ದಂತೇವಾಡ: ಐಇಡಿ ಬಾಂಬ್ ಸ್ಫೋಟಗೊಂಡು ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಛತ್ತೀಸ್ಗಢದ ದಂತೇವಾಡದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬಿಹಾರ ಮೂಲದ ಸಿಆರ್ಪಿಎಫ್ ಯೋಧ ರೋಷನ್ ಕುಮಾರ್ ಎಂಬುವರು ಘಟನೆಯಲ್ಲಿ ಹುತಾತ್ಮರಾಗಿದ್ದಾರೆ. ಸಿಆರ್ಪಿಎಫ್ನ 195ನೇ ಬೆಟಾಲಿಯನ್ನಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.
![CRPF jawan martryered](https://etvbharatimages.akamaized.net/etvbharat/prod-images/iedjuly31_3107newsroom_1564562118_422.jpg)
ಇಂದು ಬೆಳಗ್ಗೆ 6:15ಕ್ಕೆ ದಂತೇವಾಡ-ಜಗ್ದಲ್ಪುರದ ಗಡಿಯಲ್ಲಿರುವ ಮಲೆವಾಹಿ ಸಿಆರ್ಪಿಎಫ್ ಕ್ಯಾಂಪ್ನಿಂದ 700 ಮೀಟರ್ ಅಂತರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಕೆಲಸದಿಂದ ಹಿಂದಿರುಗುತ್ತಿದ್ದ ರೋಷನ್ ಸ್ಫೋಟದಿಂದ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಮತ್ತೋರ್ವ ಜವಾನ್ ಸಹ ಗಾಯಗೊಂಡಿದ್ದು, ಛತ್ತೀಸ್ಗಢದ ಬರ್ಸೂರ್ಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.
.