ್ನೋದು ಕೂಡ ಇತಿಹಾಸಕಾರರ ಅಭಿಪ್ರಾಯವಾಗಿದೆ.

ಬ್ಲಾಕ್‌ಡೆತ್‌ ಮಹಾಮಾರಿ

ಬ್ಲಾಕ್‌ಡೆತ್ ಅಂತಲೇ ಕರೆಯುವ ಬುಬೋನಿಕ್‌ ಪ್ಲೇಗು 1347ರಲ್ಲಿ ಕಾಣಿಸಿಕೊಂಡಿತ್ತು. ಯೂರೋಪ್‌ನಾದ್ಯಂತ ಹರಡಿದ್ದ ರೋಗ, ನಾಲ್ಕು ವರ್ಷಗಳಲ್ಲಿ ಕೋಟಿ ಕೋಟಿ ಜನರನ್ನು ಬಲಿ ಪಡೆದಿತ್ತು. ಈ ರೋಗವನ್ನು ಹೇಗೆ ನಾಶ ಮಾಡಬೇಕು ಎಂದು ತಿಳಿಯದಿದ್ದರೂ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದು ಗೊತ್ತಾದ ಕೂಡಲೇ ಜನರು, ರೋಗಿಗಳನ್ನು ಐಸೋಲೇಷನ್‌ ಮಾಡಲು ಆರಂಭಿಸಿದ್ದರು. ಹಡಗುಗಳ ಮೂಲಕ ಬಂದಿದ್ದವರನ್ನು 40 ದಿನಗಳ ಕಾಲ ಕ್ವಾರಂಟೈನ್‌ ಮಾಡಿದ ನಂತರ ಅವರಿಗೆ ರೋಗದ ಲಕ್ಷಣಗಳು ಇಲ್ಲ ಎಂಬುದು ಖಾತ್ರಿಯಾದ ಬಳಿಕವಷ್ಟೇ ರಾಜ್ಯಗಳ ಒಳಗೆ ಪ್ರವೇಶ ಮಾಡಲು ಅನುಮತಿ ನೀಡಲಾಗಿತ್ತು. ಮೊದಲೇ ಜಾಗೃತಗೊಂಡವರು ಬ್ಲಾಕ್‌ಡೆತ್‌ ಮಹಾಮಾರಿಯ ಸಾವಿನ ದವಡೆಯಿಂದ ಪಾರಾಗಿದ್ದರು.

ಕ್ರಿ.ಶ 1665ರಲ್ಲಿ ಇಂಗ್ಲೆಂಡ್‌ನಲ್ಲಿ ಪ್ಲೇಗು ವಿಜೃಂಭಿಸಿತ್ತು. ರಾಜಧಾನಿ ಲಂಡನ್‌ನಲ್ಲಿ 7 ತಿಂಗಳ ಅವಧಿಯಲ್ಲಿ ಇದು 1 ಲಕ್ಷ ಜನರನ್ನು ಬಲಿ ಪಡೆದಿತ್ತು. ರೋಗಿಗಳನ್ನು ಐಸೋಲೇಷನ್‌ ಮಾಡಬೇಕು ಅಂತ ಅಲ್ಲಿನ ಅಧಿಕಾರಿಗಳು ಆದೇಶ ಮಾಡಿದ್ದರು. ರೋಗಿಗಳಿದ್ದ ಮನೆಗಳನ್ನು ಗುರುತಿಸಿದ್ದರಲ್ಲದೆ, ಜನರು ಮನೆಯಿಂದ ಹೊರಗಡೆ ಬರಬಾರದೆಂದು ಎಚ್ಚರಿಕೆ ನೀಡಿದ್ದರು. ಹೀಗೆ ಮೊದಲ ಬಾರಿಗೆ ಮನೆಗಳಲ್ಲಿದ್ದವರು ಹೋಂ ಕ್ವಾರಂಟೈನ್‌ ಆದರು. ಪರಿಣಾಮ ರೋಗ ಹರಡುವಿಕೆ ಇಳಿಮುಖವಾಯಿತು.

ಕೋಟಿ ಕೋಟಿ ಜನರನ್ನು ಬಲಿ ಪಡೆದಿದ್ದ ಸಿಡುಬು ರೋಗ!

15ನೇ ಶತಮಾನದಲ್ಲಿ ಯೂರೋಪ್‌ ಅನ್ವೇಷಣಕಾರರ ಮೂಲಕ ಅಮೆರಿಕಾ, ಮೆಕ್ಸಿಕೋ ದೇಶಗಳಿಗೆ ಸಿಡುಬು ಹರಡಿತ್ತು. ಇದರಿಂದ ಕೋಟಿ ಕೋಟಿ ಜನರು ಮೃತಪಟ್ಟಿದ್ದರು. 1796ರಲ್ಲಿ ಬ್ರಿಟನ್‌ಗೆ ಸೇರಿದ ವೈದ್ಯ ಎಡ್ವರ್‌ ಜೆನ್ನರ್‌ ಮೊದಲ ಬಾರಿಗೆ ವ್ಯಾಕ್ಸಿನ್‌ ಕಂಡುಹಿಡಿದ ಬಳಿಕ ಸಿಡುಬು ರೋಗ ಕಡಿಮೆಯಾಯಿತು. ಆದರೆ ಈ ರೋಗ ಸಂಪೂರ್ಣವಾಗಿ ಕಣ್ಮರೆಯಾಗಲು ಬರೋಬ್ಬರಿ 2 ಶತಮಾನಗಳನ್ನು ತೆಗೆದುಕೊಂಡಿದೆ. 1980ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭೂಮಿಯ ಮೇಲೆ ಸಿಡುಬು ರೋಗ ಸಂಪೂರ್ಣವಾಗಿ ತೊಲಗಿದೆ ಎಂದು ಘೋಷಣೆ ಮಾಡಿತ್ತು. ಮನುಷ್ಯ ಕಂಡುಹಿಡಿದ ವ್ಯಾಕ್ಸಿನ್‌ ಮೂಲಕ ರೋಗವೊಂದು ಕಡಿಮೆಯಾಗಿದ್ದು ಇದೇ ಮೊದಲು.

