ಪಂಜಾಬ್: ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಮೇ 3ರವರೆಗೆ ಮುಂದುವರಿದಿದೆ. ಇದರ ಬೆನ್ನಲ್ಲೇ ಪಂಜಾಬ್ ರಾಜ್ಯ ಹೆಚ್ಚುವರಿಯಾಗಿ ಎರಡು ವಾರಗಳ ಕಾಲ (ಮೇ 17ರವರೆಗೆ) ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್, ಪ್ರತಿದಿನ ಬೆಳಗ್ಗೆ 7ರಿಂದ 11ರವರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗುವುದು ಎಂದಿದ್ದಾರೆ.
ದೇಶದಲ್ಲಿ ಈಗಾಗಲೇ ಕೋವಿಡ್ ಸೋಂಕಿತರ ಸಂಖ್ಯೆ 31,332 ತಲುಪಿದೆ. 7,696 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 1,007 ಜನರು ಸಾವನ್ನಪ್ಪಿದ್ದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದ್ದು, ಪಂಜಾಬ್ನಲ್ಲೂ 322 ಪ್ರಕರಣ ಕಂಡು ಬಂದಿವೆ.
ತೆಲಂಗಾಣದಲ್ಲಿ ಈಗಾಗಲೇ ಮೇ 7ರವರೆಗೆ ಲಾಕ್ಡೌನ್ ವಿಸ್ತರಣೆಯಾಗಿದೆ.