ಕೋಲ್ಕತ್ತಾ/ಭುವನೇಶ್ವರ್: ಕ್ಯಾರ್ ಮತ್ತು ಮಹಾ ಚಂಡಮಾರುತಗಳ ಅಬ್ಬರದ ಬೆನ್ನಲ್ಲೇ 'ಬುಲ್ಬುಲ್' ಚಂಡಮಾರುತ ದೇಶದ ಕರಾವಳಿಗೆ ಅಪ್ಪಳಿಸಿದೆ. ಈ ವರ್ಷ ಭಾರತದ ಕರಾವಳಿ ತೀರಗಳ ಮೇಲೆ ಅಪ್ಪಳಿಸುತ್ತಿರುವ 7 ನೇ ಚಂಡಮಾರುತ ಇದಾಗಿದೆ.
-
Odisha: Fire Service personnel removing uprooted trees from roads in Baliapal area of Balasore. Very severe #CycloneBulbul is 130 km east-southeast of Paradip. pic.twitter.com/ulfpdDKQDI
— ANI (@ANI) November 9, 2019 " class="align-text-top noRightClick twitterSection" data="
">Odisha: Fire Service personnel removing uprooted trees from roads in Baliapal area of Balasore. Very severe #CycloneBulbul is 130 km east-southeast of Paradip. pic.twitter.com/ulfpdDKQDI
— ANI (@ANI) November 9, 2019Odisha: Fire Service personnel removing uprooted trees from roads in Baliapal area of Balasore. Very severe #CycloneBulbul is 130 km east-southeast of Paradip. pic.twitter.com/ulfpdDKQDI
— ANI (@ANI) November 9, 2019
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಬುಲ್ಬುಲ್ ಚಂಡಮಾರುತ ತೀವ್ರಗೊಂಡಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸೈಕ್ಲೋನ್ ತೀವ್ರತೆ ಹೆಚ್ಚಾಗಿದ್ದು, 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ವಿಪರೀತ ಮಳೆಗೆ ಜನ ತತ್ತರಿಸಿದ್ದು, ವಾಹನ ಸಂಚಾರ ಸೇರಿದಂತೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಸಾಧ್ಯತೆ ಇದ್ದು, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಣೆ ಮಾಡಿವೆ. ಭಾನುವಾರದವರೆಗೆ ಚಂಡಮಾರುತದ ಅಬ್ಬರ ಇರುತ್ತದೆ ಎನ್ನಲಾಗಿದೆ.