ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಚಂಡಮಾರುತದಿಂದ ಉಂಟಾದ ಹಾನಿಯಿಂದ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಗಾ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಚಂಡಮಾರುತದಿಂದ ತೀವ್ರ ಹಾನಿಯುಂಟಾಗಿದೆ ಹಾಗೂ ಅಲ್ಲಿನ ಜನರು ತೊಂದರೆಗೊಳಗಾಗಿದ್ದಾರೆ. ಈ ಚಂಡಮಾರುತಕ್ಕೆ ಬಲಿಯಾದವರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ ಹಾಗೂ ಇದರಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ಈ ಎರಡು ರಾಜ್ಯಗಳ ಧೈರ್ಯಶಾಲಿ ಜನರಿಗೆ ನನ್ನ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
-
The widespread devastation caused by #CycloneAmphan in West Bengal & Odisha is disturbing. My condolences to the families of those who have perished & I pray the injured make a speedy recovery. I offer my support to the brave people of these two states in this time of crisis.
— Rahul Gandhi (@RahulGandhi) May 21, 2020 " class="align-text-top noRightClick twitterSection" data="
">The widespread devastation caused by #CycloneAmphan in West Bengal & Odisha is disturbing. My condolences to the families of those who have perished & I pray the injured make a speedy recovery. I offer my support to the brave people of these two states in this time of crisis.
— Rahul Gandhi (@RahulGandhi) May 21, 2020The widespread devastation caused by #CycloneAmphan in West Bengal & Odisha is disturbing. My condolences to the families of those who have perished & I pray the injured make a speedy recovery. I offer my support to the brave people of these two states in this time of crisis.
— Rahul Gandhi (@RahulGandhi) May 21, 2020
ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಭೇಟಿ ನೀಡಿ ಅಂಫಾನ್ ಚಂಡಮಾರುತದಿಂದ ಉಂಟಾದ ಹಾನಿ ಹಾಗೂ ಮುಂದಿನ ಕ್ರಮಗಳನ್ನು ನಿಭಾಯಿಸಲು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಜೀರ್ಣೋದ್ಧಾರ ಕಾರ್ಯಕ್ಕಾಗಿ 1,000 ಕೋಟಿ ರೂ.ಗಳ ನಿಧಿಯನ್ನು ರಚಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ಈ ಚಂಡಮಾರುತದಿಂದಾಗಿ ರಾಜ್ಯದಲ್ಲಿ 72 ಜನರು ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಗಳಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಮಮತಾ ಸರ್ಕಾರ ಘೊಷಿಸಿದೆ.