ETV Bharat / bharat

ಚೀನಾದಿಂದ ಸತತ ಸೈಬರ್ ದಾಳಿ: ಮಹಾರಾಷ್ಟ್ರ ಸೈಬರ್​ ಪೊಲೀಸರಿಂದ ಮಾಹಿತಿ

author img

By

Published : Jun 24, 2020, 11:05 AM IST

ಕಳೆದ ನಾಲ್ಕು ದಿನಗಳಲ್ಲಿ ಚೀನಾದ ಚೆಂಗ್ಡು ನಗರದಿಂದ 40,300 ಸೈಬರ್ ದಾಳಿಗಳು ನಡೆದಿವೆ. ಮಹಾರಾಷ್ಟದ ಸೈಬರ್ ವಿಭಾಗ ನಕಲಿ ವೆಬ್​ಸೈಟ್​ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

cyber attacks from China
ಚೀನಾದಿಂದ ಸತತ ಸೈಬರ್ ದಾಳಿ

ಮುಂಬೈ: ಗಡಿ ವಿಚಾರದಲ್ಲಿ ಭಾರತ -ಚೀನಾ ನಡುವೆ ಉದ್ವಿಗ್ನ ವಾತಾವರಣವಿರುವ ನಡುವೆಯೇ, ಚೀನಾ ಈಗ ಭಾರತದ ಮೇಲೆ ಸೈಬರ್​ ದಾಳಿಗೆ ಮುಂದಾಗಿದೆ. ಕಳೆದ 4 ದಿನಗಳಿಂದ ಸರ್ಕಾರಿ ಕಚೇರಿ, ಬ್ಯಾಂಕ್​, ಸಂವಹನ ವಲಯಗಳ ಮೇಲೆ ಚೀನಾ ಸತತ ಸೈಬರ್​ ದಾಳಿ ನಡೆಸಿರುವುದಾಗಿ ಮಹಾರಾಷ್ಟ್ರ ಸೈಬರ್ ಇಲಾಖೆ ಖಚಿತಪಡಿಸಿದೆ.

ಕಳೆದ ನಾಲ್ಕು ದಿನಗಳಲ್ಲಿ ಚೀನಾದ ಚೆಂಗ್ಡು ನಗರದಿಂದ 40,300 ಸೈಬರ್ ದಾಳಿಗಳು ನಡೆದಿವೆ. ಮಹಾರಾಷ್ಟದ ಸೈಬರ್ ವಿಭಾಗ ನಕಲಿ ವೆಬ್​ಸೈಟ್​ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಚೀನಾ 'ncov2019@gov.in' ನಂತಹ ನಕಲಿ ಲಿಂಕ್​ಗಳ ಮೂಲಕ ವಿವಿಧ ಇಲಾಖೆಗಳ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಧಿಕೃತ ವೆಬ್​ಸೈಟ್​ಗಳನ್ನು ತೆರೆಯುವಾಗ ಜಾಗರೂಕರಾಗಿರಿ. ನಕಲಿ ವೆಬ್​ಸೈಟ್​ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ. ವಿಶೇಷವಾಗಿ ಬ್ಯಾಂಕ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಆನ್​ಲೈನ್​ ಲಾಟರಿ ಹೆಸರಿನಲ್ಲಿ ಮೇಲ್​ ಐಡಿ, ಮೊಬೈಲ್ ಸಂಖ್ಯೆ ಕೇಳುತ್ತಾರೆ ಹಂಚಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.