ETV Bharat / bharat

ಜಗತ್ತಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 12 ಲಕ್ಷಕ್ಕೆ ಏರಿಕೆ

ಪ್ರಪಂಚದಲ್ಲಿ 12 ಲಕ್ಷ ಕೋವಿಡ್​ ಸೋಂಕಿತರು ಬಲಿಯಾಗಿದ್ದು, ಅಮೆರಿಕದಲ್ಲೇ 2,36,471 ಮಂದಿ ಮೃತಪಟ್ಟಿದ್ದಾರೆ..

Covid killed 12 lakh in the world
ಜಗತ್ತಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 12 ಲಕ್ಷಕ್ಕೆ ಏರಿಕೆ
author img

By

Published : Nov 2, 2020, 4:36 PM IST

ಹೈದರಾಬಾದ್​: ಜನರ ಜೀವ ನಶೈಲಿಯನ್ನೇ ಬದಲಾಯಿಸಿದ ಮಾರಣಾಂತಿಕ ಕೊರೊನಾ ವಿಶ್ವದಾದ್ಯಂತ ಬರೋಬ್ಬರಿ 12 ಲಕ್ಷ (12,05,206) ಜನರನ್ನು ಬಲಿ ಪಡೆದಿದೆ. ಒಟ್ಟು 4,68,10,375 ಮಂದಿಗೆ ಸೋಂಕು ಅಂಟಿದ್ದು, ಇವರಲ್ಲಿ 3,37,54,231 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 94,73,911 ಇದ್ದು, ಮೃತರ ಸಂಖ್ಯೆ 2,36,471ಕ್ಕೆ ಏರಿಕೆಯಾಗಿದೆ.

ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 82,29,322 ಕೇಸ್​ ಪತ್ತೆಯಾಗಿವೆ. 1,22,642 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 55,45,705 ಪ್ರಕರಣ ಹಾಗೂ 1,60,104 ಸಾವು ವರದಿಯಾಗಿವೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 16,36,781 ಕೇಸ್​​ಗಳಿವೆ. 28,235 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Covid killed 12 lakh in the world
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 86,021 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.