ಜೈಪುರ (ರಾಜಸ್ಥಾನ): ವಂದೇ ಭಾರತ್ ಮಿಷನ್ ಅಡಿ ದುಬೈನಿಂದ ಜೈಪುರಕ್ಕೆ ಬಂದ ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32 ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ 14 ಕಳ್ಳಸಾಗಾಣಿಕೆದಾರರನ್ನು ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಎಮರ್ಜೆನ್ಸಿ ಲೈಟ್ ಬ್ಯಾಟರಿಗಳಲ್ಲಿ ಒಟ್ಟು 32 ಕೆಜಿ ಚಿನ್ನವನ್ನು ಇರಿಸಲಾಗಿತ್ತು. ಈ ಚಿನ್ನದ ಮೌಲ್ಯ 16 ಕೋಟಿ ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಇಲಾಖೆಯು ಕೇಂದ್ರ ಸರ್ಕಾರದ ಪರವಾಗಿ ವಂದೇ ಭಾರತ್ ಮಿಷನ್ ಮೂಲಕ ವಿದೇಶದಲ್ಲಿ ಸಿಲುಕಿರುವ ರಾಜಸ್ಥಾನಿಯರನ್ನು ರಾಜಸ್ಥಾನಕ್ಕೆ ಕರೆತರುತ್ತಿದೆ.