ಆಂಧ್ರಪ್ರದೇಶ: ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರ ಮನಡಾಲ್ನ ಚಾಲ್ಲಿಮೇಪಲ್ಲಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ.
ರಾಮಂಜನೇಯುಲು ಎಂಬುವರು ಈ ಹಸುವನ್ನು ಸಾಕಿದ್ದಾರೆ. ಇವರ ಹಸು ಒಂದೇ ಸಮಯದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದೆ.
ಈ ಘಟನೆಯಿಂದ ಅಲ್ಲಿನ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ತಾಯಿ ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ರಾಮಂಜನೇಯುಲು ಅವರು ಹೇಳಿದ್ದಾರೆ.