ಕಾಲರಾ ಕಾಟ ಹೇಗಿತ್ತು?

19ನೇ ಶತಮಾನ ಪೂರ್ತಿ ಕಾಲರಾ ವಿಶ್ವದಾದ್ಯಂತ ತನ್ನ ಪ್ರಭಾವವನ್ನು ಬೀರಿತ್ತು. ಎಲ್ಲಾ ದೇಶಗಳಲ್ಲಿ ಹರಡಿ ಲಕ್ಷ ಲಕ್ಷ ಜನರನ್ನು ಬಲಿ ಪಡೆದಿತ್ತು. ಮೊದಲು ಇದು ಕೆಟ್ಟ ಗಾಳಿಯಿಂದ ಬರುತ್ತದೆ ಎಂದು ಭಾವಿಸಲಾಗಿತ್ತು. ಆದ್ರೆ ಜಾನ್‌ ಸ್ನೋ ಎಂಬ ವೈದ್ಯ, ನೀರು ಕಲುಷಿತವಾಗುವುದರಿಂದ ಬರುತ್ತದೆ ಎಂದು ಗುರುತಿಸಿದ್ದರು. ಒಂದೇ ರಾತ್ರಿಯಲ್ಲಿ ಕಾಲರಾವನ್ನು ಅಂತ್ಯಮಾಡಲು ಸಾಧ್ಯವಾಗಿಲ್ಲವಾದರೂ ಸ್ವಚ್ಛತೆ, ಶುದ್ಧ ನೀರು ಕಲುಷಿತವಾಗದಂತೆ ನೋಡಿಕೊಳ್ಳುವ ಅವಶ್ಯಕತೆಯನ್ನು ವಿಶ್ವಕ್ಕೆ ತಿಳಿಪಡಿಸಿದ್ದರು. ಬಳಿಕ ಸ್ವಚ್ಛತೆ ಹೆಚ್ಚಾಗಿ ಕಾಲರಾ ರೋಗ ನಿರ್ಮೂಲ ಮಾಡಲು ನಾಂದಿ ಹಾಡಿತು.

ಎರಡು ವರ್ಷ ಸ್ಪ್ಯಾನಿಷ್‌ ಫ್ಲೂ ಕಾಟ..

ಇಡೀ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿದ ಮಹಾಮಾರಿಗಳ ಪೈಕಿ ಸ್ಪ್ಯಾನಿಷ್ ಫ್ಲೂ ಅತ್ಯಂತ ದಾರುಣ ಅಂತ ಹೇಳಬಹುದು. 1918ರಲ್ಲಿ ಸ್ಪೇನ್‌ನಲ್ಲಿ ಕಾಣಿಸಿಕೊಂಡು 2 ವರ್ಷ ಎಲ್ಲಾ ದೇಶಗಳಲ್ಲಿ ಹರಡಿ 5 ಕೋಟಿ ಮಂದಿಯನ್ನು ಬಲಿ ಪಡೆದಿದೆ. ಇದೂ ಕೂಡ ಕಾಲಕ್ರಮೇಣ ಕಣ್ಮರೆಯಾಯಿತು. ಈ ವೈರಸ್‌ ತಗುಲಿದ ನಂತರ ರೋಗಿಗಳಿಗೆ ಬರುವ ನಿಮೋನಿಯಾಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನ್ಯಾಯ ಒದಗಿಸಿದರು. ಮಹಾಮಾರಿಯ ಪ್ರಭಾವ ತಗ್ಗಿತು ಅಂತ ಕೆಲವರು ವಾದಿಸುತ್ತಾರೆ. ಫ್ಲೂ ಬಂದು ಕೆಲ ವರ್ಷಗಳ ಕಾಲ ಅಟ್ಟಹಾಸ ಮೆರೆದು ಮಾಯವಾಗಿತ್ತು.

ಒಟ್ಟಾರೆಯಾಗಿ ಸಾಂಕ್ರಾಮಿಕ ರೋಗಗಳು ಮನುಷ್ಯನನ್ನು ಹೇಗೆ ಪತರಗುಟ್ಟುವಂತೆ ಮಾಡಿದವೋ ಹಾಗೆಯೇ ಜನಮಾನಸದಿಂದ ಮಾರೆಯಾದವು. ಆದರೆ ಇವುಗಳ ಇರುವಿಗೆ ಇಲ್ಲ ಅಂತಲ್ಲ. ಯಾವುದೋ ಒಂದು ರೂಪದಲ್ಲಿ ಅಂತ್ಯ ಆಗುತ್ತಲೇ ಇವೆ. ಇದೀಗ ಕೊರೊನಾ ಬಂದಿದೆ. ಇದು ಕೂಡ ಗತಕಾಲದ ಮಹಾಮಾರಿ ರೋಗಗಳಂತೆಯೇ ತೊಲಗಲಿ ಅಂತ ಆಶಿಸೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.