ETV Bharat / bharat

ಅಪರಾಧಿಯ ಅಂತ್ಯವಾಗಿದೆ, ಇಂಥವರನ್ನು ರಕ್ಷಿಸಿದವರ ಕಥೆ ಏನು?: ಯೋಗಿ ಸರ್ಕಾರಕ್ಕೆ ಪ್ರಿಯಾಂಕಾ ಪ್ರಶ್ನೆ - ಯುಪಿ ಸರ್ಕಾರ

ದುಬೆಯನ್ನು ಬಂಧಿಸಿ ಕಾನ್ಪುರಕ್ಕೆ ಕರೆ ತರುವಾಗ ಪೊಲೀಸ್ ವಾಹನ ಪಲ್ಟಿಯಾಯಿತು. ಈ ವೇಳೆ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾದ. ಅಪಘಾತದಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಐಜಿ ಮೋಹಿತ್ ಅಗರ್‌ವಾಲ್ ತಿಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.

Priyanka Gandhi Vadra
ಪ್ರಿಯಾಂಕಾ ಗಾಂಧಿ ವಾದ್ರಾ
author img

By

Published : Jul 10, 2020, 4:31 PM IST

ನವದೆಹಲಿ: ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಎನ್​ಕೌಂಟರ್ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, 'ಅಪರಾಧಿಯ ಕಥೆ ಮುಗಿದಿದೆ. ಇಂಥಹ ಅಪರಾಧಿಗಳನ್ನು ರಕ್ಷಿಸುವವರ ಬಗ್ಗೆ ಏನು' ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್‌ ಮಾಡಿದ ಪ್ರಿಯಾಂಕಾ, ಅಪರಾಧಿ ಹೋಗಿದ್ದಾನೆ. ಆದರೆ, ಅಪರಾಧ ಮತ್ತು ಅವನನ್ನು ರಕ್ಷಿಸುವವರ ಬಗ್ಗೆ ಏನು ಎಂದು ಪ್ರಶ್ನಿಸಿದ್ದಾರೆ.

  • अपराधी का अंत हो गया, अपराध और उसको सरंक्षण देने वाले लोगों का क्या?

    — Priyanka Gandhi Vadra (@priyankagandhi) July 10, 2020 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್ ಮತ್ತು ವಿಡಿಯೋದಲ್ಲಿ ಯುಪಿಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜಕಾರಣಿ-ಅಪರಾಧ ಮೈತ್ರಿಗಳು ರಾಜ್ಯದ ಮೇಲೆ ಪ್ರಾಬಲ್ಯ ಹೊಂದಿವೆ. ಕಾನ್ಪುರ ಪ್ರಕರಣದಲ್ಲಿ ಈ ಮೈತ್ರಿಯ ಸಂಬಂಧ ಬೆಳಕಿಗೆ ಬಂದಿತು?. ಅಂತಹ ಅಪರಾಧಿಯನ್ನು ಬೆಳೆಸುವಲ್ಲಿ ತೊಡಗಿರುವ ಜನರು ಯಾರು? ಇದನ್ನು ಬಹಿರಂಗಪಡಿಸಬೇಕು. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

  • उप्र की कानून-व्यवस्था बदतर हो चुकी है। राजनेता-अपराधी गठजोड़ प्रदेश पर हावी है। कानपुर कांड में इस गठजोड़ की सांठगांठ खुलकर सामने आई।

    कौन-कौन लोग इस तरह के अपराधी की परवरिश में शामिल हैं- ये सच सामने आना चाहिए।

    सुप्रीम कोर्ट के मौजूदा जज से पूरे कांड की न्यायिक जाँच होनी चाहिए pic.twitter.com/vRHQlsaJ3y

ಕಾನ್ಪುರ ಪೊಲೀಸರ ಹತ್ಯಾಕಾಂಡದ ಪ್ರಮುಖ ಆರೋಪಿ ದುಬೆ ಅವರನ್ನು ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲಾಯಿತು. ದುಬೆಗೆ ರಕ್ಷಣೆ ನೀಡಿದವರ ಬಗ್ಗೆ ಸತ್ಯ ತಿಳಿಯಲು ಸಿಬಿಐ ತನಿಖೆಗೆ ಪ್ರಿಯಾಂಕಾ ಅವರು ಒತ್ತಾಯಿಸಿದ್ದರು.

ಎಂಟು ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣವನ್ನು ನಿಭಾಯಿಸುವಲ್ಲಿ ಉತ್ತರಪ್ರದೇಶದ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.